ಜಿ ಎನ್ ಮೋಹನ್ Recommends..

Reshaping Art by
TK Krishna

ಜಗತ್ತು ಅರ್ಥ ಮಾಡಿಕೊಳ್ಳಲು
ಇಲ್ಲೊಂದು ಶಾರ್ಟ್ ಕಟ್

ಎರಡು ದಿನಕ್ಕೊಮ್ಮೆ ನಾನು ಇಷ್ಟಪಟ್ಟ ಪುಸ್ತಕಗಳನ್ನು ಪರಿಚಯಿಸಬೇಕು ಎನ್ನುವುದು ನನ್ನ ಆಸೆ. ಅದರಲ್ಲೂ

ಇಂದಿನ ಜಾಗತೀಕರಣ, ಸೈಬರ್ ಯುಗದಲ್ಲಿ ಸಾಕಷ್ಟು ಪಲ್ಲಟಗಳು ಆಗಿ ಹೋಗಿವೆ. ದೂರ ಎನ್ನುವುದು ಕಾಲು ಮುರಿದುಕೊಂಡು ಬಿದ್ದಿದೆ. ಹಾಗಾಗಿಯೇ ಹಲವು ಸಂಸ್ಕೃತಿಯ ಸಂಕರವಾಗಬೇಕಾದ ಒತ್ತಡ ಎಲ್ಲರ ಮೇಲಿದೆ. ಈ ಸಂದರ್ಭದಲ್ಲಿ ನನ್ನ ಆಲೋಚನೆಗಳನ್ನು ವಿಸ್ತರಿಸಿದ, ವಿಸ್ತರಿಸುತ್ತಿರುವ ಕೃತಿಗಳೂ ನಿಮಗೂ ಗೊತ್ತಾಗಲಿ ಎನ್ನುವುದು ನನ್ನ ಆಶಯ.

ಅನಿವಾರ್ಯ ವಾಗಿ ಈ ಕೃತಿಗಳು ಇಂಗ್ಲಿಷ್ ನಲ್ಲಿವೆ

ಈ ಕೃತಿಗಳನ್ನು ನಾನು ಇಷ್ಟಪಟ್ಟು, ಕಷ್ಟಪಟ್ಟು ವರ್ಷಾನುಗಟ್ಟಲೆ ಕಾಲ ಎಲ್ಲೆಲ್ಲಿಂದಲೋ ಹುಡುಕಿ ತರಿಸಿಕೊಂಡಿದ್ದೇನೆ. ಹಾಗಾಗಿ ನಾನು ಪರಿಚಯಿಸುವ ಈ ಕೃತಿಗಳು ಒಂದು ರೀತಿ ಜಗತ್ತು ಅರ್ಥ ಮಾಡಿಕೊಳ್ಳಲು ಇರುವ ಶಾರ್ಟ್ ಕಟ್

ಈ ಸರಣಿಯಲ್ಲಿನ ಮೊದಲ ಕೃತಿ ಖ್ಯಾತ ಸಂಗೀತಗಾರ ಟಿ ಎಂ ಕೃಷ್ಣ ಅವರ Reshaping Art

ಟಿ ಎಂ ಕೃಷ್ಣ ಚೆನ್ನೈನ ಮಹಾನ್ ವೇದಿಕೆಗಳಷ್ಟೇ ಅಲ್ಲಿನ ಸಮುದ್ರ ಬದಿಯ ಕೊಳೆಗೇರಿಗಳನ್ನೂ ಇಷ್ಟಪಟ್ಟವರು. ನೇರವಾಗಿ ಆ ವೇದಿಕೆಯಿಂದ ನಡೆದು ಕೊಳೆಗೇರಿಗಳಲ್ಲಿ ಅಷ್ಟೇ ಧ್ಯಾನಸ್ಥರಾಗಿ ಹಾಡಿದವರು. ದೇವದಾಸಿಯರ ಜೊತೆ ತಿಂಗಳುಗಟ್ಟಲೆ ಕುಳಿತು ತಮ್ಮ ಹಾಡಿಗೂ ಅವರ ಹಾಡಿಗೂ ಇರುವ ಸಾಮ್ಯತೆಯನ್ನು ಅರ್ಥಮಾಡಿಕೊಂಡವರು. ಅವರ ಜೊತೆ ಕುಳಿತು ಕಚೇರಿ ನಡೆಸಿಕೊಟ್ಟವರು.

ಜಾತಿ ಎನ್ನುವುದು ಹೇಗೆ ಸಂಗೀತವನ್ನು ಆಳುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವರು. ಪ್ರಸನ್ನ ಅವರ ಜಿ ಎಸ್ ಟಿ ಸತ್ಯಾಗ್ರಹದಲ್ಲಿ ಅವರೊಂದಿಗೆ ಕುಳಿತವರು. ದೇಶದ್ರೋಹಿಗಳನ್ನು ಗುರುತಿಸುವ ಭರದಲ್ಲಿ ಸರ್ಕಾರ ನಿರತವಾಗಿದ್ದಾಗ ಮುಲಾಜಿಲ್ಲದೆ ಹೇಳಿಕೆ ಕೊಟ್ಟವರು.

ಅಂತಹ ಕೃಷ್ಣ ಸೃಜನಾತ್ಮಕ ಮನಸ್ಸಿಗೆ ಮೂಗುದಾರ ಹಾಕಲು ಯತ್ನಿಸುವ ಸರ್ಕಾರಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಅಲ್ಲದೆ ತಮ್ಮ ಸಂಗೀತ ಪಯಣದ ಬಗ್ಗೆಯೂ..

ಈ ಕೃತಿಯನ್ನು Aleph Book Company ಮುದ್ದಾಗಿ ಪ್ರಕಟಿಸಿದೆ.

ಕೊಳ್ಳುವವರಿಗೆ ಅಮೆಜಾನ್ ಇದೆ- https://www.amazon.in/Reshaping-Art-T-M-Krishna/…/9386021978

1 Response

  1. nutana doshetty says:

    wonderful..

    nutana doshetty

Leave a Reply

%d bloggers like this: