ಪುರೋಹಿತರಿಲ್ಲ, ಪಾದ್ರಿಗಳಿಲ್ಲ… ಮಂತ್ರಗಳಿಲ್ಲ, ಶ್ಲೋಕಗಳಿಲ್ಲ.. ಮುಹೂರ್ತವಿಲ್ಲ..

 

 

 

 

 

ಚಂದ್ರಶೇಖರ ಮಂಡೆಕೋಲು 

ಇಂದಿಗೆ ಸರಿಯಾಗಿ 35 ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಅಪರೂಪದ ಮದುವೆ…. ಸುಳ್ಯದ ನೆಹರೂ ಮೆಮೋರಿಯಲ್​ ಕಾಲೇಜಿನ ಸಭಾಂಗಣ… ಪುರೋಹಿತರಿಲ್ಲ, ಪಾದ್ರಿಗಳಿಲ್ಲ… ಮಂತ್ರಗಳಿಲ್ಲ, ಶ್ಲೋಕಗಳಿಲ್ಲ.. ಮುಹೂರ್ತವಿಲ್ಲ.. ಬಹುಶಃ ಆ ಪ್ರದೇಶದಲ್ಲಿ ಭಾರೀ ಚರ್ಚೆಗೊಳಗಾದ ಮೊದಲ ಮದುವೆ. ಪಕ್ಕಾ ಗ್ರಾಮೀಣ ಪ್ರದೇಶದಲ್ಲಿ ಕುತೂಹಲ ಮೂಡಿಸಿದ್ದ ಆ ಮದುವೆಗೆ ಎರಡು ಸಾವಿರ ಜನ ಸೇರಿದ್ದರಂತೆ..!

ಹಾಗೆ ಗುರುಗಳಾದ ಪ್ರಭಾಕರ ಶಿಶಿಲರು ಸೆಲಿನ್​ ಮೇಬಲ್​ ಮಾಡ್ತಾರನ್ನು ಮದುವೆಯಾಗಿದ್ದರು… ಎರಡೂ ಕುಟುಂಬದ ವಿರೋಧದ ನಡುವೆ ಮದುವೆ ನಡೆದಿತ್ತು. ಒಂದು ಸಾವಿರ ಜನರಿಗೆ ಆಮಂತ್ರಣ ಪತ್ರ ಕೊಟ್ಟಿದ್ದರು.. ಆದರೆ ಮದುವೆಗೆ ಬಂದದ್ದು 2 ಸಾವಿರ ಜನ… ಆಮಂತ್ರಣವಿಲ್ಲದಿದ್ದರೂ ಕುತೂಹಲದಿಂದ ಮದುವೆ ನೋಡಲು ಜನ ನೆರೆದಿದ್ದರು…

ಕಾಲೇಜಿನ ಸ್ಥಾಪಕ ದಿ. ಕುರುಂಜಿ ವೆಂಕಟರಮಣ ಗೌಡರು ದಂಪತಿಗೆ ಶುಭ ಹಾರೈಸಿ, ಇಂಥ ಮದುವೆಗಳು ಇನ್ನಷ್ಟು ನಡೆಯಬೇಕು ಎಂದು ಆ ವೇದಿಕೆಯಲ್ಲೇ ಹೇಳಿದ್ದರಂತೆ… (ಶಿಶಿಲರ ಒಡನಾಡಿ Purushottama Bilimale ಯವರಿಗೆ ಇನ್ನೂ ಚೆನ್ನಾಗಿ ಗೊತ್ತು…)

ಸಾಹಿತ್ಯ ಕ್ಷೇತ್ರಕ್ಕೆ ನನಗೆ ಶಿಶಿಲರೇ ಮೊದಲ ಗುರು.. ವೈಚಾರಿಕತೆ ಎಂದರೇನೆಂದು ಬದುಕಿನ ರೀತಿಯಲ್ಲೇ ತೋರಿಸಿಕೊಟ್ಟವರು… ಒಬ್ಬ ಪ್ರಾಧ್ಯಾಪಕ ಹೇಗೆ ಪ್ರಗತಿಪರ ಚಿಂತನೆ ಹರಡಬಹುದೆಂಬುದನ್ನು ತೋರಿಸಿಕೊಟ್ಟವರು… ಮೂಢನಂಬಿಕೆ, ಸಂಸ್ಕೃತಿಯ ಅನಾಚಾರವನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತಿದ್ದರು.. ಆದರೆ ಇಂದಿನ ಹಾಗೆ ಅದು ಉದ್ರೇಕಗೊಳ್ಳುತ್ತಿರಲಿಲ್ಲ…

