ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ

ನಾಡಿನ ಹಿರಿಯ ಕವಿ, ಪಂಪ ಪ್ರಶಸ್ತಿ ಪುರಸ್ಕೃತ ಡಾ. ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ರಾಜ್ಯಮಟ್ಟದ “ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ” ಗೆ 2017ರಲ್ಲಿ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಿದೆ..

ಕೃತಿಯು ಕವಿ, ಲೇಖಕರ ಮೊದಲ ಸ್ವತಂತ್ರ ಕೃತಿಯಾಗಿರಬೇಕು. ಪ್ರಶಸ್ತಿಯು 5000 ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿಯನ್ನು ನವೆಂಬರ ತಿಂಗಳ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು..

ಆಸಕ್ತರು ಕೃತಿಯ 3 ಪ್ರತಿಗಳನ್ನು, ಮೊದಲ ಕೃತಿ ಎಂಬ ಮುಚ್ಚಳಿಕೆಯೊಂದಿಗೆ, ಜುಲೈ 7 ರೊಳಗೆ

ಶ್ರೀ. ಮೋಹನ ಕಳಸದ
“ಶ್ರಮಶ್ರೀ”
ಮನೆ ಸಂಖ್ಯೆ – 25
ಶಿಕ್ಷಕರ ಬಡಾವಣೆ
ಖಾಸಬಾಗ, ಬೆಳಗಾವಿ – 03

ಇಲ್ಲಿಗೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.‌

ಹೆಚ್ಚಿನ ಮಾಹಿತಿಗೆ 9845921947 ಕ್ಕೆ ಸಂಪರ್ಕಿಸಬಹುದು

Leave a Reply