ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು.

ಚಿದಂಬರ ನರೇಂದ್ರ 

ಅಂಗಳದಲ್ಲಿ ಬಂದಿಳಿದ ಭಕ್ತರ ದಂಡು, ವಿಮಾನ ಕಂಡು, ದೇವರಿಗೆ ಭಯ ಶುರುವಾಗಿತ್ತು.
ಜೊತೆಗೆ ಬಂದ ಹೆಜ್ಜೆಗಳ ರಕ್ತದ ಓಕಳಿ ರಂಗನ್ನು ಕಂಡು, ದೇವರಿಗೆ ಭಯ ಶುರುವಾಗಿತ್ತು.

ಹಸಿದು ಬಂದವರನ್ನು ಸಂತೈಸುವುದು ದೇವರ ಕೆಲಸ, ಅದು ದೇವರಿಗೂ ಗೊತ್ತು
ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು.

ಉಪವಾಸಕ್ಕೊಂದು ಘನತೆ ತಂದುಕೊಟ್ಟವ ಓಡಾಡಿದ ನೆಲದಲ್ಲಿ
ಬಹುಜನರ ಊಟ ಹೇಸಿಗೆ ಎನ್ನುವವ ಕೈ ಮುಗಿದು ನಿಂತದ್ದನ್ನು ಕಂಡು, ದೇವರಿಗೆ ಭಯ ಶುರುವಾಗಿತ್ತು.

ಮೈತುಂಬ ಸೂಟು ಜನಸೇವೆಗಾಗಿ ಎನ್ನುವ ದೇಶಭಕ್ತರು
ತನ್ನ ಮುಂದೆ ಬೆತ್ತಲಾಗಿ ರಾಜಕಾರಣ ಮಾಡುವುದ ಕಂಡು, ದೇವರಿಗೆ ಭಯ ಶುರುವಾಗಿತ್ತು.

ದೇವರಿದ್ದಾನೋ, ಇಲ್ಲವೋ ಎಂಬ ಸತ್ಯ, ದೇವರಿಗೇ ಗೊತ್ತು
ಜಂಗಮನಿಗೊಂದು ಗುಡಿ ಕಟ್ಟುವ ಜನರ ಸೋಗಲಾಡಿತನ ಕಂಡು ದೇವರಿಗೆ ಭಯ ಶುರುವಾಗಿತ್ತು.

5 Responses

 1. Anasuya M R says:

  ವಾಸ್ತವಿಕತೆಗೆ ಹಿಡಿದ ಕೈಗನ್ನಡಿಯಾಗಿದೆ

 2. Shreedevi keremane says:

  ಚೆನ್ನಾಗಿದೆ

 3. 8884542542 says:

  ಪದ್ಯ ತಲೆ ಬರಹ

 4. Suma KB says:

  too good, how apt

 5. nutana doshetty says:

  devarigoo bhaya..

  chennagide

Leave a Reply

%d bloggers like this: