ಸಾಗರಿಯ ರಾಯಭಾರಿಯಾಗಿ..

ಸಿದ್ಧನಗೌಡ ಪಾಟೀಲ್ 

“ಭೂಮಿಯ ಮಡಿಲಲ್ಲಿ ವಿಶಾಲವಾಗಿ
ಮಲಗಿದ್ದಾಳೆ ಸಾಗರಿ,
ಭೂಮಿಗೊಂದು ನಮನ ಹೇಳಲು
ತೆರೆಗಳನ್ನು ಕಳಿಸುತ್ತಾಳೆ,
ತೆರೆಗಳೋ ಆಡುತ್ತ , ಕುಣಿಯುತ್ತ ಬಂದು
ಭೂಮಿಗೊಂದು ಮುತ್ತು ಕೊಟ್ಟು
ನಮಿಸಿ ಹಿಂದಿರುಗುತ್ತವೆ.

ಕೆಲವೊಮ್ಮೆ ತೆರೆಗಳ ಮಧ್ಯೆ ಸ್ಪರ್ಧೆ ಏರ್ಪಟ್ಟು-

ಸುನಾಮಿಯಾಗುತ್ತದೆ.
ಸಾಗರಿಯ ರಾಯಭಾರಿಯಾಗಿ
ಭೂಮಿಗೆ ಬರುವ ಸುನಾಮಿ
ಮನುಷ್ಯ ನಿರ್ಮಿತ ಅಸಮಾನತೆಯ ಕೋಟೆಯನು
ನೆಲಸಮ ಮಾಡಿ ಹಿಂತಿರುಗುತ್ತದೆ.
ಭೂಮಿಯನ್ನು ಪ್ರೀತಿಸುವುದೆಂದರೆ
ಇದೇ ಅಲ್ಲವೆ.”

| ಕೇರಳದ ಕೊಲ್ಲಮ್ ನ ಕಡಲ ತೀರದಲ್ಲಿ ಕುಳಿತಾಗ ಅನಿಸಿದ್ದು |

2 Responses

  1. Anasuya M R says:

    ಸುಂದರ ಕಲ್ಪನೆ

  2. ಸುಂದರ ಕಲ್ಪನೆಯ ಜೊತೆಗೆ ಗೌಡರ ಸಾಮಾಜಿಕ ಸಮಾನತೆಯ ಸಂದೇಶ ಸಾಗರಿಯ ತೆರೆಗಳ ಮುಖಾಂತರ.. ಧನ್ಯವಾದಗಳು ಸಿದ್ಧನಗೌಡ ಸರ್.

Leave a Reply

%d bloggers like this: