ಪ್ರಿಯ ಸುಷ್ಮಾ ಅವರೇ..

ಪ್ರಿಯ ಸುಷ್ಮಾ ಅವರೇ…

ಮೊದಲಿಗೆ ಸಣ್ಣ ಕಥೆಯೊಂದನ್ನು ರಂಗಕ್ಕೆ ರೂಪಾಂತರಿಸುವ ನಿಮ್ಮ ಪ್ರಯತ್ನಕ್ಕೆ, ಹುಮ್ಮಸ್ಸಿಗೆ ಮೆಚ್ಚಿಗೆಯ ಅಭಿನಂದನೆಗಳು!

ಆದರೆ ಇದನ್ನು ನೋಡುತಿದ್ದಂತೆ… ಅರೆರೆ.. ಏನಿದೇನಿದು.. ಏನಾಶ್ಚರ್ಯ.. ಏನದ್ಭುತ… ಎನ್ನಿಸಿದ್ದು ನಿಜ…

ನಿಜವೆಂದರೆ shock ಆಘಾತ !!

ಇಲ್ಲಿ ಹೇಳಿದ ಸುಮಂಗಲಾ ಮತ್ತು ಫಾತಿಮಾ-ಳೆ … ಅಂದರೆ ನಾನೆಂಬ ಈ ಸುಮಂಗಲಾನೇ ಮತ್ತು ಈ ಸುಮಂಗಲಾ “ಫಾತಿಮಾಗೆ ಮಳೆ ಇಷ್ಟ” ಸಣ್ಣಕಥೆಯಲ್ಲಿ ಚಿತ್ರಿಸಿದ ಫಾತಿಮಾ-ಳೆ ಇರಬಹುದು ಎಂದುಕೊಂಡು ಮುಂದಿನದನ್ನು ಬರೆಯುತ್ತಿರುವೆ…!!

ಅಲ್ಲದಿದ್ದರೆ ನಿಮ್ಮ “ಸುಮಂಗಲಾ ಮತ್ತು ಫಾತಿಮಾ-ಳೆ” ಯಾರು ಎಂಬುದನ್ನು ತಿಳಿಸಿಬಿಡಿ!!!

ತಾವು ಹೀಗೆ ರಂಗಪ್ರಯೋಗಕ್ಕೆ ರೂಪಾಂತರ ಮಾಡುತ್ತಿರುವುದು ನಿಜಕ್ಕೂಸಂತಸದ ವಿಚಾರವೇ…

ಆದರೆ ನನ್ನದೊಂದು ಸಕಾರಣ (ಮತ್ತು ಸುಮಾಕಾರಣ!!) ತಕರಾರು ಇದೆ ಸುಷ್ಮಾ ಅವರೇ.

ಅಲ್ಲರೀ… ಯಾವುದೇ ಕಥೆ, ಕಾದಂಬರಿ, ಕವನ ಇತ್ಯಾದಿಯನ್ನು ನಾಟಕಕ್ಕೆ ಅಥವಾ ರೂಪಾಂತರಕ್ಕೆ ಅಥವಾ ಇನ್ನೇನಕ್ಕೋ ಬಳಸಿಕೊಳ್ಳುವಾಗ ಮೂಲ ಲೇಖಕ/ಕಿಯರ ಒಪ್ಪಿಗೆ ಪಡೆಯಬೇಕು ಎನ್ನುವುದು ಎಲ್ಲರಿಗೂ ಅನ್ವಯವಾಗುವ ನಿಯಮ ಅಲ್ಲವೇ…

ಹೋಗಲಿ, ಒಪ್ಪಿಗೆ ಬೇಡ, ಬರೆದವರಿಗೆ ಒಂದು ಮಾತು ತಿಳಿಸುವ ಕನಿಷ್ಠ ಸೌಜನ್ಯವೂ ಇಲ್ಲವಾಯಿತೇ?

ಅಲ್ಲದೆ ಈ ಸುಮಂಗಲಾ ಅದಾವುದೋ ದೂರದ ಮಂಗಳ ಗ್ರಹದಲ್ಲಿ ಇಲ್ಲ, ಇಲ್ಲಿಯೇ ನೀವಿರುವ ಬೆಂಗಳೂರಿನಲ್ಲಿಯೇ (ಟ್ರಾಫಿಕ್ ನಲ್ಲಿ ಬಿಡುಗಡೆಯೇ ಇಲ್ಲದೆ ಸಿಕ್ಕಿಕೊಂಡು ಹೊರಹೋಗಲಾಗದೆಯೇ!!) ಇದ್ದಾಳೆ…

ಒಂದು ಫೋನ್ ನಂಬರ್ ಪಡೆಯುವುದು ಅಥವಾ ಫೇಸ್ ಬುಕ್ ಇತ್ಯಾದಿ ಮೂಲಕ ಸಂಪರ್ಕಿಸುವುದು ಆಗದಿರುವ ಕಾಲಘಟ್ಟ ಕೂಡ ಇದಲ್ಲ…

ಹಾಂ… ಫಾತಿಮಾ ರಂಗದ ಮೇಲೆ ಹೇಗೆ ಕಾಣಲಿದ್ದಾಳೆ ಎಂಬುದನ್ನು ನೋಡುವ ಕುತೂಹಲ ನನಗೆ ಇದೆ…

ಹೀಗಾಗಿ (ನೀವು ಹೇಳುವ ಸೌಜನ್ಯ ತೋರದೆಯೂ ಮತ್ತು ಕರೆಯದೆಯೂ!) ಆ ದಿನ ಬರುವ ಎಂದುಕೊಂಡಿದ್ದೀನಿ…

ನಿಮಗೆ ಮತ್ತು ತಂಡದವರಿಗೆ ಮುಂಗಡ ಶುಭಾಶಯಗಳು!


ಸುಮಂಗಲಾ

4 comments

 1. lekhakarige helade adannu heege balasikolluvudu soujanyada prashneyannu meerida aparadha..

  Nutana Doshetty

 2. ನಿಮಗಿದು ಅಭ್ಯಾಸವಿಲ್ಲ ಎನಿಸುತ್ತದೆ.. ಇರಲಿ.. ನೊಂದ ಲೇಖಕರ ಸಂಘಕ್ಕೆ ನಿಮಗೂ ಸ್ವಾಗತ. ನಿಮ್ಮ ಈ ಸಣ್ಣಕಥೆ ನಿಮ್ಮದಾಗೇ ಉಳಿದಿರಲಿ ಎನ್ನುವಾಸೆ ಸುಮಂಗಲಾ ಅವರೇ.

 3. Please also publish this response from us. We tried to reach her, but we did not get her contact number.

  ಅಬ್ಬಾ ಮೇಡಂ ಸಿಕ್ಕರಲ್ಲಾ ತುಂಬಾ ಸಂತೋಷ ಆಯ್ತು. ನಿಮ್ಮನ್ನು ತಲುಪಲು ಬಹಳಾ ಪ್ರಯತ್ನಿಸಿದೆವು. ಈ ಕಥೆಯನ್ನು ಕನ್ನಡ ಸಾಹಿತ್ಯ ಅಕಾಡೆಮಿ ಯವರು, ಶ್ರೀ ಅಬ್ಬಾಸ್ ಮೇಲಿನಮನಿ ಅವರ ಸಂಪಾದಕತ್ವದಲ್ಲಿ ಹೊರತಂದ ಸಣ್ಣಕತೆ 2004 ಮಾಲಿಕೆಯಿಂದ ತೆಗೆದುಕೊಂಡಿದ್ದೇವೆ. ನಿಮ್ಮನ್ನು ತಲುಪಲು ಕನ್ನಡ ಸಾಹಿತ್ಯ ಅಕಾಡೆಮಿಗೆ ಕರೆ ಮಾಡಿ ಕೇಳಿದೆವು, ಸಂಪಾದಕರಾದ ಶ್ರೀ ಅಬ್ಬಾಸ್ ಮೇಲಿನಮನಿ ಅವರನ್ನು ನಿಮ್ಮ ದೂರವಾಣಿ ಸಂಪರ್ಕ ಕೇಳಿದೆವು , ಅವರಿಗೆ ತಿಳಿದಿಲ್ಲ ಎಂದರು. ಆ ಪುಸ್ತಕದಲ್ಲಿ ನಿಮ್ಮ initials ಇರದ ಕಾರಣ Facebook ನಲ್ಲಿ ಹುಡುಕಲು ಸಾಧ್ಯವಾಗಲಿಲ್ಲ. ಅದರಲ್ಲಿ ಇರುವ ವಿಳಾಸಕ್ಕೆ ಬಂದೆವು, ನಮಗೆ ಸರಿಯಾಗಿ ಸಿಗಲಿಲ್ಲ.ದಯಮಾಡಿ ಈ ಪ್ರಯೋಗಕ್ಕೆ ಬರಬೇಕು. ದಯಮಾಡಿ ನಿಮ್ಮ ಫೋನ್ ನಂಬರ್ ಕೊಡಿ. ಪ್ಲೀಸ್…..

  After this she had mentioned in her comment that she didn’t even know that it was published in sannakathe 2004.
  sumangala madam avara reply : ಒಹ್ ಹೌದೇ… ನೋಡಿ, ಶ್ರೀ ಅಬ್ಬಾಸ್ ಮೇಲಿನಮನಿ ಅವರ ಸಂಪಾದಕತ್ವದಲ್ಲಿ ಸಣ್ಣಕಥೆ ೨೦೦೪ ಹೊರಬಂದಿದ್ದು ಮತ್ತು ಅದರಲ್ಲಿ ಈ ಕಥೆಯನ್ನು ತೆಗೆದುಕೊಂಡಿರುವುದು ಕೂಡ ನನಗೆ ಈಗಲೇ ಗೊತ್ತಾಗಿದ್ದು! ನಿಜಕ್ಕೂ ವಿಚಿತ್ರವೆನ್ನಿಸುತ್ತೆ… ಈ ಕಥೆಯನ್ನು ಅವರು ಎಲ್ಲಿಂದ ತೆಗೆದುಕೊಂಡಿರಬಹುದು ಎಂದು ನಾನು ಇನ್ನೊಂದು ಪತ್ತೇದಾರಿ ಆರಂಭಿಸಬೇಕಷ್ಟೆ! ಏಕೆಂದರೆ ಇದು ಮೊದಲು ಅಂಕಿತದವರು ತಂದ ಬಹುಮಾನಿತ ಕಥೆಗಳ ಸಂಕಲನ ತಾಜ್ ಮಹಲ್ ಸಂಕಲನದಲ್ಲಿ ಇತ್ತು, ನಂತರ ಛಂದದ ವಸುಧೇಂದ್ರ ಪ್ರಕಟಿಸಿಯಾದ ನನ್ನ ಜುಮುರು ಮಳೆ ಸಂಕಲನದಲ್ಲಿ ಇತ್ತು, ಅವರು ಕೂಡ ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಲೇ ಇಲ್ಲವ ಅನ್ನಿಸುತ್ತೆ. (ಇದು ನಿಮ್ಮ ಮೇಲಿನ ದೂರು ಅಲ್ಲ!). ೨೦೦೩ರಿಂದಲೂ ಬೆಂದಕಾಳೂರಿನಲ್ಲಿಯೇ ಇರುವ ನಾನು ಈ ಪರಿ “ಅನಾಮಿಕಳು” ಎಂದು ಈಗಲೇ ಅರಿವಾಯಿತು!! (ಸುಜ್ಞಾನೋದಯ ಎನ್ನಲಡ್ಡಿಯಿಲ್ಲ…!)

  From this we could know that we could get the number from Vasudendra. we took the number and we spoke to her. She is coming for the show on that day as an invitee.

  dayamaadi idannu publish maadi

 4. Sumanagala Madam avara response – ನಿಮ್ಮೊಡನೆ ಮಾತನಾಡಿ ಖುಷಿ ಆಯಿತು.. ರಂಗದ ಮೇಲೆ ನೋಡಲು ತುಂಬಾ ಕುತೂಹಲಿಯಾಗಿರುವೆ!! All the best!

Leave a Reply