ಬನ್ನಿ, ರಂಗ ಪಧವೀಧರರನ್ನು ಬೆಂಬಲಿಸಲು..

ಆತ್ಮೀಯರೆ,

ಕರ್ನಾಟಕ ನಾಟಕ ಅಕಾಡೆಮಿಯು ಸರಕಾರಿ ವಸತಿ ಶಾಲೆಗಳು ಹಾಗೂ ಪ್ರೌಢಶಾಲೆಗಳಿಗೆ ರಂಗಶಿಕ್ಷಕರನ್ನು ನೇಮಿಸಿಕೊಳ್ಳಲು ಸರಕಾರವನ್ನು ಒತ್ತಾಯಿಸುತ್ತಾ ಬಂದಿದೆ. ಇದೇ ವಿಷಯವಾಗಿ ಈಗ ರಾಜ್ಯ ಮಟ್ಟದ ರಂಗಶಿಕ್ಷಣ ಪದವೀಧರರ ಸಮಾವೇಶವು ಆಗಸ್ಟ್ 2  ಆರ್ ಟಿ ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಬೆಳಿಗ್ಗೆ 10.30 ಗಂಟೆಗೆ ಆಯೋಜನೆಗೊಂಡಿದೆ.

ಮಾನ್ಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿದ್ಯದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸಚಿವರಾದ ಶ್ರೀ ಎನ್.ಮಹೇಶರವರು ಖುದ್ದಾಗಿ ಭಾಗವಹಿಸುತ್ತಿದ್ದಾರೆ. ಜೊತೆಗೆ ನಾನು ಹಾಗೂ ಕಪ್ಪಣ್ಣ ಇಬ್ಬರೂ ವೇದಿಕೆಯಲ್ಲಿರುತ್ತೇವೆ.

ಸಚಿವರ ಮೂಲಕ ಸರಕಾರಕ್ಕೆ ರಂಗಶಿಕ್ಷಕರ ನೇಮಕಾತಿಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಬೇಕಿದೆ. ಅದಕ್ಕಾಗಿ ಮಾನ್ಯತೆ ಪಡೆದ ಶಾಲೆ ಕಾಲೇಜು ಸಂಸ್ಥೆ ಹಾಗೂ ವಿವಿ ಗಳಲ್ಲಿ ಡಿಪ್ಲೋಮಾ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯನ್ನು ರಂಗಶಿಕ್ಷಣದಲ್ಲಿ ಪಡೆದ ಈ ನಾಡಿನ ಎಲ್ಲರೂ ತಪ್ಪದೇ ಈ ಸಮಾವೇಶದಲ್ಲಿ ಭಾಗವಹಿಸಬೇಕು ಹಾಗೂ ರಂಗಶಿಕ್ಷಕರ ನೇಮಕಾತಿಗಾಗಿ ಸಪೋರ್ಟ್ ಮಾಡಲು ಕನ್ನಡ ರಂಗಭೂಮಿಯ ರಂಗಕರ್ಮಿ ಕಲಾವಿದರೆಲ್ಲರೂ ಈ ಸಮಾವೇಶಕ್ಕೆ ಆಗಮಿಸಬೇಕು ಎಂದು ವಿನಂತಿಸಿಕೊಳ್ಳುವೆ…

ಜೆ. ಲೋಕೇಶ್ 
ಅಧ್ಯಕ್ಷ
ಕರ್ನಾಟಕ ನಾಟಕ ಅಕಾಡೆಮಿ

Leave a Reply