ಫುಲೆ ಮನೆ ಈಗ ಮ್ಯೂಸಿಯಂ

ಗಾಯತ್ರಿ ನಾಗರಾಜರಾವ್ 

ಭಾರತದ ಚರಿತ್ರೆಯಲ್ಲಿ ಪ್ರತಿಯೊಬ್ಬರೂ ನೆನಪಿಡಲೇಬೇಕಾದ ಮಹಾನ್ ಚೇತನಗಳು ಜೋತಿರಾವ್ ಬಾಫುಲೆ ಮತ್ತು ಸಾವಿತ್ರಿಬಾಯಿ ಫುಲೆ.

ಹತ್ತೊಂಭತ್ತನೆಯ ಶತಮಾನದಲ್ಲಿ ಕೆಳಜಾತಿ ವರ್ಗಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರಲೋಕದ ಹೆಬ್ಬಾಗಿಲು ತೆರೆದ ಫುಲೆ ದಂಪತಿಗಳು ವಾಸಿಸುತ್ತಿದ್ದ ಪುಣೆಯಲ್ಲಿರುವ ೧೮೫೨ರಷ್ಟು ಹಳೆಯದಾದ ಫುಲೆವಾಡ ಇಂದು ಮ್ಯೂಸಿಯಂ ಆಗಿದೆ.

ಕಳೆದ ವರ್ಷ ಇದೇ ದಿನಗಳಲ್ಲಿ ನನ್ನ ಮಗಳು ಮೈತ್ರಿಯೊಂದಿಗೆ ಈ ಮಧುರ ನೆನಪುಗಳ ತಾಣವನ್ನು ಭೇಟಿ ಮಾಡುವ ಸುಯೋಗ ನನಗೆ ಒದಗಿ ಬಂದಿತ್ತು.

ಕ್ಷಾಮಕಾಲದಲ್ಲಿ ಜನ ನೀರಿಗಾಗಿ ತತ್ತರಿಸುತ್ತಿದ್ದಾಗ ತಮ್ಮ ಮನೆಯ ಅಂಗಳದಲ್ಲಿದ್ದ ಬಾವಿಯಿಂದ ನೀರನ್ನು ತೆಗೆದುಕೊಳ್ಳಲು ಅಸ್ಪೃಶ್ಯರಿಗೆ ಅವಕಾಶಮಾಡಿಕೊಟ್ಟಿದ್ದ ಫುಲೆಯವರ ಔದಾರ್ಯವನ್ನು ನೆನಪಿಸುವ ಸೇದುವ ನೀರಿನ ಬಾವಿ ಆವರಣದಲ್ಲಿ ಇದೆ.

Leave a Reply