ಬೊಳುವಾರು ‘NOTA’

ಬೊಳುವಾರು

 

 

ಬೊಳುವಾರು

 

ಸಮರ್ಪಕ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸಲಾಗದೆ ರೋಸಿಹೋಗಿ, ಈ ಬಾರಿ ‘NOTA’ ಪ್ರಯೋಗಿಸಲು ತೀರ್ಮಾನಿಸಿರುವ ನನ್ನ ಗೆಳೆಯ ಗೆಳತಿಯರಲ್ಲಿ ಒಂದು ಕೋರಿಕೆ:

ಒಂದು ಕ್ಷೇತ್ರದಲ್ಲಿ ‘NOTA’ ಬಹುಮತ ಪಡೆದರೂ, ಎರಡನೆಯ ಬಹುಮತ ಪಡೆದ ಅಭ್ಯರ್ಥಿಯನ್ನೇ ಗೆದ್ದವನು ಎಂದು ಘೋಷಿಸಲಾಗುತ್ತದೆ.

ಈ ಕಾನೂನಿನಿಂದಾಗಿ ನೀವು ಮಾಡಲಿರುವ ‘NOTA’ ಮತಗಳಿಗೂ ನಿಮ್ಮ ಕ್ಷೇತ್ರದಲ್ಲಿ ‘ಅಸಿಂಧು’ ಎಂದು ಪರಿಗಣಿಸಲಾಗುವ ಮತಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ.

ಇದು ವ್ಯರ್ಥ

ಆದ್ದರಿಂದ, ಮತಗಟ್ಟೆಗೆ ಹೋಗಿ, ಬಿಸಿಲು ಸಾಲುಗಳಲ್ಲಿ ನಿಂತು ‘NOTA’ ಚಲಾಯಿಸುವ ಬದಲು ಮನೆಯಲ್ಲೇ ಕುಳಿತಿರಿ. ಅಥವಾ, ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸದಿರುವುದು ತಪ್ಪೆಂಬ ನೈತಿಕ ಪ್ರಜ್ಞೆ ನಿಮ್ಮದಾಗಿದ್ದರೆ, ನಿಮಗೆ ಯಾರ ವಿರುದ್ಧ ಕಡಿಮೆ ಸಿಟ್ಟು ಇದೆಯೋ ಅವರಿಗೆ ಮತದಾನ ಮಾಡಿರಿ.

ಆದರೆ, ಯಾವುದೇ ಕಾರಣಕ್ಕೂ ನಿಮ್ಮ ಮತಗಳನ್ನು ಅಸಿಂಧು ಮತಗಳ ಸಾಲಿಗೆ ಸೇರಿಸುವ ಮೂಲಕ ನಿಮ್ಮ ಮತಗಳ ಗೌರವವನ್ನೂ ನೀವೇ ಕಳೆಯದಿರಿ.

2 Responses

  1. Kiran says:

    ಆದ್ದರಿಂದ, ಮತಗಟ್ಟೆಗೆ ಹೋಗಿ, ಬಿಸಿಲು ಸಾಲುಗಳಲ್ಲಿ ನಿಂತು ‘NOTA’ ಚಲಾಯಿಸುವ ಬದಲು ಮನೆಯಲ್ಲೇ ಕುಳಿತಿರಿ <<< BAD ADVICE.
    Find the one that you think is good for the state and vote for him/her.

  2. ಅಕ್ಕಿಮಂಗಲ ಮಂಜುನಾಥ. says:

    ನನಗೂ ಹೀಗೇ ಅನ್ನಿಸುತ್ತಿದೆ

Leave a Reply

%d bloggers like this: