ಪ್ರತಿಭಾ ಬರೆದ ‘ಹೆಣ್ಣಿನ ದೇಹ’: ಹಲವು ನೋಟ

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ-

“ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ ವೈರಾಗ್ಯಕ್ಕೆ ಪರಿಕರ ಎನ್ನುವ ಎರಡು ಮನೋಭಾವಗಳನ್ನು ಕಾವ್ಯಗಳು ಉಂಟು ಮಾಡುತ್ತವೆ. ಇವುಗಳ ಹೊರತಾಗಿ, ಸಾಕಾರ ಎಂದು ಕರೆಯಬಹುದಾದ ಆಕಾರವೊಂದು ಹೆಣ್ಣಿಗಿದೆ ಎನ್ನುವ ಭಾವನೆ ಹಳಗನ್ನಡ ಕಾವ್ಯಗಳನ್ನು ಓದಿದಾಗ ಉಂಟಾಗುವುದಿಲ್ಲ…. ಇವೆಲ್ಲ ಬಣ್ಣನೆಗಳು ಕಟ್ಟಿಕೊಡುವ ಹೆಣ್ಣಿನ ಚಿತ್ರಣ ಯಾವ ಬಗೆಯದು ಎಂದವರು ಪ್ರಶ್ನಿಸಿದರು”
-ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.  ಇದಕ್ಕೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದರು. ಅದು ಇಲ್ಲಿದೆ.

ಪ್ರತಿಭಾ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ-.

ಕೆ ವಿ ತಿರುಮಲೇಶ್ 

ಹಳೆಕಾಲದ ಯಾವುದೇ ಭಾಷೆಯ ಕಾವ್ಯಗಳನ್ನು ತೆಗೆದುಕೊಂಡರೂ ನಮಗಿಂತಹ ಸಮಸ್ಯೆ ಎದುರಾಗುತ್ತ್ತದೆ. ಕುಮಾಅರವ್ಯಾಸ ಭಾರತದ ವಿದುರನೀತಿಯಲ್ಲೂ ನಾವಿಂದು ಸ್ವೀಕರಿಸಲಾಗದ ಬೋಧನೆಗಳಿವೆ. ಹರಿಶ್ಚಂದ್ರಕಾವ್ಯದ ಹೊಲತಿಯರ ಗತಿಯೇನು? ನಮ್ಮ ಜನಪದ ಕಾವ್ಯಗಳಾಗಲಿ ಹಾಡುಗಳಾಗಲಿ ಇದಕ್ಕೆ ಹೊರತಾಗಿಲ್ಲ. ಶೇಕ್ಸ್ ಪಿಯರನ ನಾಟಕಗಳು ಸಹಾ ಅಂದಿನ ಕಾಲದ ಕೆಲವು ಪೂರ್ವಾಗ್ರಹಗಳನ್ನು ಹಾಗೇ ಬಳಸಿಕೊಳ್ಳುತ್ಫ್ತವೆ. ‘ಕುಚೋನ್ನತೇ’ ಎಂವುದು ದೇವಿಯನ್ನು ಸ್ತುತಿಸುವ ಒಂದು ಪದ ಕೂಡ ಹೌದು ಎನ್ಫ್ನುವುದನ್ನು ಮರೆಯಬಾರದು. ಪ್ರತಿಭಾ ಹೇಳುವಂತೆ ಇವಕ್ಕೆ ಅತೀತವಾದ ಉದ್ದೇಶವನ್ನು ಮರೆತು ನಿರೂಪಿಸುವುದು ಅಸಮರ್ಕಕ ಎನಿಸುವುದಿಲ್ಲವೇ? ಹೇಗಿದ್ದರೂ ಮಿಂದ ನೀರಿನ ಜತೆ ಮಗುವನ್ನೂ ಚೆಲ್ಲುವುದು ಬೇಡ!
ಕೆ.ವಿ. ತಿರುಮಲೇಶ್

 

ಗಿರಿಜಾ ಶಾಸ್ತ್ರಿ 

ಇಲ್ಲಿ ಪೀನನಿತಂಬ ಎರಡು ಸಲ ಬಂದಿದೆ ಗಮನಿಸಿದಿರಾ? ಪೀನ ಎನ್ನುವ ವಿಶೇಷಣವನ್ನು ಬಳಸುತ್ತಾನೆ. ಒಬ್ಬ ತಂದೆಯಾಗಿ ಮಗಳನ್ನು ಹೀಗೆ ನೋಡುತ್ತಾನೆ ಎನ್ನುವುದಕ್ಕಿಂತಲೂ ಕಾವ್ಯ ವನ್ನು ರಂಜನೀಯ ಮಾಡಬೇಕು ಎನ್ನುವ ದೃಷ್ಟಿ ಯೇ ಮೇಲುಗೈಯಾಗುತ್ತದೆ. ಇಲ್ಲಿ ಒಬ್ಬ ತಂದೆ ಮಾತನಾಡುತ್ತಿಲ್ಲ. ಒಬ್ಬ ಪುರುಷ ಮಾತನಾಡುತ್ತಿದ್ದಾನೆ ಎಂದೇ ಎನಿಸುತ್ತದೆ. ಇದು ಆ ಕಾಲದ ಸತ್ಯವೂ ಹೌದು ಈ ಕಾಲದ ಸತ್ಯವೂ ಹೌದು ಎಂದು ನನಗೆ ಅನ್ನಿಸುತ್ತದೆ. ಹೆಣ್ಣಿನ ಭಾವಕೋಶವನ್ನು ಪ್ರಾಚೀನ ಕವಿಗಳು ಹಿಡಿದಿರಬಹುದು ಆದರೆ ಅವಳನ್ನು ಭೋಗಕ್ಕೆ ಬಳಸಿರುವುದೇ ಹೆಚ್ಚು. ಸಾಮಾಜಿಕ ಕಾರಣಗಳನ್ನು ಕೊಟ್ಟಾಕ್ಷಣ ವಸ್ತುಸ್ಥಿತಿ ಯೇನೂ ಬದಲಾಗುವುದಿಲ್ಲವಲ್ಲ. ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಬೇಕು ಎನ್ನುವುದು ನೀರು ಬೇಕು ಎನ್ನುವ ಆಸರದಂತಹ ಒಂದು ಆಸರ ಎಂದು ಮಾಸ್ತಿಯವರು ಒಂದು ಕತೆಯಲ್ಲಿ ಹೇಳುತ್ತಾರೆ. ಹಿಂದೆ ಪುರುಷರೇ ಹೆಚ್ಚಾಗಿ ಕಾವ್ಯಗಳನ್ನು ರಚಿಸಿದ್ದರಿಂದ ಹೀಗೆ ಆಗುವುದು ಎದ್ದುಕಾಣುತ್ತದೆ ಅಲ್ಲವೇ?
ಯಾರಾದರೂ ಹೆಣ್ಣೊಬ್ಬಳ ನಿತಂಬ ಮೊಲೆಗಳನ್ನು ಸಾರ್ವಜನಿಕವಾಗಿ ಹೊಗಳಿದಾಗ ಅವಳಿಗೆ ಸಂತೋಷವಾಗುವುದೋ ಮುಜಗರವಾಗುವುದೋ?
(ಏಕಾಂತದ ಪ್ರಶ್ನೆ ಬೇರೆ)

 

ಪುಟ್ಟು ಕುಲಕರ್ಣಿ 

90 ರ ದಶಕದ ನಂತರದಲ್ಲಿ ಅಕಾಡಿಮಿಕ್ ವಲಯದಲ್ಲಿ “ಹಳಗನ್ನಡ”ವನ್ನು , ಅದರಲ್ಲಿದ್ದ “ಸಂಸ್ಕೃತ”ದ ವಿಷಯವಾಗಿ ವಿರೋಧಿಸಿ, ರೂಪಣೆಗೊಂಡ ಕಾವ್ಯಾಭ್ಯಾಸದಲ್ಲಿ ಹಳಗನ್ನಡದ ರಸಾಸ್ವಾದದ ಓದು, ವಿಚಾರ ವಿನಿಮಯ , ವಿಮರ್ಶೆ, ಪ್ರಚಲಿತದಲ್ಲಿ ಆ ಕಾವ್ಯವು ಹೇಳುತ್ತಿರುವ ಸಾರ್ವಕಾಲಿಕ ಸತ್ಯಗಳನ್ನು ಅರ್ಥೈಸಿಕೊಳ್ಳುವ ಪದ್ಧತಿ ನಿಂತೇ ಹೋಗಿದೆ. ಅದರ ಫಲಿತಾಂಶವನ್ನು ಇಂದು ಮಂಡಿಸಲ್ಪಡುತ್ತಿರುವ ಹೇಳಿಕೆಗಳಲ್ಲಿ ಕಾಣುತ್ತಿದ್ದೇವೆ.

ರನ್ನನನ್ನು ಓದಲು , ಪಂಪನನ್ನು ಅರ್ಥೈಸಿಕೊಳ್ಳಲು ರೂಪಣೆಗೊಂಡ ಪ್ರಯತ್ನಗಳು , ಶಾಂತಿನಾಥ ಪುರಾಣ, ರುದ್ರಭಟ್ಟನ ಜಗನ್ನಾಥ ಚರಿತ್ರೆ, ಅಲ್ಲಮನ ಬೆಡಗಿನ ವಚನಗಳ ಪರಿಭಾಷೆ ಇತ್ಯಾದಿಗಳಲ್ಲಿ ಮೂಡಲೇ ಇಲ್ಲ. ಈ ಕಂದಕವನ್ನು ತುಂಬುವದು ಒಂದು ದೊಡ್ಡ ಸವಾಲು. ಕನ್ನಡ ವಿಶ್ವವಿದ್ಯಾಲಯವಾದರೂ ಈ ದಿಸೆಯಲ್ಲಿಯೇssss ಕಾರ್ಯ ನಿರ್ವಹಿಸಲು ಇಚ್ಛಿಸಿದರೆ ಏನನ್ನಾದರೂ ಕಾಣಬಹುದೇನೋ

ಶ್ರೀರಂಗ ಯಲಹಂಕ 

ಇದು ನನ್ನ ಒಂದು ‘ಅಸಾಹಿತ್ಯಿಕ ಪ್ರತಿಕ್ರಿಯೆ’!!
೧. ಇಂದಿನ ನಮ್ಮ ಸಾಹಿತ್ಯದ ಓದಿಗೆ ಹಳಗನ್ನಡ ಕಾವ್ಯಗಳ ಓದು ಅವಶ್ಯಕವೆ?
೨.ಇಂದು ಒಂದು ಕತೆಯನ್ನೋ, ಕವಿತೆಯನ್ನೋ ಬರೆಯುವಾಗ ಹಳಗನ್ನಡ ಸಾಹಿತ್ಯದ ಓದು ಯಾವ ರೀತಿ ಪ್ರಯೋಜನಕ್ಕೆ ಬರುತ್ತದೆ? ಪ್ರತಿಭೆ ಮುಖ್ಯವೋ ಪರಂಪರೆಯ ಓದು ಮುಖ್ಯವೋ?
೩.ಹಳಗನ್ನಡ ಸಾಹಿತ್ಯದಲ್ಲಾಗಲಿ, ಹೊಸಗನ್ನಡ ಸಾಹಿತ್ಯವೇ ಆಗಲಿ ಅವುಗಳಲ್ಲಿ ನಮ್ಮ ಇಂದಿನ ‘ನಾನಾ ವಾದಗಳನ್ನು ‘( ರೈತ, ದಲಿತ, ಪುರೋಹಿತಶಾಹಿ ವಿರೋಧಿ, ಜಾಗತಿಕರಣ ವಿರೋಧಿ, ಸ್ತ್ರೀವಾದಿ ಇತ್ಯಾದಿ ನಾನಾ ತರಹದ ಹೆಸರಿನವುಗಳನ್ನು) ಹುಡುಕುವ ಹಠ ಅನಿವಾರ್ಯವೇ?

ಬೊಳುವಾರು

ನಾನು ಆಲಿಸುವುದು, ನಾವು ಓದುವುದು ‘ನಮ್ಮ ನಮ್ಮ ಮಾತುಗಳನ್ನು ಮಾತ್ರ’ ಎಂಬುದು ಸುಳ್ಳಲ್ಲ ಹಾಗಾದರೆ..!!

ಗಿರೀಶ

ತರ್ಕಯಿಸಿ ಎಂದು ನೀವು ಹೇಳುವ ಭಾಗ ನಾನು ಓದಿದ ಪಾಠದಲ್ಲಿ ತಳ್ಕೈಸಿ(ಹಳೆಗನ್ನಡದ ಳ, ಇಲ್ಲಿ ಅದನ್ನು ಬರೆಯಲು ಆಗುತ್ತಿಲ್ಲ ನನಗೆ) ಎಂದೇ ಇದೆ. ಅಂದರೆ ಆಲಂಗಿಸಿ ಅಂತಾಗುತ್ತದೆ. ತರ್ಕೈಸಿ ಅಂದರೂ ಅದೇ ಆಲಂಗಿಸುವ ಅರ್ಥವೇ ಹೊಂದುತ್ತದೆ. ತರ್ಕ ಮಾಡಿದುದು ಅನ್ನುವುದಕ್ಕೆ ಅಷ್ಟು ಮಹತ್ವ ಏನೂ ಕಾಣುವುದಿಲ್ಲ ಅಲ್ಲಿ. –ಅಜಕ್ಕಳ ಗಿರೀಶ

ಪ್ರತಿಭಾ ನಂದಕುಮಾರ್ 

In reply to ಗಿರೀಶ.ಎಸ್ ಜಿ ನರಸಿಂಹಾಚಾರ್ ಅವರು ಸಂಪಾದಿಸಿದ ಆವೃತ್ತಿಯಲ್ಲಿ ತರ್ಕೈಸಿ ಕೊಂಡು ಅಂತ ಇದೆ. ಕುಂದಣಕಾರರ ಸಂಪಾದಿತ ಆವೃತ್ತಿಯಲ್ಲಿ “..ಎಂದು ಮನದೊಳೆ ಬಗೆದು ಮಗಳ ಮೊಗಮಂ ಮುಗುಳ್ ನಗೆವೆರಸು ನೋಡಿದಾಗಳ್ ” ಅಂತ ಮಾತ್ರ ಇದೆ. ಇದು ತಳ್ಕೈಸಿ ಅಂತ ಮತ್ತು ಅದು ಆಲಂಗಿಸಿ ಅಂತ ಗೊತ್ತಿರಲಿಲ್ಲ.

1 comment

  1. ಶ್ರೀರಂಗ ಯಲಹಂಕ ಅವರ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಅದೇ ಪ್ರಶ್ನೆ ನಂದೂ…

Leave a Reply