ಅವಳ ಒಡಲಲ್ಲಿ ಬೆಂಕಿ ಇತ್ತು..

ಡ್ರಾಮಾ ಡೈರಿ 

ಕಿರಣ್ ಭಟ್ 

Womb of fire
South Africa
Directed by: Sara Matchett.

ಮಹಾಭಾರತ ದ ದ್ರೌಪದಿಯ ಬದುಕಿನ ಹಿನ್ನೆಲೆಯಲ್ಲಿ ಕಟ್ಟಲ್ಪಟ್ಟ ಏಕವ್ಯಕ್ತಿ ಪ್ರದರ್ಶನ ಇದು.

ಸ್ವಗತ ಮತ್ತು ವರ್ತಮಾನದ ವಾಸ್ತವಗಳ ನಿರೂಪಣೆಯ ಶೈಲಿಯಲ್ಲಿ ಪರಿಧಿಯ ಅಂಚಿನಲ್ಲಿರುವ ಇಬ್ಬರು ಮಹಿಳೆಯರ ಬದುಕಿನ ಕತೆಯ ಮೇಲೆ ಹೆಣೆದ ನಾಟಕವಿದು.

ಹದಿನೇಳನೆಯ ಶತಮಾನದಲ್ಲಿಬದುಕಿದ್ದ ಮೊದಲ ಮಹಿಳಾ ಗುಲಾಮ‌ಖೈದಿ Katrijin Pulicat ಳ ಭಾರತದಿಂದ ಕೇಪ್ ಟೌನ್ ವರೆಗಿನ ಜೀತದ ಪಯಣವನ್ನ ಹುಡುಕುತ್ತಲೇ, zara ಎನ್ನುವ Kohekohen ಸೇವಕಿಯ ಯಾತನೆಯ ದಿನಗಳ ದರ್ಶನ ಮಾಡಿಸುವ ಕೃತಿಯಿದು.

Katrijin ತನ್ನ ಗೆಳೆಯ ನಿಂದ ದೌರ್ಜನ್ಯಕ್ಕೊಳಪಡುವದನ್ನ ಪ್ರತಿಭಟಿಸಿ ಆತನನ್ನ ಚಚ್ಚಿ ಕೊಂದವಳು ಮತ್ತು ಆ ಕಾರಣಕ್ಕಾಗಿಯೇ ಮರಣದಂಡನೆಗೊಳಪಟ್ಟವಳು. ಆದರೆ ಮರಣದಂಡನೆಯೂ ಮುಂದೆ ಹೋಗಿ ಕೇಪ್ ಟೌನಿಗೆ ಮತ್ತೆ ಜೀತಕ್ಕೆ ತಳ್ಳಲ್ಪಟ್ಟು ಯಾತನೆ ಅನುಭವಿಸಿದವಳು. Zara ಎನ್ನುವ ಸೇವಕಿ ಕೂಡ ಯಾತನೆ ಸಹಿಸಲಾರದೆ ಆತ್ಮಹತ್ಯೆ ಗೆ ಪ್ರಯತ್ನಿಸಿ ವಿಫಲಳಾದವಳು.ಆ ಪ್ರಯತ್ನಕ್ಕಾಗಿ ಮತ್ತೆ ಶಿಕ್ಷೆಗೊಳಗಾದವಳು.

ಈ ನಾಟಕ ಇಂಥ ಪರಿಧಿಂಚಿನಲ್ಲಿರುವ ಮಹಿಳೆಯರ ದನಿಗಳನ್ನ ಕೇಳಿಸುವ ಪ್ರಯತ್ನ ಮಾಡುತ್ತದೆ. ಕಾಲದ ಮುಂದೆಯೂ ಹಿಂದೆಯೂ ಚಲಿಸುತ್ತ ಛಿದ್ರವಾದ ಮಹಿಳೆಯ ದೇಹವನ್ನ ಮತ್ತೆ ಮತ್ತೆ ಕಟ್ಟುತ್ತ, ಅದಕ್ಕೆ ಮಾತು ಕೊಡುವ ಕೆಲಸ ಮಾಡುತ್ತದೆ. ಆರ್ತನಾದದ ನೋವಿನ ದನಿಗಳನ್ನ ಮೀರಿ ಆಕ್ರೋಶದ ಕೂಗಾಗುವ ಶಕ್ತಿ ನೀಡುತ್ತದೆ.

Leave a Reply