ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ..

ಸುದರ್ಶನ್ ಕುಮಾರ್ 

ಬಸವನಗುಡಿಯ ಪರಿಚಯ ಇಲ್ಲದವರು ಹೋಗಲೇಬೇಕಾದ ಒಂದು ಒಳೆಯ ಹೋಟೆಲ್ ಗಾಂಧಿಬಝರ್ ನಲ್ಲಿದೆ.

ಹಳಬರು ಅದನ್ನು “ಭಟ್ಟರ ಹೋಟೆಲ್” ಅಂತಾರೆ. ಅದು “ಮಹಾಲಕ್ಷ್ಮಿ ಟಿಫನ್ ರೂಮ್.

ಬೆಳಗಿನ ಇಡ್ಲಿ ವಡೆ ಸಾಂಬಾರ್ ಸವಿಯುವ ಆನಂದವೇ ಬೇರೆ.

“ಇಟ್ ಲಿಟರಲ್ಲಿ ಸ್ಟಾರ್ಟ್ಸ್ ಯುವರ್ ಡೇ” ಉಪ್ಪಿಟು, ಕೇಸರಿಬಾತ್, ಮಸಾಲೆ ದೋಸೆ, ಅಡಿಷನಲ್ ತಿಂಡಿಗಳು ನನ್ನಂತಹ ತಿಂಡಿ ಪೋತರಿಗೆ ಬಹಳ ಪ್ರಿಯ.

ಕೆಲವೊಮ್ಮೆ ಇವೆಲವನ್ನು ಒಂದೇ ಸಲ ನಿಧಾನವಾಗಿ ತಿಂದ ದಿನಗಳಿವೆ. ಮಧ್ಯಾಹ್ನ ಚಪಾತಿ ಚಟ್ನಿ ಸಾಗು ಹಾಗು ಪಲಾವ್ ತಿನ್ನುವುದೇ ಸೊಗಸು. ಬಹಳ ಮುಖ್ಯವಾಗಿ ಇಡೀ ದಿನ ಸಿಗುವ “ಖಾಲಿ ದೋಸೆ ” ಇಲ್ಲಿಯ ಸ್ಪೆಷಲ್. ಸಂಜೆ ಹೊತ್ತು ಈ ಖಾಲಿ ದೋಸೆಗೆ ಬಹಳ ಡಿಮ್ಯಾಂಡ್.

ಸಂಜೆಯ ಸಾಂಬ್ರಾಣಿ ಹೊಗೆ ಕೀಟಗಳಿಂದ ಹೊರತಾಗಿ ಘಮ ಘಮ ಸುವಾಸನೆಯಿಂದ ಕೂಡಿರುತ್ತದೆ.

ಆಧುನಿಕತೆಯ ಕೃತಕತೆಯ ಹಂಗಿಲದ ಈ ಹೋಟೆಲ್ಗೆ ಒಮ್ಮೆ ಭೇಟಿ ಕೊಟ್ರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಟ್ರೈ ವನ್ಸ್

Leave a Reply