fbpx

BREAKING NEWS: ಗಿರಡ್ಡಿ ಗೋವಿಂದರಾಜ ಇನ್ನಿಲ್ಲ

4 Responses

 1. ಬಿಳಿಮಲೆ says:

  ೭೯ ವರುಷದ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜರು ಇನ್ನಿಲ್ಲ. ಸಾಹಿತ್ಯದ ಅನನ್ಯ ಗುಣಗಳ ಬಗ್ಗೆ ಅಸೀಮವಾದ ನಂಬಿಕೆ ಇರಿಸಿಕೊಂಡಿದ್ದ ಅವರು ಮೂಲತಹ ಒಳ್ಳೆಯ ಭಾಷಾ ಶಾಸ್ತ್ರಜ್ಞರಾಗಿದ್ದರು. ಕಾವ್ಯ, ವಿಮರ್ಶೆ, ಕತೆ, ರಂಗಭೂಮಿ, ಅನುವಾದ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಅವರು ಸಂಕ್ರಮಣ ಪತ್ರಿಕೆಯ ಸಂಪಾದಕರೂ ಆಗಿದ್ದರು. ನವ್ಯ ಸಾಹಿತ್ಯ ಕಾಲದಲ್ಲಿ ಗಿರಡ್ಡಿಯವರ ಲೇಖನಗಳಿಗೆ ತಾರಾ ಮೌಲ್ಯವೂ ಪ್ರಾಪ್ತಿಸಿತ್ತು. ಬಂಡಾಯ ಚಳುವಳಿಯ ಬಗ್ಗೆ ಅವರಿಗೆ ಅಂತಹ ಕುತೂಹಲವೇನೂ ಇರಲಿಲ್ಲ. ಈಚೆಗೆ ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಭ್ರಮದ ಸೂತ್ರಧಾರರು ಅವರೇ ಆಗಿದ್ದರು. ಅವರ ನಿಧನದೊಂದಿಗೆ ನಾವು ಅಪ್ಪಟ ಸಾಹಿತ್ಯ ಪ್ರೇಮಿಯೊಬ್ಬನನ್ನು ಕಳೆದುಕೊಂಡೆವು.

 2. C. N. Ramachandran says:

  ಸುದ್ದಿ ತಿಳಿದು ತುಂಬಾ ಖಿನ್ನತೆ ಕವಿದಿದೆ; ಗಿರಡ್ಡಿ, ಸರದಿ ಮುರಿದು ಹೋಗುವಂತಹ ಮಹತ್ಕಾರ್ಯ ಏನಿತ್ತು? ಇನ್ನೂ ಬಹು ಕಾಲ ನಮ್ಮೆಲ್ಲರೊಡನೆ ಇರಬೇಕಿತ್ತಲ್ಲವೆ? ನಿಮ್ಮ ಜಾಗವನ್ನು ತುಂಬಿ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸುವವರು ಯಾರು?
  ರಾಮಚಂದ್ರನ್

 3. kvtirumalesh says:

  ಹಸುಳೆಯಂಥ ಮನುಷ್ಯ ಈ ಗಿರಡ್ಡಿ ಎಂದರೆ. ದೇವರೆ, ಅವರನ್ನು ಬಯ್ಯುತ್ತಿದ್ದ ನಮ್ಮನ್ನು ಕ್ಷಮಿಸು!

  ಕೆ.ವಿ.ತಿರುಮಲೇಶ್

 4. LAKSHMANA RAO says:

  VERY SAD NEWS

  – RIP

Leave a Reply

%d bloggers like this: