ಶಾಸನ ವಿಧಿಸಿದ ಎಚ್ಚರಿಕೆ: ಬಿಳಿಗಿರಿ ಕವಿತೆ ಓದುವುದು ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು..

ಲಿಮಿರಿಕ್ ಎನ್ನುವ ನಡು ಕಾಳಜಿಯ ಟಾನಿಕ್

ನಮ್ಮ ಸಾಹಿತ್ಯ ಅದೆಷ್ಟು ಮಡಿವಂತಿಕೆಯ, ಶೀಲವಂತಿಕೆಯ, ನೀತಿವಂತ ಸಾಹಿತ್ಯಜಗತ್ತು ಎಂದರೆ, ಬರವಣಿಗೆಯಲ್ಲಿ ಯಾವುದೇ ವಿಧವಾದ ಪೋಲಿತನ ಕಾಣಿಸಿಕೊಳ್ಳಬಾರದು ಹಾಗೇನಾದರೂ ಆದರೆ ಅದು ನಿಷೇಧಿಸಲ್ಪಡುತ್ತದೆ.

ಆದರೆ ನಮ್ಮ ಗಂಡಾಳಿಕೆಯ ಸಮಾಜ ಹೇಗಿದೆ ಎಂದರೆ ದಿನಪ್ರತಿ ನಮ್ಮ ಕಣ್ಣ ಮುಂದೆಯೇ, ನಮ್ಮ ಮಗಳ ವಯಸ್ಸಿನ, ತಾಯಿ, ಅಜ್ಜಿ ವಯಸ್ಸಿನ, ತಂಗಿ, ಅಕ್ಕನ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಂತ ಅಮಾನವೀಯ ಅತ್ಯಾಚಾರಗಳು, ನಡೆಯುತ್ತಿದ್ದರೂ ಗುಮ್ಮನ ಗುಸಕಗಳಾಗಿ ಇರುತ್ತೆ. ಹೊರತು, ಅದಕ್ಕೆ ಕಾರಣಗಳೇನು, ಇಂಥ ಮಡಿಮಂತಿಕೆಯ, ಗಂಡಾಳಿಕೆಯ ಮನೋಭಾವವೇ ಇದರ ಮೂಲವಲ್ಲವೇ ಎಂಬುದರ ಬಗೆಗೆ ಮಾತನಾಡುವುದಿಲ್ಲ. ಇದು ನಮ್ಮ ಸಾಹಿತ್ಯ ಮತ್ತು ಸಮಾಜದ ವಿರೋಧಾಭಾಸ ಮತ್ತು ದುರಂತ.

ಸಾಹಿತ್ಯ ಸದಾ ಸಮಾಜದ ಸಮಸ್ಯೆಗಳಿಗೆ ಆಗುಹೋಗುಗಳಿಗೆ ಸ್ವಂದಿಸುತ್ತಿರಬೇಕು ನಿಜ. ಹಾಗಂತ ಅದು ಯಾವಾಗಲೂ ಗಂಭೀರವಾಗಿಯೋ, ನೀತಿಬೋಧಕವಾಗಿಯೋ ಉಳಿದು ಬಿಟ್ಟರೆ ಸಾಹಿತ್ಯದ ಜೀವಂತಿಕೆ ಹೊರಟು ಹೋಗುತ್ತದೆ. ಏಕೆಂದರೆ ಸಾಹಿತಿಯಾದವನು ಸದಾ ಕಲಾ ಗಂಭೀರನಾಗಿಯೇ ಇರಲು ಸಾಧ್ಯವಿಲ್ಲ. ಅವನು ತನ್ನ ಗಂಭೀರತೆಯನ್ನು ಮೀರಲು, ಏಕತಾನತೆಯ ನೀಗಲು, ಕೆಲವೊಮ್ಮೆ ವಿನೋದವಾಗಿಯೂ, ಕೊಂಚ ಪೋಲಿಯಾಗಿ ಬರೆಯಬೇಕು, ಅದು ತನ್ನೊಳಗಿನ ಲೇಖಕನ ಜೀವಂತಿಕೆಗಾಗಿ ಮತ್ತು ತನ್ನ ಸುತ್ತಲಿನ ಗೆಳೆಯರ ಖುಷಿಗಾಗಿ.

ಹೀಗೆ ಗಂಭೀರವಲ್ಲದ, ಹುಟ್ಟಾ ವಿನೋದದ, ಕೊಂಚ ಪೋಲಿತನದ ಸಾಹಿತ್ಯ ಪ್ರಕಾರವೊಂದಿದೆ ಅದೇ ‘ಲಿಮಿರಿಕ್’ ಎಂಬ ಸಾಹಿತ್ಯ ಪ್ರಕಾರ.

ಇಂಗ್ಲಿಶ್ ಸಾಹಿತ್ಯದಲ್ಲಿ ವಿಕ್ಟೋರಿಯನ್ ಕಾಲದ ಕೆಲವು ಸಾಹಿತಿಗಳು ಅಳುಬುರುಕರಂತೆ ಬರೆ ಬರೆದು ಅದರಿಂದ ಪಾರಾಗಲು ಬರೆದ ಸಾಹಿತ್ಯವೇ ಈ ಲಿಮಿರಿಕ್ ಎಂಬ ಐದು ಸಾಲಿನ, ಚಮತ್ಕಾರಿಕ, ಶಬ್ಧ ವಿಕಾರ ಸಾಹಿತ್ಯ.

ಆದರೆ ಈ ಸಾಹಿತ್ಯದಲ್ಲಿ ಕೆಟ್ಟಸಾಹಿತ್ಯವನ್ನು ಸೃಷ್ಟಿಸಲೋ ಇಲ್ಲ ಪ್ರಾಸಕ್ಕಾಗಿಯೋ ಶಬ್ಧವಿಕಾರಗೊಳಿಸಿಲ್ಲ ಚಮತ್ಕಾರಕ್ಕಾಗಿ, ಹಾಸ್ಯಕ್ಕಾಗಿ ಬಳಕೆಯಾಗಿದೆ.

ಈ ಲಿಮಿರಿಕ್ ಸಾಹಿತ್ಯ ಪ್ರಕಾರ ವಿನೋದಕ್ಕಾಗಿಯೋ, ಗೆಳೆಯರನ್ನು ರಂಜಿಸಲು ಹುಟ್ಟಿಕೊಂಡಿದ್ದರೂ ಮುಜುಗರದ ಕಾರಣದಿಂದ ಅಚ್ಚಾಗುತ್ತಿರಲ್ಲಿಲ್ಲ. ಕಾಲಾನಂತರ ಕವಿಯು ತೀರಿಕೊಂಡ ಮೇಲೆ ಕೆಲವು ಅಚ್ಚು ಕಂಡಿದ್ದರೆ ಇನ್ನು ಕೆಲವು ಗೆಳೆಯರ ಬಾಯಿಂದ ಬಾಯಿಗೆ ಹರಡಿ ಜನಮಾನಸದಲ್ಲಿ ಮನೆ ಮಾಡಿವೆ.

ಕನ್ನಡದಲ್ಲೂ ಕೂಡ ಈ ಲಿಮಿರಿಕ್ ಸಾಹಿತ್ಯ ರೂಪ ಬಂದಿದೆ. ಎಚ್ ಎಸ್ ಬಿಳಿಗಿರಿ, ವೈ ಎನ್ ಕೆ, ವಿ.ಜಿ ಭಟ್ಟ, ಪಾಂ.ವೆ. ಆಚಾರ್ಯ, ಕೆ.ವಿ.ತಿರುಮಲೇಶ್ ಮೊದಲಾದವರು ಈ ಪ್ರಕಾರದಲ್ಲಿ ಪದ್ಯ ಬರೆದಿದ್ದಾರೆ.

ಇಲ್ಲಿ ಎಚ್ ಎಸ್ ಬಿಳಿಗಿರಿಯವರ ಲಿಮಿರಿಕ್ಸ್ ಗಳನ್ನು ಮಾತ್ರವೇ ಉಲ್ಲೇಖಿಸುತ್ತಿದ್ದೇನೆ. ಕಾರಣವಿಷ್ಟೆ, ನನ್ನಿಷ್ಟದ ಕವಿ ಎಚ್ ಎಸ್ ಬಿಳಿಗಿರಿ. ಬಿಳಿಗಿರಿಯವರು ಮೂಲತಃ ಭಾಷಾಶಾಸ್ತ್ರ ಮತ್ತು ವ್ಯಾಕರಣ ಶಾಸ್ತ್ರ ದಲ್ಲಿ ಅಪಾರ ಜ್ಞಾನ ವುಳ್ಳವರು. ಇವರಿಗೆ ಕಾವ್ಯದ ಬಗೆಗೆ ತಮ್ಮದೆ ಆದ ನಿಲುವಿದೆ.

“ಪದ್ಯವೆಂದರೆ ಲಯಬದ್ಧವಾಗಿರಬೇಕು, ಅತ್ಯುತ್ತಮ ಪದ್ಯ ಅರ್ಥ, ಛಂದಸ್ಸು, ಸ್ಪೂರ್ತಿ ಎಲ್ಲದರಿಂದಲೂ ಓದುಗರ ಮನಸ್ಸು ಮುಟ್ಟಬೇಕು ಎಂಬ ನಂಬಿಕೆಯುಳ್ಳ, ಒರಟಾದ ಬೇರುