‘ನನ್ನ ಗೋಪಾಲ’ರ ಮಧ್ಯೆ..

ಲೋಹಿಯಾರವರು ‘ರಾಜಕೀಯದ ಮಧ್ಯೆ ಬಿಡುವು’ ಎಂದಂತೆ ಈಗ ‘ಜಸ್ಟ್ ಆಸ್ಕಿಂಗ್ ಅಭಿಯಾನ’ದಲ್ಲಿ ಇಡೀ ರಾಜ್ಯ ಸುತ್ತುತ್ತಿರುವ ಪ್ರಕಾಶ್ ರೈ  ಹೇಗೆ ಬಿಡುವು ತೆಗೆದುಕೊಳ್ಳಬಹುದು ಎನ್ನುವ ಕುತೂಹಲ ನಮಗಿತ್ತು

ಆ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು ಮಣಿಪಾಲದಲ್ಲಿ

ತಮ್ಮ ಬಿಡುವಿಲ್ಲದ ಪತ್ರಿಕಾ ಸಂವಾದ, ಸಂವಿಧಾನ ಉಳಿಸಿ ಆಂದೋಲನ, ಜಸ್ಟ್ ಆಸ್ಕಿಂಗ್ ಅಭಿಯಾನದ ಮಧ್ಯೆ ದಿಢೀರನೆ ಮಕ್ಕಳ ರಂಗ ಶಿಬಿರಕ್ಕೆ ಕಾಲಿಟ್ಟವರೇ ಮಕ್ಕಳಲ್ಲಿ ಮಕ್ಕಳಾಗಿ ಹೋದರು

ಖ್ಯಾತ ರಂಗ ನಿರ್ದೇಶಕ ಶ್ರೀಪಾದ್ ಭಟ್ ಅವರು ‘ರಥಬೀದಿ ಗೆಳೆಯರಿ’ಗಾಗಿ ೧೦ ದಿನಗಳ ಮಕ್ಕಳ ರಂಗ ಶಿಬಿರವನ್ನು ನಡೆಸುತ್ತಿದ್ದರು. ಇನ್ನೇನು ಕೆಲವೇ ಗಂಟೆಯಲ್ಲಿ ‘ನನ್ನ ಗೋಪಾಲ’ ನಾಟಕದ ಪ್ರದರ್ಶನವಿದೆ ಎನ್ನುವಾಗ ಅಲ್ಲಿಗೆ ತೆರಳಿದ ಪ್ರಕಾಶ್ ರೈ ತಮ್ಮ ಅಂದಿನ ರಂಗ ದಿನಗಳಿಗೆ ಜಾರಿಹೋದರು

ಅದರ ಆಲ್ಬಮ್ ಇಲ್ಲಿದೆ-     

1 comment

  1. ನಿಜಕ್ಕೂ ನಿಮ್ಮೆಲ್ಲರ ಬರವು ಕರಾವಳಿಯ ಸೆಕೆಯಲ್ಲಿ ತುಂತುರು ಮಳೆಯಂತಿತ್ತು. ಈಗಲೂ ನಂಬಲಾಗ್ತಿಲ್ಲ.

Leave a Reply