ಅಯ್ಯ ಕೇಳ್ತ ಒಂದನಿ ಬತ್ರ?

ಗೀತಾ ಹೆಗ್ಡೆ ಕಲ್ಮನೆ 

ಎಂತದೆ ನಿಂದು ಇನ್ನೂ ಚಾ ಕೊಟ್ಟಿದ್ದಿಲ್ಲೆ
ಬಗ್ನೆ ಹೇಳು ಯಾ ತ್ವಾಟಕ್ಕೋಗವು.

ಅಲ್ದ್ರ ಗನಾ ಜೀರಗೆ ಮಿಡಿ
ಓರ್ಮನೆ ಮಾಣಿ ತಂದ್ಕೊಟ್ಟಿದ್ದಾ ಹೇಳಿದ್ನಲಿ
ನೀವೆಲ್ಲಿದ್ರಿ ಪ್ಯಾಟಿಗೆ ಹೋಗ ಗಡಬಿಡಿಲಿ
ಯನ್ ಮಾತು ಕಿವಿಗೇ ಬಿಜ್ಜಿಲ್ಯಾಂಕಾಣ್ತು..

ಹ್,ಹೌದು
ಈಗೆಂತಾತು ಹೇಳಿ ನೀ ಯನ್ ಕರದ್ದೆ?
ಮಿಡಿ ಉಪ್ಪಿಗಾಕಿದ್ದಿಲ್ಯನೆ..
ಶಿವನೆ! ಎಲ್ಲಾ ಹಾಳಾಗೋತ ಎಂತದು?

ಇಲ್ಲ್ರ ಮಾರಾಯರಾ!
ಅದಕ್ಕೇ ಕರದ್ದಿ
ಹಾಂಗೆಂತ ಆಜಿಲ್ಲೆ,
ನೀವ್ ಒಂದ್ಸಲ ಬತ್ರ ಇಲ್ಲಿ
ಉಪ್ಪಿನಕಾಯಿ ರುಚಿ ಹ್ಯಾಂಗಾಜು ನೋಡಿ
ಬಗೆಲಿ ಇಂಗಿನ ಒಗ್ಗರಣೆನೂ ಹಾಕಿದ್ದಿ.

ತ್ವಟಾ..ತ್ವಟಾ..ಊಹ್.ಊಹ್..
ಖಾರಾ ಜೋರಾಜಲೇ…
ಜೀರಿಗೆ ಪರಿಮಳ ಘಂ…ಹೇಳ್ತು..
ಉಪ್ಪು ಸಾಕು ಆದರೂ…….

ನಿಂಗಕ್ಕಿಗೆ ಯಾವಾಗಲೂ ಹಂಗೇಯಾ…
ಯಾ ಎಷ್ಟು ಚೋಲೋ ಮಾಡಿದ್ರೂವಾ
ಇನ್ನೊಬ್ಬರ ಮನೆ ಉಪ್ಪಿನಕಾಯೇ ರುಚೀ ಇದ್ದು ಹೇಳ್ತಿ.

ಅದು ಹಾಂಗಲ್ದೆ…..

ನೀವ್ ರಾಗ ಹಾಕಡಿ ಅಂದಿ
ಯಂಗೆಲ್ಲಾ ಗೊತ್ತಿದ್ದು…
ಹಾಂಗೂ ಇಲ್ಲೆ ಹಿಂಗೂ ಇಲ್ಲೆ ಈ ಗಂಡಸರೇ ಹೀಂಗೆ!

ತಗಳಿ ಬೋಗಣಿ ತುಂಬಾ ಇರ ಕೆಂಪುಪ್ಪಿನಕಾಯಿ
ಶಣ್ಭರಣಿಗ್ ಸ್ವಲ್ಪ ದೊಡ್ಭರಣಿಗ್ ಸ್ವಲ್ಪ ತುಂಬಿ ಬಟ್ಟೆ ಕಟ್ಟಿದ್ದಿ.

ಇಲ್ನೋಡಿ ದೊಡ್ಡ ಭರಣಿ ಹಿಂದಿಡಿ
ಶಣ್ ಭರಣಿ ಮುಂದಿಡಿ ಎದರ್ಖರ್ಚಿಗಾಗ್ತು
ಪ್ಲಾಸ್ಟಿಕ್ ಬಾಟ್ಲಲ್ಲಿರ ಮಿಡಿ ಮಗಳು ಬೇಕು ಹೇಳಿದ್ದು
ನಿಧಾನಕ್ಕೆ ನಾಗಂದಿಗೆ ಮ್ಯಾಲಿಡಿ
ಅದರುನೋಡ್ತಿ!!

1 Response

Leave a Reply

%d bloggers like this: