ಮೀನಾಗಿ ಈಜುವಾಗ..

ಕಾಲ ಚಕ್ರದ ಚಿತ್ರದಲಿ..

ಅಶ್ಫಾಕ್ ಪೀರಜಾದೆ

ಜಗದ ಓಘದಲಿ
ಒಂದಾಗಿ ಓಡುವ ಹೆಜ್ಜೆ ಸದ್ದು,
ಎದೆಯುಸಿರು
ಕಾಲನ ಕಿವಿಗಿಂಪು

ಆರ್ಭಟಿಸುವ ಅಲೆಗಳಲಿ
ಮೀನಾಗಿ ಈಜುವಾಗ
ಘರ್ಜಿಸುವ ಸಮುದ್ರದಲೆಯ
ಅಭಯ ಹಸ್ತ

ಬಿರುಗಾಳಿಯಲಿ
ಹಕ್ಕಿಯಾಗಿ ರೆಕ್ಕೆ ಬಿಚ್ಚಬೇಕು
ಕಾಲೂರಲು ಜಾಗವಿರದಿದ್ದರೂ
ಆಕಾಶವೇ  ಆಸರೆದಾಣ

ಸಡುವಿಲ್ಲದೇ ದುಡಿಯುವ
ಕಾಲ ಚಕ್ರದ ಚಿತ್ರದಲಿ
ಬಣ್ಣವಾಗಿ ಬೆರೆತಾಗ
ಬದುಕು ಭರವಸೆ.

Leave a Reply