ತೇಜಸ್ವಿ ಎಡಗೈ ಶಾಸ್ತ್ರ ಮಾಡಲಿಲ್ಲ..

ತೇಜಸ್ವಿ ನೆನಪು ….

ಕವಿಶೈಲದಲ್ಲಿ ಅಣ್ಣನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಎಲ್ಲಾ ಚಿತೆಯಮೇಲೆ ಒಂದೊಂದು ಗಂಧದ ಚಕ್ಕೆಯನ್ನಿಡುತ್ತಿದ್ದರು.

ನನಗೂ ಹೇಳಿದರು.

ನನಗೆ ಇದೊಂದು ಶಾಸ್ತ್ರ ಎಂದು ಗೊತ್ತಿರಲಿಲ್ಲ. ಅಂತಿಮ ಗೌರವ ಈ ರೀತಿ ಸಮರ್ಪಿಸುತ್ತಿದ್ದಾರೆ ಎಂದು ಹೋದೆ‌.

ಚಕ್ಕೆ ತೆಗೆದು ಇಡುತ್ತಾ ಇರಬೇಕಾದರೆ ಹಿಂದಿನಿಂದ ಯಾರೋ “ಅಯ್ಯಯ್ಯೋ ಬಲಗೈಲಿ ಇಡಬಾರದು, ಎಡಗೈಲಿ ಇಡಬೇಕು” ಎಂದರು.

ಹಿಂದಿರುಗಿ ನೋಡಿದೆ! ನನ್ನ ಮಿತ್ರರಾದ ಡಿ.ಬಿ. ಚಂದ್ರೆಗೌಡರೇ ನಿಂತಿದ್ದಾರೆ!

ನನಗೆ ಅಣ್ಣನ ಇಡೀ ಜೀವನದ ಬೋಧನೆ, ಅವಿರತ ಹೋರಾಟ, ಕೊಟ್ಟ ಕೊನೆಯ ಅವರ ಸಂದೇಶ ಎಲ್ಲ ಮನಃಪಲಟದಲ್ಲಿ ಒಂದು ಕ್ಷಣ ಸುಳಿದುಹೊಯ್ತು. ಒಕ್ಕಲಿಗರ, ಶೂದ್ರರ, ದೌರ್ಬಲ್ಯಗಳನ್ನು ನೆನೆದು ದುಃಖವಾಯ್ತು.

ಇದು ಮಾತಿಗೆ ಸಮಯವಲ್ಲವೆಂದು ಚೆನ್ನಾಗಿ ಗೊತ್ತಿದ್ದೂ “ಚಂದ್ರೇಗೌಡರೆ, ಕುವೆಂಪು ಇಡೀ ಜೀವಮಾನ ಹೇಳಿದ್ದೆಲ್ಲಾ ನಿರರ್ಥಕ, ನಾನೀಗ ಎಡಗೈಯಲ್ಲಿ ಇಟ್ಟರೆ! ಏನು ಮಾಡಲಿ ಹೇಳಿ!” ಎಂದೆ. ಚಂದ್ರೇಗೌಡರಿಗೆ ನನ್ನ ಪ್ರಶ್ನೆಯ ಅರ್ಥ ತಾಗಿರಬೇಕು.

“ನಿಮ್ಮ ಇಷ್ಟ, ಸ್ಸಾರಿ!!” ಎಂದರು.

ನಾನು ಎಡಗೈಲಿ ಇಡಲಿಲ್ಲ.

– ಪೂರ್ಣಚಂದ್ರ ತೇಜಸ್ವಿ

। ಅಣ್ಣನ ನೆನಪು, ಪುಟ 61 ।

1 Response

  1. Anasuya M R says:

    ಕುವೆಂಪು ಮತ್ತು ತೇಜಸ್ವಿಯವರು ಬರೆದಂತೆ
    ಬದುಕಿದವರು

Leave a Reply

%d bloggers like this: