ನಮಗ್ಯಾಕೆ ದುಡ್ಡು ಕೊಟ್ರು ಅಂತಾ ಗೊತ್ತಿರಲಿಲ್ಲ!
ಜಡಿಯಪ್ಪ ಗೆದ್ಲಗಟ್ಟಿ
ಅಪ್ಪ ಅವ್ವ ತಾವು ದುಡಿದ ಕೂಲಿ ಕಾಸಲ್ಲಿ ನನ್ನ ಸ್ಕೂಲ್ ಫೀಜು ಕಟ್ಟುವಾಗ ಯಾಕಿಷ್ಟು ಕಡಿಮೆ ಹಣ ಅಂತಾ ನಂಗೂ ಮತ್ತು ನಮ್ಮಪ್ಪವ್ವನಿಗೆ ಗೊತ್ತಿರಲಿಲ್ಲ!
ಮೇಷ್ಟ್ರು ಕರೆದು ನಿನ್ನ ಸ್ಕಾಲರ್ ಶಿಪ್ ಅಂತಾ ಹಣ ಕೊಟ್ಟಾಗ ನಮಗ್ಯಾಕೆ ದುಡ್ಡು ಕೊಟ್ರು ಅಂತಾ ಗೊತ್ತಿರಲಿಲ್ಲ!
ನಿಮ್ಮ ಜಯಂತಿಯ ರಜೆಯ ಪರಿಚಯವಿರಲಿಲ್ಲ, ಕಾರಣ ನಮ್ದು ಫುಲ್ ಬೇಸಿಗೆಯ ಬಿಸಿಲ ಜೊತೆ ಬರ್ಜರಿ ಸಂಬಂಧಗಳ ರಜೆ!
ಹೈಸ್ಕೂಲಿಗೆ ಪರಿಚಯವಾದ್ರಿ, ಡಿಗ್ರಿಗೆ ದೇವರಾದ್ರಿ, ಉಚಿತ ಹಾಸ್ಟೆಲ್ ವ್ಯವಸ್ಥೆ ಮಾಡಿ!
ಸಾವಿರಾರು ವರ್ಷಗಳ ಜಾತಿ ವ್ಯವಸ್ಥೆಗೆ ಇತಿ ಹಾಡಿದ್ರಿ, ಅವರಿವರು ನಿಮ್ಮ ರಿಜರ್ವೇಷನ್ ವ್ಯವಸ್ಥೆಗೆ ಆಡಿದ ಮಾತಿಗೆ ಅವರೊಂದಿಗೆ ಕುಳಿತು ಕೇಳಿಸಿಕೊಳ್ಳುವ ಕಿವಿಯಾಗಿಸಿದ್ರಿ!
ಬುದ್ಧ, ಬಸವ, ಗಾಂಧಿ ಇದ್ದ ಕಾಲಕ್ಕೆ ದೇವರಾದ್ರು, ನೀವು ಬರೆದಿಟ್ಟ ಬರಹಕ್ಕೆ ನಾವೆಲ್ಲಾ ಮನುಷ್ಯರಾದ್ವಿ!
ಸಾವಿರ ಕವನಗಳಿಗೂ ಮೀರಿ ಪರಿಣಾಮಕಾರಿಯಾಗಿದೆ ಈ ಪುಟ್ಟ ಬರಹ
Devaraagokkinta Manushyanaagodu thumba mukhya – parinaamakaariyaagide.