ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ..

ಆನಂದ್

ಇಕ್ಬಾಲ್…

ಇಂಥದ್ದೊಂದು ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ…

ಹೌದು.. ಇಂಥದ್ದೊಂದು ಅದ್ಭುತವಾದ ಚಿತ್ರ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ.. ಇಷ್ಟು ದಿನ ಈ ಸಿನಿಮಾ ನೋಡದೆ ಇರಲು ಇದು ಕನ್ನಡದಲ್ಲಿ ಇರದೇ ಹೋದದ್ದು ಕಾರಣ…

ಇದೀಗ ZEE 5 ನಲ್ಲಿ ಈ ಸಿನಿಮಾ ನೋಡಲು ಅವಕಾಶ ಆಯ್ತು.. ಮೂಲ ಹಿಂದೀ ಸಿನಿಮಾವನ್ನು ಕನ್ನಡದಲ್ಲಿ ನೋಡಲು ಸಾಧ್ಯವಾಯಿತು.. ಹೌದು.. ಇಲ್ಲಿ ಬೇರೆ ಬೇರೆ ಭಾಷೆಯ ಹಲವಾರು ಚಿತ್ರಗಳಿವೆ.. ಅವುಗಳಲ್ಲಿ ಬಹಳಷ್ಟನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಲಾಗಿದ್ದು ಕನ್ನಡದಲ್ಲಿಯೇ ನೋಡಬಹುದಾಗಿದೆ..

ಡಬ್ಬಿಂಗ್ ಗುಣಮಟ್ಟ ಸಕ್ಕತ್ತಾಗಿ ಇದ್ದು, ಕನ್ನಡದ ಸಿನಿಮಾ ನೋಡಿದ ಅನುಭವವನ್ನೆ ಕೊಟ್ಟಿತು..

ಕಿವುಡು ಮೂಗ ಪ್ರತಿಭಾವಂತ ಹಳ್ಳಿಗಾಡಿನ ಯುವಕನೊಬ್ಬ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಕನಸನ್ನು ನನಸು ಮಾಡಿಕೊಳ್ಳುವ ಕಥನ ಇದರಲ್ಲಿದ್ದು, ಕಪಿಲ್ ದೇವ್ ಕೂಡಾ ಒಂದು ಸಣ್ಣ ಪಾತ್ರದಲ್ಲಿ ಇದ್ದಾರೆ..

ಸಾಕಷ್ಟು ಯುವಕರಿಗೆ ಸ್ಫೂರ್ತಿಯಾಗಬಲ್ಲ ಈ ಚಿತ್ರವನ್ನು ಕನ್ನಡದಲ್ಲಿ ನಮ್ಮೂರುಗಳಲ್ಲಿ ಬಿಡುಗಡೆ ಮಾಡಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅನ್ನಿಸಿದ್ದು ನಿಜಾ..

ಕನ್ನಡಕ್ಕೆ ಡಬ್ಬಿಂಗ್ ಬರಲಿ.. ಅನ್ನುವ ಕಾಲ ಮುಗಿಯಿತು.. ಡಬ್ಬಿಂಗ್ ಬಂದಾಯಿತು.. ಇದು ಮುಖ್ಯವಾಹಿನಿಗೆ ಬರಲಿ ಅಷ್ಟೇ.. ZEE5 ಮತ್ತು ತಂಡಕ್ಕೆ, ಅಚ್ಚುಕಟ್ಟಾಗಿ ಕನ್ನಡಕ್ಕೆ ಡಬ್ಬಿಂಗ್ ಮಾಡಿದವರಿಗೆ ಧನ್ಯವಾದಗಳು…

Leave a Reply