ಇದು  ಒಬ್ಬ ರಾಜನ ಕಥೆ..

ಚಿದಂಬರ ನರೇಂದ್ರ 

ಇದು
ಒಬ್ಬ ರಾಜನ ಕಥೆ.
ನಾನು ಪ್ರೈಮರಿ ಸ್ಕೂಲಲ್ಲಿ
ಓದಿದ್ದು,
ರಾಜನ ಹೆಸರು ಈಗ ಮರೆತುಹೋಗಿದೆ.
ನಿಮಗೆ
ಹಿಸ್ಟರಿಯಲ್ಲಿ ಇಂಟರೆಸ್ಟ್ ಇದ್ರೆ
ಆ ಹೆಸರು
ನೆನಪಿರಬಹುದು.

ಅವನು ಅದ್ಭುತ ಬಿಲ್ಲುಗಾರನಾಗಿದ್ದ
ಅದರಲ್ಲೂ
ಕಣ್ಣಿಗೆ ಪಟ್ಟಿಕಟ್ಟಿಕೊಂಡು
ಬಾಣ ಬಿಡುವುದರಲ್ಲಿ ಎಕ್ಸಪರ್ಟ್.
ಈ ಶಬ್ದವೇಧಿಯನ್ನ
ಆತ
ಎಷ್ಟು ನೆಚ್ಚಿಕೊಂಡಿದ್ದ ಅಂದ್ರೆ
ಕೊನೆ ಕೊನೆಗೆ
ಕಣ್ಣಿಗೆ ಪಟ್ಟಿಯಿಲ್ಲದೇ
ಬಾಣ ಬಿಡುವುದು
ಅವನಿಗೆ
ದುಸ್ತರವಾಗತೊಡಗಿತು.
ಯುದ್ಧಭೂಮಿಗೆ ಬಂದ ವೀರ
ಶಬ್ದ ಬಂದಲ್ಲೆಲ್ಲ ಬಾಣ ಬಿಟ್ಟ.
ಸತ್ತವರಲ್ಲಿ ನಿನ್ನವರೇ ಜಾಸ್ತಿ ಕಣೋ
ಎಂದರೂ ಒಪ್ಪಲಿಲ್ಲ.

ಕೊಲೆಗಾರರ ಪಟ್ಟಿಯಲ್ಲಿ
ನಂಬಿಕೆಯ ಜಾಗ
ಸಂಶಯಕ್ಕಿಂತ ಮೇಲೆ.

1 Response

  1. Nasrin says:

    Nice sir…..

Leave a Reply

%d bloggers like this: