ರಂಗಶ್ರೀ ನಾಟಕೋತ್ಸವದಲ್ಲಿ ‘ಸೈಡ್ ವಿಂಗ್’ಗೆ ಪ್ರಶಸ್ತಿಗಳ ಮಾಲೆ

ರಂಗಶ್ರೀ ಕಲಾಸಂಸ್ಥೆ ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ‘ನಾಯೀಕತೆ’ ನಾಟಕದ ಪ್ರದರ್ಶನ ಜುಲೈ 19ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಇಪ್ಪತ್ತು ನಾಟಕಗಳ ಪೈಕಿ, ಇದ್ದ ‘ಸೈಡ್ ವಿಂಗ್’ ತಂಡ ಎಂಟು ಪ್ರಶಸ್ತಿ ಗಳಿಸಿದೆ. ‘ನಾಯೀಕತೆ, ಮರೆಯಲಾರದ ದಂತಕಥೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟರು.

‘ನಾಯೀಕತೆ’ಗೆ ದೊರೆತ ಪ್ರಶಸ್ತಿಗಳು :

1.ಸರಣಿಯ ಅತ್ಯುತ್ತಮ ನಾಟಕ
2.ಸರಣಿಯ ಅತ್ಯುತ್ತಮ ಸಂಗೀತ – ಸೈಡ್ ವಿಂಗ್ ತಂಡ
3.ಸರಣಿಯ ಅತ್ಯುತ್ತಮ ರಂಗಸಜ್ಜಿಕೆ – ವಿಶ್ವನಾಥ ಮಂಡಿ
4.ಸರಣಿಯ ಅತ್ಯುತ್ತಮ ಪ್ರಸಾದನ (ದ್ವಿತೀಯ) – ರಾಘವೇಂದ್ರ ಸಮಷ್ಟಿ
5.ಸರಣಿಯ ಅತ್ಯುತ್ತಮ ವಸ್ತ್ರವಿನ್ಯಾಸ (ದ್ವಿತೀಯ)- ಲತಾ ಎಂ. ಬಿ.
6.ತಂಡದ ಅತ್ಯುತ್ತಮ ಕಲಾವಿದೆ – ಅಶ್ವಿತ ಹೆಗಡೆ
7.ಸರಣಿಯ ಅತ್ಯುತ್ತಮ ಪೋಷಕ ನಟ – ಭರತ್ ಸ. ಜಗನ್ನಾಥ್
8. ಸರಣಿಯ ಅತ್ಯುತ್ತಮ ನಿರ್ದೇಶಕ – ಶೈಲೇಶ್ ಕುಮಾರ್ ಎಂ. ಎಂ.

ಫೋಟೋ : ಅಂಕಿತ್ ಹೆಗಡೆ

1 comment

Leave a Reply