ಅವಳಾಗುವ ನಾಳೆ..

ಮಾನಸಾ ಹೆಗಡೆ

ಈ ಸಂಜೆ, ಮಲ್ಲೆಮೊಗ್ಗ
ಬಳ್ಳಿಯಿಂದೆಳೆವಾಗ
ಉಮ್ಮಳಿಸುತಿದೆ ದುಃಖ
ದಾಟಬೇಕಿದೆ ನಾಳೆ
ಹೊಸತೊಂದು ಹೊಸಿಲ

ಈ ಸಂಜೆ,ಹಳೆಹಾಡ
ಮತ್ತೆ ಹಾಡುತಿರುವಾಗ
ಉಮ್ಮಳಿಸುತಿದೆ ದುಃಖ
ನೀಡಬೇಕಿದೆ ನಾಳೆ
ಹೊಸ ಹಾಡಿಗೆ ದನಿಯ

ಈ ಸಂಜೆ, ದೀಪವೊಂದ
ಮತ್ತೆ ಬೆಳಗುತಿರುವಾಗ
ಉಮ್ಮಳಿಸುತಿದೆ ದುಃಖ
ಬೆಳಗಬೇಕಿದೆ ನಾಳೆ
ಹೊಸತೊಂದು ಮನೆಯ

ಈ ಸಂಜೆ ಹೂವಾಗಿ,
ಹಾಡಾಗಿ, ಬೆಳಕಾಗಿ
ಅವಳ ಮಡಿಲ ಸೇರಿದ ವೇಳೆ
ಉಮ್ಮಳಿಸುತಿದೆ ದುಃಖ
ಬಾಳಬೇಕಿದೆ ನಾಳೆ
ಅವಳಾಗಿ ನಾನು

2 Responses

  1. Anagha LH says:

    Fine ……

Leave a Reply

%d bloggers like this: