ನಿದ್ದೆ ಇಲ್ಲದ ರಾತ್ರಿಯಲಿ..

ಗೀತಾ ಹೆಗ್ಡೆ ಕಲ್ಮನೆ 
ನಿದ್ದೆ ಇಲ್ಲದ ರಾತ್ರಿಯಲಿ
ಎದ್ದು ಕೂತು ಮಾಡುವುದೇನು? ಎದ್ದೆ, ನಿಂತೆ, ಕೂತೆ ಮತ್ತೆ ಮಲಗಿದೆ
ನಿದ್ದೆ ಎಲ್ಲೋ ಬೊರಲು ಹೊಡೆದು ಹೋಗಿಬಿಟ್ಟಿರಬೇಕು.ಮನದ ತಾಕಲಾಟ
ನಿದ್ದೆ ಬರುವುದೋ ಇಲ್ಲವೋ

ಆ ಕಡೆ ಈ ಕಡೆ
ಹೊರಳೀ ಹೊರಳೀ ಆಕಳಿಸಿ
ಒಂದಷ್ಟು ಕಾಯುವಿಕೆಯ ಕ್ಷಣ
ಕಳೆಯಿತು ಮಧ್ಯ ರಾತ್ರಿ.ಬೆಳಗಾಗುವುದಿಲ್ಲ ಯಾಕೆ?
ರವಿಯ ಆಗಮನ
ಇಂದಾದರೂ ಬೇಗ ಬರೋಣ ಆಗಿದ್ದರೆ…..
ಎದ್ದು ಓಡಿ ಹೋಗಿಬಿಡಬಹುದಿತ್ತಲ್ಲ
ಜಾಗಿಂಗು, ವಾಕಿಂಗು
ಎಂತದೋ ಒಂದು!ಒತ್ತಟ್ಟಿಗೇ ಒಂದಷ್ಟು
ಕಸುಬು, ಕಾಯಕ ಅದೂ ಇದೂ ಕರೆಯುತ್ತದೆ
ನಾನಂತೂ ಇದ್ದೇನೆ
ಬೇಕಾದರೆ ಮಾಡು
ಎದ್ದೇಳು ನಾ ರೆಡಿ.

ಹೋಗ್ರೋ ನಿದ್ದೆಯಿಲ್ಲದೇ ಒದ್ದಾಟ ನನಗಿಲ್ಲಿ
ಕಣ್ಣುರಿ ಬೇರೆ
ನಿಮದೊಂದು ಅದೇನೊ ಹೇಳ್ತಾರಲ್ಲ
“ಅಜ್ಜಿಗೆ ಅರಿವೆ ಚಿಂತೆಯಾದರೆ
ಮೊಮ್ಮಗಳಿಗೆ ಮಿಂಡನ ಚಿಂತೆಯಂತೆ”

ಸೆಟಗೊಂಡು ಮತ್ತೆ ಬೋರಲಾದೆ
ನಿದ್ದೆ ಹೀಗೆಯೇ ಮಲಗಿರಬಹುದೆಂದು.

ಹ….ಹ…ಬಂತು ನಿದ್ದೆ
ಆದರೆ ಬಂದಿದ್ದು ಗೊತ್ತಾಗಲೇ ಇಲ್ಲ.

ಅಂದುಕೊಂಡೆ
ವಿಳಂಬವಾಗಿ ಎದ್ದಾಗ
ಸಾವು – ನಿದ್ದೆ
ಎರಡೂ ಒಂದೇ!!

2 comments

Leave a Reply