ಇವರ ಕ್ಲಾಸುಗಳನ್ನು ಯಾರೂ ತಪ್ಪಿಸುತ್ತಿಲಿಲ್ಲ.. ಅಲ್ಲಿ ಬದುಕಿನ ಪಾಠವಿತ್ತು… ವೈಚಾರಿಕತೆಯ ಲೇಪದೊಂದಿಗೆ.. ವಿಶೇಷವೆಂದರೆ ಆ ಕ್ಲಾಸುಗಳಿಗೆ ಮಾಮೂಲಾಗಿ ಬಂಕ್​ ಹಾಕುತ್ತಿದ್ದ ಕೆಲ ಎಬಿವಿಪಿಯ, ಎನ್​ಎಸ್​ಯುಐಯ ಗೆಳೆಯರೂ ಹಾಜರಾಗುತ್ತಿದ್ದರು…

ತಾಳಮದ್ದಲೆಯಲ್ಲಿ ರಾವಣನಾಗಿ, ಕರ್ಣನಾಗಿ ಅರ್ಥ ಹೇಳಿ ರಾಮನನ್ನೋ, ಕೃಷ್ಣನನ್ನೋ ಟೀಕಿಸಿದರೆ ಆ ವಾದ ವೈಖರಿಗೆ ಜನ ಚಪ್ಪಾಳೆ ತಟ್ಟುತ್ತಿದ್ದರು…

ಹಲವು ಸಾಹಿತ್ಯ ಕೃತಿಗಳು, ಅರ್ಥಶಾಸ್ತ್ರದಲ್ಲಿ ಕನ್ನಡ ಕೃತಿಗಳನ್ನು ರಚಿಸಿದ ಶಿಶಿಲರು ಈಗ ನಿವೃತ್ತರಾಗಿದ್ದಾರೆ… ಅಮ್ಮನಂಥವರು ಶೈಲಾ ಮೇಡಂ. ಶಿಕ್ಷಕಿಯಾಗಿ, ಸ್ಕೌಟ್ಸ್​, ಗೈಡ್ಸ್​ನಲ್ಲಿ ರಾಷ್ಟ್ರಪತಿ ಪುರಸ್ಕಾರ ಪಡೆದವರು… ಅವರ ಕೈಯಡುಗೆ ಉಂಡದ್ದಕ್ಕೆ ಲೆಕ್ಕವಿಲ್ಲ…

ಮೊನ್ನೆಯಷ್ಟೇ ಕುಪ್ಪಳಿಯಲ್ಲಿ ಮಗಳು ಪ್ರತೀಕ್ಷಾಳಿಗೂ ಮಂತ್ರ ಮಾಂಗಲ್ಯ ಮದುವೆ ನಡೆಸಿದ್ದಾರೆ… ಪ್ರತೀಕ್ಷಾ ಆಂಗ್ಲ ಭಾಷಾ ಉಪನ್ಯಾಸಕಿ.. ಮಗ ಪೃಥ್ವೀಸಾಗರ ಕರ್ನಾಟಕ ಬ್ಯಾಂಕ್​ನಲ್ಲಿ ಉದ್ಯೋಗಿಯಾಗಿದ್ದಾನೆ.

ಶಿಶಿಲರು ಸ್ಥಳೀಯ ಮೆಡಿಕಲ್​ ಕಾಲೇಜಿಗೆ ದೇಹದಾನ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ.. ಶಿಶಿಲರು ಫೇಸ್​ಬುಕ್​ನಲ್ಲಿಲ್ಲ.. ವಾಟ್ಸಪ್​ನಲ್ಲೂ ಇಲ್ಲ…

 

ಶಿಶಿಲರನ್ನು ಕಟೀಲು ಸತ್ಲರಂಗನಾಥ ರಾವ್ ಸಂದರ್ಶಿಸಿದ ವಿಡಿಯೋ ಲಿಂಕ್

https://youtu.be/4WvT-Fn3QG4

Leave a Reply