ಬಿಳಿ ಪೈಜಾಮ ಬೇಕಿತ್ತು..

 

 

 

 

ಪ್ರತಿಭಾ ನಂದಕುಮಾರ್ 

ಬಿಳಿ ಪೈಜಾಮ ಬೇಕಿತ್ತು. ಜಯನಗರ ಫೋರ್ತ್ ಬ್ಲಾಕ್ ಗೆ ಹೋದೆ.

ಅಲ್ಲಿ ಹೊರಗೆ ಕಟ್ಟೆಯ ಮೇಲೆ ರಾಶಿ ಹಾಕಿ ಕೊಂಡು ಮಾರ್ತಿರ್ತಾರೆ. ಅವನು ನನ್ನನ್ನು ನೋಡಿ ನಸುನಕ್ಕು ಸ್ವಾಗತಿಸಿದ ಪರಿಚಿತನಂತೆ. ನಾನು ನಾಲ್ಕು ಪೈಜಾಮ ತಗೊಂಡೆ. ಅವನು ರಿಯಾಯಿತಿ ಕೊಟ್ಟು ದುಡ್ಡು ಇಸ್ಕೊಂಡು ಇನ್ನೇನಾದ್ರೂ ಬೇಕಾ ಮೇಡಂ ಅಂದ.

ಅವನ ರೀತಿ ನೋಡಿದರೆ ಪರಿಚಿತನೇನೋ ಅನ್ನಿಸಿ ಮಾತಾಡಿಸಿದೆ.

ನೋಡಿದರೆ “ಪ್ರೊ ಶೆಟ್ಟರ್ ಕೆಳಗೆ ಪಿ ಎಚ್ ಡಿ ಮಾಡ್ತಿದ್ದೀನಿ ಮೇಡಂ, ಅಕ್ಕಮಹಾದೇವಿ ಮತ್ತು ಸಮಕಾಲೀನ ಸ್ತ್ರೀವಾದಿ ಕವಿತೆ ಬಗ್ಗೆ, ನಿಮ್ ಕವಿತೆಗಳನ್ನೂ ತಗೊಂಡಿದ್ದೀನಿ” ಅಂದ!!

ಈಗ ನಾನು ಬೇಡದೆ ಇದ್ರೂ ಅಲ್ಲಿಗೆ ಹೋಗಿ ಏನೇನೋ ತಗೋತಿರ್ತೀನಿ.

2 comments

Leave a Reply