ಅವಳು ಬೇಸರ ಮಾಡಿದಾಗೆಲ್ಲಾ..

ಸೋಂಕು

ಧನಂಜಯ ಆಚಾರ್ಯ 

ಪ್ರತೀ ಬಾರಿಯೂ ಅವಳು ಬೇಸರ ಮಾಡಿದಾಗೆಲ್ಲಾ , ಮಾತು ನಿಂತ ಸಮಯಕ್ಕೆಲ್ಲಾ, ಯಾವುದಾದರೂ ಕಾರಣ ಸಿಗುತ್ತದೆಯೇ ಎಂದು ಹುಡುಕುವುದೇ ಕೆಲಸವಾಗಿದೆ.
ಧಮ್ಮು ಕಟ್ಟಿ ನಿಂತ ಉಸಿರು ಕಣ್ಣಾಲಿಯನ್ನು ಒದ್ದೆ ಮಾಡದೇ ಇದ್ದರೂ ಬಿಗಿತ ಹೆಚ್ಚಿಸಿ ಕೆಂಪು ಮಾಡುವಲ್ಲಿ ಜಯಿಸುತ್ತದೆ.
ಸೋತನೆಂದು ದಣಿದು ಜಗತ್ತೇ… ಮೇಲೆ ಬಿದ್ದ ಹಾಗೆ ಆಡುವ ಈ ಸ್ವಪ್ನಗಳಿಗೇಕೆ ಅವಳಷ್ಟು ಗಟ್ಟಿತನವಿಲ್ಲ ?
ಅವಳು ಮಾತನಾಡುತ್ತಲೇ ಇರುವ,
ಒಬ್ಬಳೇ ಶ್ವಾಸಗಳ ಮಹತ್ತನ್ನೇ  ಹೊತ್ತು ತರುವ ಸಮುದ್ರದ ಅಲೆಗಳಂತೆ.
ಮರಳಿನ ಹಾಗೇ ಉಳಿಯುವ ನಾನು, ಹಳದಿಗಟ್ಟಿಸುವ ಜ್ವರದ ಸೋಂಕಿನಂತೆ.

Leave a Reply