ನೂರ್ ಜಹೀರ್  ಬೆಂಗಳೂರಿಗೆ  ಬರುತ್ತಿದ್ದಾರೆ..

ಪ್ರಿಯರೆ,

ಲೇಖಕಿ , ಸಂಶೋಧಕಿ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ನೂರ್  ಜಹೀರ್  ಬೆಂಗಳೂರಿಗೆ  ಬರುತ್ತಿದ್ದಾರೆ.

ಕನ್ನಡದಲ್ಲಿ ಈವರೆಗೆ ಲಭ್ಯವಿರುವ ಅವರ ಏಕೈಕ ಕೃತಿ ನವಕರ್ನಾಟಕದಿಂದ ಪ್ರಕಟವಾದ `ಅಲ್ಲಾಹ್ ನಿಂದ  ನಿರಾಕೃತರು’ .

ಈ ಕೃತಿಯ ಅನುವಾದಕ್ಕಾಗಿ  ಶ್ರೀ ಅಬ್ದುಲ್ ರೆಹಮಾನ್ ಪಾಷ  ಅವರಿಗೆ  2016 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ . ಅವರ ಇನ್ನೊಂದು ಕೃತಿ MY GOD IS A WOMAN ಸದ್ಯದಲ್ಲೇ ಕನ್ನಡದಲ್ಲಿ ಲಭ್ಯವಾಗಲಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡಿ ಬಂದಿರುವ ನೂರ್ ಜಹೀರ್ ಅವರು ತಮ್ಮ ಪ್ರವಾಸದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಅವರ ಕೃತಿಗಳ ಬಗ್ಗೆ ಚಟುವಟಿಕೆಗಳ ಬಗ್ಗೆ ಸಮಕಾಲೀನ ಸಾಮಾಜಿಕ – ಸಾಂಸ್ಕೃತಿಕ ವಿಷಯಗಳ ಬಗ್ಗೆ ಸಂವಾದ ನಡೆಸಲು ಬನ್ನಿ.

23.06.2018 ಶನಿವಾರ 
ಸಂಜೆ 4  ರಿಂದ  5.30

ಹೊಸತು ಕಛೇರಿ 
ಎಂಬೆಸಿ  ಸೆಂಟರ್ 
ಶಿವಾನಂದ ವೃತ್ತದ ಬಳಿ 
ಬೆಂಗಳೂರು – 560 001

(ದೂರವಾಣಿ :  080 – 22161900/01/11/12 )

ವಂದನೆಗಳು
ಎ . ಆರ್ . ಉಡುಪ

Leave a Reply