ಹಿರಿಯರಾದ ಪ್ರಭುಶಂಕರ್ ತುಂಬು ಬಾಳಿನ ನಂತರ ವಿದಾಯ ಹೇಳಿದ್ದಾರೆ..

ಡಾ.ಪ್ರಭುಶಂಕರರ ನಿಧನಕ್ಕೆ ನನ್ನ ಹೃದಯದಾಳದ ಸಂತಾಪಗಳು.

ಕನ್ನಡಕ್ಕೆ ಅವರ ಪ್ರಧಾನ ಕೊಡುಗೆ ಕುವೆಂಪುರವರ ಮಹತ್ವದ ಕಲ್ಪನೆಯ ಕೂಸಾದ ಪ್ರಸಾರಾಂಗದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಕರ್ನಾಟಕದ ಎಲ್ಲ ವಿವಿಗಳಿಗೂ ಮಾದರಿಯನ್ನಾಗಿ ರೂಪಿಸಿದ ಪರಿ.

ಅದರ ಮೂಲಕ ಅದೆಷ್ಟು ವಿಶ್ವದ ಅತ್ಯುತ್ತಮ ವಿಜ್ಞಾನ, ಸಾಮಾಜಿಕ ವಿಜ್ಞಾನದ ಕೃತಿಗಳು ಕನ್ನಡಕ್ಕೆ ಅನುವಾದವಾದವು,
ವಿವಿಧ ಮಾಲೆಗಳ ಮೂಲಕ ಕನ್ನಡದ ಉತ್ತಮ ವಿದ್ವಾಂಸರಿಂದ ಅದೆಷ್ಟು ಹೊಸ ಕೃತಿಗಳು ಬರೆಯಲ್ಪಟ್ಟವು ! ಇವು ಕನ್ನಡಕ್ಕೆ ದೊಡ್ಡ ಕಾಣಿಕೆ.

ಅವುಗಳನ್ನು ಈಗ ಪುನರ್ ಮುದ್ರಣ ಆದರೂ ಕನ್ನಡದ ಮೂಲಕ ಅರಿವನ್ನು ಪಡೆದುಕೊಳ್ಳುವವರಿಗೆ ಅಮೂಲ್ಯ .

ಅದರ ಜೊತೆಗೆ ಹಿರಿಯಣ್ಣನವರ ಎರಡು ತತ್ವಶಾಸ್ತ್ರದ ಕೃತಿಗಳನ್ನು ಅವರು ಅನುವಾದ ಮಾಡಿದ್ದು ಕೂಡಾ ಕನ್ನಡಕ್ಕೆ ಗಮನಾರ್ಹ ಕೊಡುಗೆ. ಅದನ್ನು ಆದಷ್ಟು ನಿಖರ ಹಾಗೂ ಸರಳವಾಗಿ ಅನುವಾದ ಮಾಡಲು ಶ್ರಮಿಸಿದ್ದಾರೆ. ಇಂತಹ ಕೃತಿಗಳನ್ನು ಅನುವಾದ ಮಾಡುವ ಧೈರ್ಯ ಎಷ್ಟು ಜನರಿಗಿದ್ದೀತು. ಅದಕ್ಕಾಗಿ ಪಟ್ಟ ಶ್ರಮ ಕಡಿಮೆಯೇ ?

ಇವುಗಳ ಜೊತೆಗೆ ಅವರ ಪಿಎಚ್ಡಿ ಮಹಾಪ್ರಬಂಧ ಕನ್ನಡದಲ್ಲಿ ಭಾವಗೀತೆ, ಅವರ ನಾಟಕ ಅಂಗುಲಿಮಾಲ, ಇತರ ಕೃತಿಗಳನ್ನು ನೆನಪಿಸಿಕೊಳ್ಳೋಣ.

-ಜಿ ಎನ್ ನಾಗರಾಜ್ 

 

ಹಿರಿಯರಾದ ಪ್ರಭುಶಂಕರ್ ತುಂಬು ಬಾಳಿನ ನಂತರ ವಿದಾಯ ಹೇಳಿದ್ದಾರೆ..

ಅವರ ಪುಸ್ತಕಗಳಲ್ಲಿ’ಅಮೆರಿಕಾದಲ್ಲಿ ನಾನು, ಶಾಂತಿ’  ಮತ್ತು ‘ಜನ -ಮನ’ ನನಗೆ ಇಷ್ಟವಾದ ಪುಸ್ತಕಗಳು.. ಅವರು ಬರೆದ ಕನ್ನಡ-ಇಂಗ್ಲಿಷ್ ನಿಘಂಟು ತುಂಬಾ ಉಪಯುಕ್ತವಾಗಿದೆ.

ಅವರು ಹಸ್ತಾಕ್ಷರ ಹಾಕಿಕೊಟ್ಟ ನಿಘಂಟು ನಮ್ಮ ದಿನನಿತ್ಯದ ಸಂಗಾತಿಯಾಗಿದೆ. ‘ಜನ-ಮನ’ದಲ್ಲಿ ಬರುವ ಬನಾರಸ್ ನಲ್ಲಿ ಪರಿಚಿತರಾದ ಹರಿದಾಸರು ಇವರ ಮನೆಗೆ ಬಂದು,ಮಕ್ಕಳು ಅಸಿತಾ, ನಿವೇದಿತಾರ ಸಹಾಯದಿಂದ ಮಾಡುತ್ತಿದ್ದ ಹಸಿ ಬಠಾಣಿ ಅವಲಕ್ಕಿ ಉಪ್ಪಿಟ್ಟು, ಆ ಸನ್ನಿವೇಶದ ವಿವರಗಳು ಪ್ರಭುಶಂಕರ್ ಅವರೊಳಗೆ ಇದ್ದ ಮಗುವಿನ ಮನಸ್ಸನ್ನು ಪರಿಚಯಿಸುತ್ತದೆ..

ಅಂಬಳೆ ವೆಂಕಟರಾಮ್ ತರಹದ ಅಪರೂಪದ ವ್ಯಕ್ತಿ ಚಿತ್ರಗಳಿವೆ. ‘ಅಮೇರಿಕಾದಲ್ಲಿ ನಾನು, ಶಾಂತಿ’ಯಲ್ಲಿ ಭಾರತೀಯ ಮತ್ತು ಅಮೆರಿಕದ ಸಂಸ್ಕೃತಿಗಳನ್ನು ವಿಶ್ಲೇಷಣೆ ಮಾಡುವ ಅಪರೂಪದ ಪುಸ್ತಕ.

 

ನೂರೊಂದು ವಚನಗಳನ್ನು ಇಂಗ್ಲಿಷ್, ಫ್ರೆಂಚ್‌ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದ ಮಾಡಿದ್ದಾರೆ. ಅಂಗುಲಿಮಾಲ ಅವರ ಪ್ರಸಿದ್ದ ನಾಟಕ. ಕೊನೆಗಾಲದಲ್ಲಿ ಅವರು ಮೈಸೂರು ರಾಮಕೃಷ್ಣ ಆಶ್ರಮದ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು..

ಅವರ ಮನೆಗೆ ಕೆಲವು ವರ್ಷಗಳ ಹಿಂದೆ ಹೋದಾಗ ಕನ್ನಡ-ಇಂಗ್ಲಿಷ್ ನಿಘಂಟು ಮತ್ತು ಮಗಳು ಅಸಿತಾ ಬರೆದ beyond the call of voice ಪುಸ್ತಕಗಳನ್ನು ಸ್ವಹಸ್ತಾಕ್ಷರ ಸಹಿತ ನಮಗಿಬ್ಬರಿಗೆ ಕೊಟ್ಟರು.

-ಎಲ್ ಸಿ ಸುಮಿತ್ರಾ 

3 Responses

  1. H S Eswara says:

    Prabhushankar was my teacher, well wisher and a family friend. I had known him from 1954, the year I came to study my junior inter in Yuvaraja’s College. Incidentally, he was my first college teacher and a great one. He taught me Chaduranga’s Sarvamangala. Later, we lived together on Gangotri Campus for several years. His wife Dr. Shanta was a fine human being and my two daughters grew up under her medical care. Dr. Prabhushankar was instrumental in getting my Ph.D. thesis published through Prasaranaga. What a fine man he was: ever caring, humorous, and an epitome of all lovable values. I cherish your fond memories, Sir. HS Eswara

  2. guest says:

    RIP, Prabhushankara was blessed to have Shantha as not only his wife, mentor, ….Very fond memories of Shantha.

  3. k.Satyanarayana says:

    His profiles of friends and Close associates are the best of its kind in Kannada.Profile Of Ambale Venkataram is very moving and needs to be read by youngsters.He did so much for Kuvempus ideas and personality. Yet, when it came to the crunch Kuvempus followers never ackgd this and shared all spoils among themselves.He has worked and written on AUROBINDO also which many are aware.

Leave a Reply

%d bloggers like this: