ತೇಜಸ್ವಿ ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

ಯುವಕರೇ ಸೇರಿ ಹೊಸ ಕನಸು ಮತ್ತು ಭರವಸೆಗಳೊಂದಿಗೆ ‘ನಿರುತ್ತರ ಪುಸ್ತಕ‘ ಎಂಬ ಪ್ರಕಾಶನ ಸಂಸ್ಥೆಯನ್ನು ಕಟ್ಟಿದ್ದೇವೆ. ಈ ಸಂಸ್ಥೆಯ ವತಿಯಿಂದ ಕನ್ನಡಕ್ಕೆ ಅಗತ್ಯವಾದ ಪುಸ್ತಕಗಳನ್ನು ಹೊರತರಬೇಕೆಂಬ ಯೋಜನೆ ರೂಪಿಸಿಕೊಂಡಿದ್ದೇವೆ.

ಮೊದಲ ಪ್ರಯತ್ನವಾಗಿ ಉತ್ತಮವಾದ ಕಾದಂಬರಿಯ ಹಸ್ತಪ್ರತಿಗೆ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರ‘ ವನ್ನು ಪ್ರತಿವರ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷದ ಪುರಸ್ಕಾರಕ್ಕೆ ಕಾದಂಬರಿಯ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ ೧೨, ೨೦೧೮ರ ಒಳಗೆ ಕಳುಹಿಸಿಕೊಡಬೇಕಾಗಿ ವಿನಂತಿ.

ನಿಯಮಗಳು:

 • ಲೇಖಕರ ವಯಸ್ಸು ೪೫ ವರ್ಷ ಮೀರಿರಬಾರದು.
 • ಕಾದಂಬರಿಯು ಬೇರೆಲ್ಲೂ ಪ್ರಕಟವಾಗಿರಬಾರದು.
 • ಹಸ್ತಪ್ರತಿಯ ಯಾವ ಭಾಗದಲ್ಲೂ ಲೇಖಕರ ಹೆಸರು ಮತ್ತು ಇತರೆ ಮಾಹಿತಿಗಳನ್ನು ನಮೂದಿಸಬಾರದು.
 • ಕಾದಂಬರಿಗೆ ಪುಟಗಳ ಮಿತಿ ಇರುವುದಿಲ್ಲ.
 • ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ.
 • ತೀರ್ಪಿನ ಮಧ್ಯೆ ಯಾವುದೇ ಪತ್ರವ್ಯವಹಾರವಿರುವುದಿಲ್ಲ.

ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಯನ್ನು ನಿರುತ್ತರ ಪುಸ್ತಕ ಪ್ರಕಟಿಸುತ್ತದೆ. ಪುರಸ್ಕಾರ ಐದು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.

ಕಾದಂಬರಿಯನ್ನು ಕಳುಹಿಸಬೇಕಾದ ವಿಳಾಸ:

ನಿರುತ್ತರ ಪುಸ್ತಕ  ನಂ:೧೩ ಒಂದನೇ ಮುಖ್ಯರಸ್ತೆ

ಎರಡನೇ ಅಡ್ಡರಸ್ತೆ,  ಮಲ್ಲತ್ತಹಳ್ಳಿ.

ಬೆಂಗಳೂರು-೫೬

ಮಾಹಿತಿಗಾಗಿ:  8495980857,  9900903084

3 comments

 1. ಮಾನ್ಯರೇ,
  ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪುರಸ್ಕಾರಕ್ಕೆ ” ಲೇಖಕರ ವಯಸ್ಸು ೪೫ ವರ್ಷ ಮೀರಿರಬಾರದು.” ಎಂಬ ನಿಯಮ ಸರಿಯಲ್ಲ. ಏಕೆಂದರೆ ಕುವೆಂಪು ಅವರು ‘ ಮಲೆಗಳಲ್ಲಿ ಮದುಮಗಳು ‘ ಕಾದಂಬರಿಯನ್ನು ಬರೆದಾಗ ಐವತ್ತಾರು ವರ್ಷಗಳನ್ನು ದಾಟಿದ್ದರು. ಪ್ರತಿಯೊಬ್ಬರು ಸಾಯುವ ತನಕ ಮಯ್ ಮನಗಳಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಅದಕ್ಕೆ ವಯೋಮಿತಿಯ ನಿಯಮವನ್ನು ಹಾಕುವುದು ಸರಿಯಲ್ಲವೆಂಬುದು ನನ್ನ ಭಾವನೆ.
  ಸಿ ಪಿ ನಾಗರಾಜ
  ಬೆಂಗಳೂರು

  • ಖಂಡಿತ , ನಾನು ಇದನ್ನು ಒಪ್ಪುತ್ತೇನೆ.

  • ನಮ್ಮಂತಹ ಸಣ್ಣವರು ದೊಡ್ಡವರೆದುರು ಹೇಗೆ ಸ್ಪರ್ಧಿಸುವುದು ಸರ್ ?

Leave a Reply