ಟಿ ಎನ್ ಸೀತಾರಾಂ ಎಲೆಕ್ಷನ್ ಸೋತದ್ದು..

ಟಿ ಎನ್ ಸೀತಾರಾಂ 

ನಾನು ಹಿಂದೆ ಜೆಡಿಯು-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಗೌರಿಬಿದನೂರಿನಲ್ಲಿ ಸ್ಪರ್ಧಿಸಿದ್ದೆ..

ಆಗ ಸೋತ 3-4 ದಿನ ಏನೂ ಅನ್ನಿಸಿರಲಿಲ್ಲ..

ನಂತರ ಶುರುವಾಯಿತು ನೋಡಿ ಅವಮಾನ ಮತ್ತು ದುಃಖಗಳ ದಟ್ಟ ಭಾವ… ಬೀದಿಯಲ್ಲಿ ನಿಂತು ಬಿಕ್ಕಿ ಬಿಕ್ಕಿ ಅತ್ತಿದ್ದೆ..

ಆಗ ಯಲ್ಲಾಪುರದ ಗೆಳೆಯ ಪ್ರಮೋದ ಹೆಗಡೆ , ನನ್ನನ್ನು ಮತ್ತು ನನ್ನ ತಮ್ಮ ಮತ್ತು ಇಬ್ಬರು ಗೆಳೆಯರನ್ನು ನಾಲ್ಕು ದಿನ ಕಾಡಿನಲ್ಲಿದ್ದ ಅವರ ಮನೆಯಲ್ಲಿ ಇಟ್ಟುಕೊಂಡು ಸಂತೈಸಿದ್ದರು..

ಮುಖ್ಯವಾಗಿ ಆಗ ಕಾಡಿದ್ದು ಅವಮಾನ.. ಆಗ ‘ಮಾಯಾಮೃಗ’ ಇನ್ನೂ ನಡೆಯುತ್ತಿತ್ತು… ಎಲ್ಲಿ ಹೋದರೂ ಸನ್ಮಾನ, ಗೌರವ ಗಳು.. ಆದರೆ ರಾಜಕೀಯಕ್ಕೆ ಬಂದಾಗ ಜನದಿಂದ ತಿರಸ್ಕಾರಕ್ಕೆ ಒಳಗಾದ ಅವಮಾನ..

ಅದನ್ನು ಮೀರಲೆಂದೇ ‘ಮತದಾನ’ ಚಿತ್ರ ಮಾಡಿದ್ದು ಆಗ..

ವಿಚಿತ್ರ ಹಟಕ್ಕೆ ಬಿದ್ದು ದಿನಕ್ಕೆ 20 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಾ ಅನೇಕ ಧಾರಾವಾಹಿಗಳನ್ನು ಮಾಡಿದೆ.. ಮಾಯಾಮೃಗ, ಮನ್ವಂತರ, ಮುಕ್ತ, ಮುಕ್ತ ಮುಕ್ತ,….. ಜನರ ಪ್ರೀತಿ ಸಿಕ್ಕಿತು…

ಅಷ್ಟು ದುಃಖ ಪಡಬಾರದಿತ್ತು ಎಂದು ಈಗಲೂ ಅನ್ನಿಸುತ್ತದೆ..

( ಸೋತು ಅಳುತ್ತಿದ್ದ ಅನೇಕ ಅಭ್ಯರ್ಥಿಗಳನ್ನು ಕಂಡಾಗ ನೆನಪು ಬಂತು..)

Leave a Reply