ಕ್ಯೂಬಾ ಕಾಡಿತು..

ಆನಂದತೀರ್ಥ ಪ್ಯಾಟಿ 

ಸಂಯುಕ್ತ ಕರ್ನಾಟಕದ ‘ಸಾಪ್ತಾಹಿಕ ಸೌರಭ’ ಉಸ್ತುವಾರಿ ಹೊತ್ತಿದ್ದಾಗ (1999) ಲೋಹಿಯಾ ಪ್ರಕಾಶನದಿಂದ ಬಂದ ಪುಸ್ತಕಗಳ ಕಟ್ಟಿನಲ್ಲಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೂಡ ಇತ್ತು.

ಕುತೂಹಲಕ್ಕೆಂದು ಓದುತ್ತ ಹೋದೆ; ಒಂದೇ ದಿನದಲ್ಲಿ ಓದಿ ಮುಗಿಸಿದೆ.

ಅಲ್ಲಿಯವರೆಗೆ ಅಪರಿಚಿತರಾಗಿದ್ದ ಕ್ಯಾಸ್ಟ್ರೋ, ಚೆ (ಕೆಲವೇ ದಿನದಲ್ಲಿ ‘ಈ-ಟಿವಿ’ಯಲ್ಲಿ ಜತೆಗೂಡಿದ Gn Mohan ಕೂಡ!) ಪರಿಚಯವಾದರು.

ಪ್ರವಾಸ ಕಥನವೆಂದರೆ ಹೀಗ್ಹೀಗೆಯೇ ಇರುತ್ತವೆ ಎಂಬ ಅನಿಸಿಕೆಗೆ ‘…ಕ್ಯೂಬಾ’ ಅಪವಾದ. ಅಮೆರಿಕಕ್ಕೆ ಮಗ್ಗುಲ ಮುಳ್ಳಾಗಿದ್ದ ಪುಟ್ಟ ದೇಶ ಕ್ಯೂಬಾದ ಹಲವು ವಿಶಿಷ್ಟ ಮುಖಗಳನ್ನು ಸೊಗಸಾಗಿ ಚಿತ್ರಿಸಿದ ಈ ಕೃತಿಯಲ್ಲಿ ನಿರೂಪಣೆಯೂ ಕಾವ್ಯದಂತೆ ಇದೆ…

 

Leave a Reply