ಹ್ಯಾಪಿ ಬರ್ಥಡೇ.. ಮನ್ನಾ ಡೇ

ಹ್ಯಾಪಿ ಬರ್ಥಡೇ ಮನ್ನಾ ದಾ..

ಚಿದಂಬರ ನರೇಂದ್ರ 

ಬೆಣ್ಣೆ ಮಾರುವ ಹೆಣ್ಣು,
ಕೂಗಿದೊಡನೆ ಬಂದು ಕದ ತೆರೆದ
ಕಂದನ ಬಾಯಲ್ಲಿ
ಅಕ್ಕರೆಯಿಂದ
ಬೆಣ್ಣೆಯ ಬೆಟ್ಟಿಟ್ಟ ಹಾಗೆ.

ದಿನವಿಡೀ ದಣಿದ ಕಂದನ ಹಿಂದೆ
ಮಮತೆಯಲಿ ಓಡಾಡಿ, ಉಣಿಸಿ,
ತಟ್ಟೆಯಲಿ ಮಗು ಬಿಟ್ಟ ತುತ್ತ,
ಪ್ರೀತಿಯಲಿ ಉಣುವ
ಅಮ್ಮನ ಧನ್ಯತೆಯ ಹಾಗೆ.

ಮುನಿದ ನಲ್ಲನ ಕೈಹಿಡಿದು
ಸಲ್ಲಾಪ ನಡೆಸಿ,
ಅವನ ಜ್ವರವ ಅಹ್ವಾನಿಸಿ ಧರಿಸಿ,
ಬಾಯಿ ಕಹಿಯ ಸಿಹಿಯಾಗಿಸೆ,
ತುಟಿ ಒಡ್ಡಿದ ನಲ್ಲೆಯ ಒಲವಿನ ಹಾಗೆ.

ಚಳಿ ಗಾಳಿಗೆ ಕಂಪಿಸುವ
ಗಿಡ ಮರಗಳ ಉಲ್ಲಾಸ,
ಹಾರುವ ಹಕ್ಕಿಗಳ ಚಿಲಿ ಪಿಲಿ,
ಸಂತ ಸರೋವರದ ಸುಶಾಂತ
ಮೌನದ ಹಾಗೆ.

ಮನ್ನಾ, ಒಮ್ಮೆ ನಿನ್ನ ಕೇಳಿದರೆ ಸಾಕು,
ನಾ ಮಾಡಿದ ಪ್ರೇಮ, ದ್ರೋಹ, ಸೊಕ್ಕು,
ಎಲ್ಲ ಒಮ್ಮೆಲೆ ಕರಗಿ,
ಬದುಕು
ಮತ್ತೆ ಮತ್ತೆ ಬೇಕೆನಿಸುತ್ತದೆ.

1 Response

  1. nutana doshetty says:

    manna de – Kavya shriddhanjali .. avara dhvaniyante bhavukavagide

    Nutana Doshetty

Leave a Reply

%d bloggers like this: