ರೇಖೆಗಳ ಕುಣಿಸಿದ ರಾವ್ ಬೈಲ್ ಇನ್ನಿಲ್ಲ

ಧಾರವಾಡ ದಲ್ಲಿ ನೆಲೆಸಿದ್ದ ಕಲಾವಿದ ರಾವ್ ಬೈಲ್ ತೀರಿಕೊಂಡಿದ್ದಾರೆ..

ಅವರಿಗೆ ನನ್ನ ಗೌರವಪೂರ್ಣ ನಮನಗಳು ..

ನನ್ನ ಎರಡು ಪುಸ್ತಕಗಳಿಗೆ ಅವರು ರಚಿಸಿದ ಚಿತ್ರ ಗಳು ಮುಖಪುಟವನ್ನಲಂಕರಿಸಿವೆ…

ಕಾಡು, ಕಡಲು ಮತ್ತು ಪಿಂಜರ್

-ಎಲ್ ಸಿ ಸುಮಿತ್ರಾ 

‘ಹಸಿರು ಕ್ರಾಂತಿ ,ಬರೀ ಭ್ರಾಂತಿ ‘ ಎಂಬ ನನ್ನ ಮೊದಲ ಲೇಖನ ತರಂಗದಲ್ಲಿ ಪ್ರಕಟವಾಗಿತ್ತು.

ಲೇಖನದ ಚಿತ್ರ ರಾವ್ ಬೈಲ್ ರದು.

ನಡು ಬಗ್ಗಿಸಿ ಭತ್ತದ ಪೈರನ್ನು ನಾಟಿ ಮಾಡುವ ಕೃಷಿ ಮಹಿಳೆಯ ಚಿತ್ರವನ್ನು ಕೆಲವೇ ಗೆರೆಗಳಲ್ಲಿ ಅದ್ಭುತ ವಾಗಿ ಮೂಡಿಸಿದ್ದರು.

ನನ್ನ ಲೇಖನ ಪ್ರಕಟವಾಯಿತು ಎಂಬ ಖುಷಿಗಿಂತ ರಾವ್ ಬೈಲ್ ನನ್ನ ಲೇಖನಕ್ಕೆ ಚಿತ್ರ ಬರೆದಿದ್ದಾರೆ ಎಂಬ ಸಂಭ್ರಮ ವೇ ನನ್ನದಾಗಿತ್ತು.

ಅವರು ಬರೆದ ಚಿತ್ರದ ಮೂಲಕ ಅವರ ನನ್ನಲ್ಲಿ ನೆನಪು ಸದಾ ಹಸಿರು

-ಜಿ ಕೃಷ್ಣಪ್ರಸಾದ್ 

Leave a Reply