ನ್ಯೂಸ್ ಏಜೆನ್ಸಿ ಗೊತ್ತಿಲ್ಲದೆಯೂ ಪದವಿ ಪಡೆದರು..

ಕರಾವಳಿಯ ಪತ್ರಿಕೋದ್ಯಮದಲ್ಲಿನ ಪ್ರಮುಖ ಹೆಸರು ಚಿದಂಬರ ಬೈಕಂಪಾಡಿ.

‘ಇದು ಮುಂಗಾರು’ ಕೃತಿ ಕನ್ನಡದಲ್ಲಿ ಹೊಸ ಅಲೆಯ ಪತ್ರಿಕೋದ್ಯಮ ಎಂದೇ ಹೆಸರಾದ ‘ಮುಂಗಾರು’ ದಿನಗಳಿಗೆ ಹಿಡಿದ ಕನ್ನಡಿ. ಇದರೊಂದಿಗೆ ಪ ಗೋಪಾಲಕೃಷ್ಣರಾಯರ ಬಗ್ಗೆ ಇವರು ರಚಿಸಿರುವ ಕೃತಿ ಮತ್ತೊಂದು ಮಗ್ಗುಲಿನಿಂದ ಕರಾವಳಿ ಪತ್ರಿಕೋದ್ಯಮವನ್ನು ನಿಕಷಕ್ಕೊಡ್ಡಿದೆ.

ಮುಂಗಾರು ನಂತರ ‘ಕನ್ನಡಪ್ರಭ’ ದೈನಿಕದಲ್ಲಿ  ಧೀರ್ಘ ಕಾಲ ಸೇವೆ ಸಲ್ಲಿಸಿದ ಚಿದಂಬರ್ ವೈಎನ್ಕೆ, ಜಿ ಎಸ್ ಸದಾಶಿವರಂತ ಹಿರಿಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಪಳಗಿದವರು.

ಇನ್ನು ಮುಂದೆ ತಮ್ಮ ನೆನಪುಗಳ ಸುರಳಿಯನ್ನು ‘ಅವಧಿ’ಯಲ್ಲಿ ಬಿಚ್ಚಿಡಲಿದ್ದಾರೆ

ಪತ್ರಕರ್ತರಿಗೆ ಏನು ಸಮಸ್ಯೆ?. ಬೇಕಾದಷ್ಟು ಸಂಬಳ ಬರುತ್ತೆ ಹಾಗೆಯೇ ಗಿಂಬಳ ಕೂಡಾ ಬರುತ್ತೆ ಎನ್ನುವ ಮಾತಿದೆ. ಮಾತು ಯಾವ ಕಾಲಕ್ಕೆ ಎನ್ನುವ ಅರಿವಿದ್ದರೆ ಒಳಿತು. ಯಾಕೆಂದರೆ ನಾನು ಪತ್ರಿಕೋದ್ಯಮಕ್ಕೆ ಸೇರಿದ ಕಾಲ 1982. ಆಗ ದಿನಕ್ಕೆಷ್ಟು ಸಂಬಳವೆಂದು ಕೇಳಿದರು ನೀವು ಬೆಚ್ಚಿ ಬೀಳುತ್ತೀರಿ ಅಥವಾ ಕೆಲಸವೂ ಬೇಕಿತ್ತೆ ಎಂದುಕೊಳ್ಳುತ್ತೀರಿ. ಆದರೆ ವಾಸ್ತವವೊಂದಿದೆ ಅದನ್ನು ಮರೆಯುವಂತಿಲ್ಲ.

ಆಗ ನನಗೆ ದಿನಕ್ಕೆ 2 ರೂಪಾಯಿ ಸಂಬಳ

ದಿನವೊಂದು ಆಯಿತೆಂದರೆ ಸಿಗುತ್ತಿದ್ದ ಖುಷಿಯೇ ಬೇರೆ. ಮೂವತ್ತು ದಿನಗಳೂ ಪೂರ್ಣವಾದರೆ ಸಿಗುತ್ತಿದ್ದುದು 60 ರೂಪಾಯಿ. ದಿನಗಳನ್ನು ನೆನಪಿಸಿಕೊಂಡರೆ ಈಗಲೂ ನನಗೆ ಸಂತೋಷವೇ. ಇದು 1975 ಕಾಲ.

ನಾನು ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದೆ. ಕಾರಣವೆಂದರೆ ಆಗ ನಾನು ದುಡಿದರೆ ಅದು ಮುಂದಿನ ನನ್ನ ಕಾಲೇಜು ಜೀವನಕ್ಕೆ ಪ್ಯಾಂಟ್ ಹೊಂದುವುದು. ನಿಮಗೆ ಆಶ್ಚರ್ಯವೇ?.

ಅಂತೂ ನಾನು ಮನೆಯವರ ಒತ್ತಾಯಕ್ಕೆ ಡಿಪ್ಲೊಮಾ ಮಾಡಿದೆ. ಆಗ ನನ್ನ ಮನೆ ಬೈಕಂಪಾಡಿಯಿಂದ ಮಂಗಳೂರಿನ ಲಾಲ್ ಬಾಗ್ ಗೆ ಬಂದು ಕದ್ರಿ ಕೆ.ಪಿ.ಟಿಗೆ ಬರಬೇಕಿತ್ತು. ಬೈಕಂಪಾಡಿಯಿಂದ ಲಾಲ್ ಬಾಗ್ ಗೆ ಬರಲು 35 ಪೈಸೆ. ಅಲ್ಲಿಂದ ಕೆಪಿಟಿಗೆ 10 ಪೈಸೆ. ನಾವು 35 ಪೈಸೆ ಕೊಟ್ಟು ಲಾಲ್ ಬಾಗ್ ಗೆ ಬರುತ್ತಿದೆವು, ಆದರೆ 10 ಪೈಸೆ ಉಳಿಸಲು ಕೆಪಿಟಿವರೆಗೆ ಕಾಲು ನಡಿಗೆ ಮಾಡುತ್ತಿದ್ದೆವು.

ಹೀಗೆ ಕಲಿತ ನಾನು ಪತ್ರಕರ್ತ ಹುದ್ದೆಯನ್ನೇ ಆಯ್ಕೆ ಮಾಡಿಕೊಂಡೆ. ನನಗೆ ಬೇಸರವಿಲ್ಲ. ಮುಂದೆ ನಾನುಮುಂಗಾರುಪತ್ರಿಕೆಯ ವರದಿಗಾರನಾದೆ ಹೊತ್ತಿಗೆ ನಾನು ಪಡೆಯುತ್ತಿದ್ದ ಸಂಬಳ ತಿಂಗಳಿಗೆ 750 ರೂಪಾಯಿ. ಸುಮಾರು 1986 ಕಾಲ. ಆಗ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯನಾಗಿ ರಾಜ್ಯಪಾಲರಿಂದ ನೇಮಕಗೊಂಡೆ. ನಾನೇ ಮಂಗಳೂರು ವಿಶ್ವವಿದ್ಯಾನಿಲಯದ ಮೊಟ್ಟಮೊದಲ ಪತ್ರಕರ್ತರ ಪ್ರತಿನಿಧಿಯೆಂಬ ಹೆಗ್ಗಳಿಕೆ.

ಆಗ ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮಾಸ್ ಕಮ್ಯುನಿಕೇಷನ್ ಆರಂಭಿಸಿತ್ತು. ನಾನು ಸೆನೆಟ್ ಸಭೆಗೆ ಹೋದಾಗ ದಿನದ ಸಭೆಯಲ್ಲಿ ಮಾಸ್ ಕಮ್ಯುನಿಕೇಷನ್ ವಿಭಾಗ ವಿಷಯ ಚರ್ಚೆಯಾಗುವುದಿತ್ತು. ಪತ್ರಕರ್ತರಾದವರಿಗೆ ಮುಖ್ಯವಾಗಿ ಸುದ್ದಿಯ ಮೂಲ ಎಲ್ಲಿಂದ, ಹೇಗೆ ಬರುತ್ತದೆ ಎನ್ನುವುದು ಗೊತ್ತಿರಬೇಕು. ಹಾಗೆಯೇ ಯಾವುದು ಮುಖ್ಯ ಸುದ್ದಿ ಎನ್ನುವುದನ್ನು ಆಯ್ಕೆಮಾಡಿ ಅದನ್ನು ಪತ್ರಿಕೆಯಲ್ಲಿ ಮುದ್ರಿಸುವ ಹೊಣೆಗಾರಿಕೆ. ಮೂಲಭೂತ ಅಂಶ ಗೊತ್ತಿರಬೇಕಾದರೆ ನ್ಯೂಸ್ ಬರುವ ಪಿಟಿಐ, ಯುಎನ್ ಏಜೆನ್ಸಿಗಳ ಅರಿವಿರಬೇಕಿತ್ತು.

ನಾನು ತಿಳಿದಂತೆ ಕಾಲದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕನಿಷ್ಟ ಪಿಟಿಐ, ಯುಎನ್ ಏಜೆನ್ಸಿಗಳನ್ನೇ ಹೊಂದಿರಲಿಲ್ಲ, ವಿದ್ಯಾರ್ಥಿಗಳಿಗೂ ಅದರ ಗೋಚರವಿರಲಿಲ್ಲ. ಆದರೂ ಪಾಠ ಮಾಡುತ್ತಿದರು. ಸ್ನಾತಕೋತ್ತರ ಪದವಿ ಕೊಡುತ್ತಿದ್ದರು. ಈಗ ಎಂ.ಸವದತ್ತಿ ವಿಶ್ವವಿದ್ಯಾನಿಲಯದ ವೈಸ್ ಛಾನ್ಸಿಲರ್.

ನಾನು ಪ್ರಶ್ನೆ ಕೇಳಲು ಕೈ ಎತ್ತಿದೆ, ನನಗೆ ಅವಕಾಶವೇ ಸಿಗಲಿಲ್ಲ. ಮೂರು ನಾಲ್ಕು ಸಲ ಕೈ ಎತ್ತಿ ಗಮನ ಸೆಳೆದಾಗ ವಿ.ಸಿ. ಕೇಳಲು ಅನುವು ಮಾಡಿಕೊಟ್ಟರು. ‘ಸಾರ್ ಸ್ನಾತಕೋತ್ತರ ಪತ್ರಿಕೋದ್ಯಮವೇ ಬೇಡ ಇದನ್ನು ನಿಲ್ಲಿಸಿಎಂದೆ. ಇಡೀ ಸಭೆ ತಬ್ಬಿಬ್ಬಾಯಿತು. ಇದೇನು ವಿಷಯ ಎಂದು ಎಲ್ಲರಿಗೂ ಆಶ್ಚರ್ಯ.

ಆಗವಿಷಯ ಏನೆಂದರೆ ವಿದ್ಯಾರ್ಥಿಗಳಿಗೆ ಪಿಟಿಐ, ಯುಎನ್ ಏಜೆನ್ಸಿಗಳ ಸುದ್ದಿಗಳಲ್ಲೇ ನೋಡಿಲ್ಲ, ಆದರೂ ಇವರು ಪತ್ರಿಕೋದ್ಯಮ ಪಾಸ್ ಆಗಿ ಹೋಗುತ್ತಾರೆ. ಹಾಗಾದರೆ ಅವರಿಗೆ ಎಷ್ಟು ತಿಳುವಳಿಕೆ ಇದೆ, ಅವರನ್ನು ಪತ್ರಿಕೆಯಲ್ಲಿ ಕೇಳಿದರೆ ಏನು ಹೇಳಬೇಕುಎಂದೆ.

ವಿ.ಸಿ. ಸರಿ ಎಂದವರೇ ನಾಳೆಯೇ ಪಿಟಿಐ, ಯುಎನ್ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಿ ಎಂದು ತೀರ್ಪುಕೊಟ್ಟರು. ಮತ್ತೆ ನಾನು ಪ್ರಶ್ನೆ ಎತ್ತಿದ್ದಕ್ಕೆ ಅಭಿನಂದಿಸಿದರು ಕೂಡಾ.

ಪ್ರಶ್ನೆ ಕೇವಲ ಸಾಮಾನ್ಯ ಎನಿಸಿದರೂ ಕೂಡಾ ನೀವುನಾವು ಸಂದರ್ಭವನ್ನು ಆಲೋಚಿಸಿದರೆ ತೀರಾ ಅನಿವಾರ್ಯವಾದ ಒಂದು ಮುಖ್ಯ ವಿಷಯವನ್ನೇ ಮರೆತು ಶಿಕ್ಷಕರು ಪಾಠ ಮಾಡುತ್ತಿದ್ದರಲ್ಲ ಯಾಕೆ?. ಹಾಗಾದರೆ ನ್ಯೂಸ್ ಬರುವುದು, ಅದನ್ನು ನೋಡುವುದು ಮುಖ್ಯವಲ್ಲವೇ ?. ಹೀಗೆ ನೋಡದೆಯೇ ಪಾಸ್ ಆಗಿ ಹೋದ ವಿದ್ಯಾರ್ಥಿಗಳು ಮುಂದೆ ಎಂಥ ಕಹಿ ಅನುಭವ ಪಡೆದರು. ಇದು ಪತ್ರಿಕೋದ್ಯಮದ ಇತಿಹಾಸ. ಈಗ ವಿಭಾಗದಲ್ಲಿ ಏನೇನೋ ಕಲಿತವರು ಬರುತ್ತಿದ್ದಾರೆ, ಸಬ್ಜೆಕ್ಟ್ ಎಕ್ಸ್ ಪರ್ಟ್ ಕೂಡಾ ಇದ್ದಾರೆಂದು ತಿಳಿದಿದ್ದೇನೆ. ಅವರಿಗೆ ಶುಭವಾಗಲಿ.

Leave a Reply