ಉಭಯ ಗರಡಿಯಲ್ಲಿ..

ಪತ್ರಿಕೋದ್ಯಮದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದು ಅನೇಕರಿಗೆ ತಿಳಿದಿರುವುದಿಲ್ಲ ಹಾಗೆಂದು ಎಲ್ಲವೂ ತಿಳಿಯಲೇಬೇಕೆಂದಿಲ್ಲ ಬಿಡಿ. ರೋಚಕ ಕಾರಣಕ್ಕೋ ಅಥವಾ ನಮಗೆ ಬೇಕಾಗುತ್ತದೆಂದೋ ಹೇಳಿಕೊಳ್ಳುತ್ತೇವೆ. ಹೇಳಿಕೊಂಡು ಸ್ವಲ ಕಾಲ ನೆನಪಿಟ್ಟುಕೊಂಡು ಮರೆತು ಬಿಡುತ್ತೇವೆ. ಆದರೆ ಅನೇಕ ಘಟನೆಗಳು ಮರೆಯದೇ ಉಳಿದುಬಿಡುತ್ತವೆ. ಅಂತಹ ಒಂದು ಘಟನೆ ಇದೂ ಒಂದು.

ನಾನು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಮುಖ್ಯ ವರದಿಗಾರನಾಗಿದ್ದ ಕಾಲ ಅಂದರೆ 1997 ರಲ್ಲಿ. ಆಗಷ್ಟೇ ಕಂಪ್ಯೂಟರ್ ಬಳಕೆಗೆ ಬಂದಿತ್ತು. ಅದಕ್ಕೂ ಮೊದಲು ನಾನು ಟೆಲಿಗ್ರಾಮ್ ವ್ಯವಸ್ಥೆಯನ್ನು ಹೊಂದಿದ್ದೆವು. ಆಗ ನನಗೆ ಒಂದು ಕಂಪ್ಯೂಟರ್, ಇಂಡಿಯನ್ ಎಕ್ಸ್ ಪ್ರೆಸ್ ಗೆ ಒಂದು ಕಂಪ್ಯೂಟರ್ ಇತ್ತು. ಆಗ ಎರಡೂ ಪತ್ರಿಕೆಗಳು ಒಂದೇ ಕಚೇರಿ ಹೊಂದಿದ್ದವು. ಸ್ಟೇಟ್ ಬ್ಯಾಂಕ್ ಪಕ್ಕದ ಒಂದು ಕಚೇರಿ.

ಎನ್.ಆರ್.ಉಭಯ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮುಖ್ಯವರದಿಗಾರರು. ಆಗ ವರದಿಯನ್ನು ಕಂಪ್ಯೂಟರ್ ನಲ್ಲಿ ಕಳುಹಿಸಿಕೊಡುಬೇಕಿತ್ತು. ಆದರೆ ಉಭಯರಿಗೆ ಎಕ್ಸೆಪಷನ್. ಅವರಿಗೆ ಕಣ್ಣು ಕಾಣುವುದಿಲ್ಲ ಮತ್ತು ಮತ್ತು ಹಿರಿಯರು ಎನ್ನುವ ಕಾರಣಕ್ಕೆ . ಉಭಯರು ವರದಿಗಾರರಾಗಿ ಸಾಕಷ್ಟು ಹೆಸರು ಮಾಡಿದ್ದರು. ಅವರನ್ನು ಕಂಡರೆ ಹೆದರುವವರೇ ಹೆಚ್ಚು.

ಆದರೆ ಉಭಯರಿಗೆ ಇಂಗ್ಲೀಷ್ ಚೆನ್ನಾಗಿ ಗೊತ್ತಿತ್ತು. ಬರೆಯಲು ಬರುತ್ತಿರಲಿಲ್ಲ. ಅವರ ಕೈನಡುಗುವುದು ಒಂದು ಕಾರಣವಾದರೆ ಮತ್ತೊಂದು ಕಾರಣ ಅವರಿಗೆ ಇಂಗ್ಲೀಷ್ ಶಬ್ದ ಚೆನ್ನಾಗಿ ಗೊತ್ತಿತ್ತು. ಆದರೆ ಅದರ ಸ್ಪೆಲ್ಲಿಂಗ್ ಕೇಳಿದರೆ ಹೇಳಲು ಆಗುತ್ತಿರಲಿಲ್ಲ, ಆದರೆ ವಾಕ್ಯವನ್ನು ಅಚ್ಚುಕಟ್ಟಾಗಿ ಹೇಳುತ್ತಿದ್ದರು. ಇದು ಅಪರೂಪದ ಘಟನೆ. ಉಭಯರು ಸ್ಪೆಲ್ಲಿಂಗ್ ಹೇಳಲು ಆಗುವುದಿಲ್ಲ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಒಂದು ಸಲ ‘ಚಿದು ಸ್ಪೆಲ್ಲಿಂಗ್ ಎಂಚ,  ದಾನೇ ಮಾರಾಯ ಸ್ಪೆಲ್ಲಿಂಗ್ ಎಂಕ್ ಮದಪುಂಡು ಮಾರಾಯ’ (ಚಿದು ಆ ಸ್ಪೆಲ್ಲಿಂಗ್ ಏನು ಮಾರಾಯ. ನನಗೆ ಮರೆವು ಮಾರಾಯ). ನಾನು ಬೇಕೇಂದೇ ಅದು ನನಗೂ ನೆನಪಿಲ್ಲ ಎಂದು ಹೇಳುತ್ತಿದ್ದೆ, ಬಿಡು ಹೋಗಲಿ ಎನ್ನುತ್ತಿದ್ದರು. ದಿನಕ್ಕೆ ಒಂದು ಸಲವಾದರೂ ಅವರಿಗೆ ಸ್ಪೆಲ್ಲಿಂಗ್ ಸಮಸ್ಯೆ ಬರುತ್ತಿತ್ತು. ಅಂದಹಾಗೆ ಇದನ್ನು ಬರೆಯುವವರು ಬೇರೆಯೇ, ಇವರು ಬಾಯಲ್ಲಿ ಹೇಳುವುದನ್ನು ಸ್ಪೆಲ್ಲಿಂಗ್ ಸರಿಮಾಡಿ ಬರೆಯುವವರು ಬೇರೆಯೇ.

ಇಂಥ ಕೆಲಸಕ್ಕೆಂದೇ ಒಬ್ಬರನ್ನು ಉಭಯರು ನಿಯೋಜಿಸಿಕೊಂಡಿದ್ದರು. ಅವರು ಮಧ್ಯಾಹ್ನ ಬಂದು ಉಭಯರು ಹೇಳುವುದನ್ನು ಬರೆದುಕೊಟ್ಟು ಹೋಗುವುದು. ಇದು ಆರಂಭದಲ್ಲಿ ಮಧ್ಯಾಹ್ನವಾಯಿತು, ನಂತರ ಬೆಳಿಗ್ಗೆಯಿಂದ ಸಂಜೆವರೆಗೂ ಇತ್ತು.

ಹೀಗೆ ಬರೆಯಲು ಬರುವವರಿಗೆ ಉಭಯರೇ ಸ್ವಂತ ಕೈನಿಂದ ಹಣಕೊಡುತ್ತಿದ್ದರು. ಇನ್ನು ಬರೆದುಕೊಟ್ಟರೆ ಆಯಿತಾ ಅದನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡುವವರು ಬೇಕಲ್ಲ ಅವರಿಗೂ ಇವರೇ ಸಂಬಳ ಕೊಡಬೇಕು. ಆಕೆ ಸಂಜೆ ವೇಳೆಗೆ ಬಂದು ಬರೆದಿಟ್ಟದ್ದನ್ನೆಲ್ಲಾ ಟೈಪ್ ಮಾಡಿ ಅದನ್ನು ಬೆಂಗಳೂರಿಗೆ ಕಳುಹಿಸಬೇಕು.

ಈ ಕಾಲದಲ್ಲಿ ಬರೆಯುವ ಮತ್ತು ಟೈಪಿಂಗ್ ಮಾಡುವ ಎರಡೂ ಕೆಲಸವನ್ನು ಬಲ್ಲವರಿಗಾಗಿ ಉಭಯರು ಹುಡುಕುತ್ತಿದ್ದರು. ಆಗ ಜ್ಯೋತಿ ಎಂಬಾಕೆ ಅದೇಗೋ ಕಚೇರಿಗೆ ಬಂದು ಕೆಲಸಕ್ಕೆ ಸೇರಿದರು.

ಉಭಯರಿಗೆ ಒಂಥರಾ ನೆಮ್ಮದಿ. ಜ್ಯೋತಿಗೆ ವರದಿ ಮಾಡಲು, ಬರೆಯಲು ಮತ್ತು ಟೈಪಿಂಗ್ ಬರುತ್ತದೆ ಎನ್ನುವುದು ಖುಷಿ. ಇಬ್ಬರಿಗೆ ಕೊಡುವ ಸಂಬಳವನ್ನು ಒಬ್ಬರಿಗೇ ಕೊಟ್ಟು ಕೆಲಸ ಮಾಡಿಸಿಕೊಳ್ಳಬಹುದಲ್ಲಾ ಅದಕ್ಕೇ. ಆದರೆ ಜ್ಯೋತಿಗೆ ಈ ವಿಷಯ ಗೊತ್ತಿರಲಿಲ್ಲ. ಆಕೆ ಬೆಳಿಗ್ಗೆ ಬಂದು ಬರೆಯುವುದು ಮಾಮೂಲಿ ಕೆಲಸ ಮಾಡುವುದು ವಾಡಿಕೆ. ಜ್ಯೋತಿ ತಿಂಗಳು.. ಎರಡು ತಿಂಗಳು.. ಮೂರು ತಿಂಗಳು ಆದರೂ ಕೆಲಸ ಮಾಡುತ್ತಿದ್ದರು. ಸಂಬಳವನ್ನು ಕೇಳುತ್ತಿದ್ದರೋ ಅಥವಾ ಕೇಳುತ್ತಿರಲಿಲ್ಲವೋ ಏನೋ.

ಜ್ಯೋತಿ ಇದ್ದರೂ ಇಬ್ಬರೂ ಮತ್ತೆಯೂ ಬರುತ್ತಿದ್ದರು. ಉಭಯರು ಮಾಮೂಲಿಯಾಗಿ ಸುದ್ದಿ ಬಾಯಲ್ಲಿ ಹೇಳುತ್ತಿದ್ದರು ಟೈಪ್ ಮಾಡಿಕೊಟ್ಟು ಬೆಂಗಳೂರಿಗೆ ಕಳುಹಿಸುತ್ತಿದ್ದರು. ಒಂದು ದಿನ ಜ್ಯೋತಿಯನ್ನು ಕೇಳಿದೆ ‘ನಿಮಗೆ ಏನು ಹೇಳಿದರು ಉಭಯ’ ಎಂದು. ಆಗ ಜ್ಯೋತಿ ಕೈಮೇಲೆತ್ತಿದರು. ಅದರರ್ಥ ಸಂಬಳ ಕೊಟ್ಟಿಲ್ಲವೆಂದೋ ಅಥವಾ ಏನನ್ನು ಹೇಳಿಲ್ಲವೆಂದೋ ಗೊತ್ತಾಗಲಿಲ್ಲ.

ಉಭಯರು ನಿಜಕ್ಕೂ ಒಳ್ಳೆಯ ವ್ಯಕ್ತಿ. ಅವರಿಗೆ ಕೆಲಸವನ್ನು ಎಲ್ಲರಿಗಿಂತ ಚೆನ್ನಾಗಿ ಮಾಡಬೇಕು, ಗುರುತಿಸಿಕೊಳ್ಳಬೇಕು ಎನ್ನುವ ಅತೀ ಉತ್ಸಾಹ. ಉಭಯರಿಗೆ ಚೆನ್ನಾಗಿ ತಿನ್ನಬೇಕು ಇತರರಿಗೂ ತಿನ್ನಿಸಬೇಕು. ಅವರು ಕಚೇರಿಗೆ ಬಂದಕೂಡಲೇ ಚಹಾ ಬರುತ್ತಿತ್ತು, ಆಗ ಅಲ್ಲಿದ್ದವರಿಗೂ ಚಹಾ ತಿಂಡಿ ಸಿಗುತ್ತಿದ್ದವು.

ಹೀಗೆ ಚಹಾ ತಿಂಡಿಯಲ್ಲೇ ಮುಗಿಸುತ್ತಿದ್ದ ಉಭಯರು ವೃತ್ತಿಯಲ್ಲಿದ್ದವರಿಗೆ ಕ್ರೆಡಿಟ್ ಸಿಗುತ್ತದೆ ಎಂದರೆ ಸಹಿಸುತ್ತಿರಲಿಲ್ಲ. ಅದಕ್ಕಾಗಿಯೇ ಕಚೇರಿಯಲ್ಲಿ ಯಾರಿದ್ದರೆ ?, ಯಾರು ಬರೆದುಕೊಡುವುದು, ಯಾರು ಟೈಪ್ ಮಾಡಿಕೊಡುವುದು ಎನ್ನುವ ಗುಟ್ಟು ಬೆಂಗಳೂರು ಕಚೇರಿಗೆ ಹೋಗುತ್ತಿರಲಿಲ್ಲ ಬಿಡಿ.

ಇಂಥವರ ಜೊತೆ ಕೆಲಸ ಮಾಡಿದ ಜ್ಯೋತಿ ಟಿವಿ ಚಾನೆಲ್ ನಲ್ಲಿ ಮುಖ್ಯಸ್ಥೆಯೂ ಆದರು. ನಿಜಕ್ಕೂ ನನಗೆ ಖುಷಿ. ಜ್ಯೋತಿ ಗುಡ್ ಲಕ್ ನಿಮಗೆ.

Leave a Reply