ಬಿಂಬ ಮಕ್ಕಳ ಸಂಭ್ರಮ

‘ವಿಜಯನಗರ ಬಿಂಬ’ ಕಳೆದ 23 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಬಂದಿದೆ. ರಂಗಾಸಕ್ತರ ಒತ್ತಾಯದ ಮೇರೆಗೆ ಹಿರಿಯರ ವಿಭಾಗ ರೂಪುಗೊಂಡು, ಹೊಸ ಹೊಸ ಪ್ರತಿಭೆಗಳ ಅನಾವರಣಕ್ಕೆ ನಾಂದಿ ಹಾಡಿತು. ಇದೀಗ ನಮ್ಮ ಕೇಂದ್ರದ ಹಿರಿಯರ ವಿಭಾಗಕ್ಕೆ 5 ವರ್ಷದ ಸಂಭ್ರಮ . ಕಳೆದ 5 ವರ್ಷದಲ್ಲಿ ಹಲವಾರು ಹೊಸ ಯುವ ಪ್ರತಿಭೆಗಳಿಗೆ ರ೦ಗ ದೀಕ್ಷೆ ನೀಡಿ ಅವರು ಕನ್ನಡ ರಂಗಭೂಮಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ ಎನ್ನುವ ಹರ್ಷ ನಮ್ಮದು.

ಇದೀಗ 5 ವರ್ಷದ ಸಂಭ್ರಮವನ್ನು ಒಂದು ವರ್ಷ ಪೂರ್ತಿ ಸಂಭ್ರಮಿಸುವ ಆಶಯದೊಂದಿಗೆ ಹಲವಾರು ಕಾಯ್ರಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಒಂದು ದಿನದಲ್ಲಿ 240ಕ್ಕೂ ಹೆಚ್ಚು  ಒಂದು ನಿಮಿಷದ ನಾಟಕದ ಉತ್ಸವವನ್ನು ಪ್ರಾಂಶುಪಾಲರಾದ ಎಸ್.ವಿ.ಸುಷ್ಮ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರೈಸಿದವು.

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ರOಗ ಚಿಂತನ ಎಂಬ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ರಂಗಭೂಮಿಯ ಹಲವಾರು ವಿಷಯಗಳ ಬಗ್ಗೆ ನಮ್ಮ ಹಿರಿಯ ವಿದ್ಯಾಥಿ೯ಗಳು ತಮ್ಮ ರಂಗಾನುಭವದ ಮಾತುಗಳನ್ನು ಹಂಚಿಕೊಂಡಿದ್ದಲ್ಲದೆ ಗಂಭೀರ ವಿಷಯ ಮಂಡನೆಯನ್ನು ಮಾಡಿದರು.

6ನೇ ವರ್ಷದ ವಿದ್ಯಾಥಿ೯ಗಳಿಂದ ಕುರುಡು ಕಾಂಚಾಣ ನಾಟಕ ಪ್ರದರ್ಶನ.

4 ಮತ್ತು 5ನೇ ವಷ೯ದ ವಿದ್ಯಾಥಿ೯ ಗಳಿಂದ ಆಗಾಂಧಿ ಈ ಗಾಂಧಿ ನಾಟಕ ಪ್ರದಶ೯ನ.

ಇದೀಗ ಜೂನ್ 3ನೇ ತಾರೀಖು ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ.

ಜೂನ್ 3, 2018 , ಭಾನುವಾರ

ಸಂಜೆ 6:30ಕ್ಕೆ

ಸ್ಥಳ-ಗ್ರಂಥಾಂಗಣ , ನಗರ ಕೇಂದ್ರ ಗ್ರಂಥಾಲಯ ಹಂಪಿನಗರ

ನಾಟಕ – ಶತಮರ್ಕಟ

ಮೂಲ – ಮೋಲಿಯರ್

ರಚನೆ , ನಿರ್ದೇಶನ – ಡಾ.ಎಸ್.ವಿ. ಕಶ್ಯಪ್

ಮುಖ್ಯ ಅತಿಥಿಗಳು- ಡಾ.ಬಿ.ವಿ.ರಾಜಾರಾಂ , ಬಾಬು ಹಿರಣ್ಣಯ್ಯ

ಬನ್ನಿ ಸಂಭ್ರಮಿಸೋಣ.

Leave a Reply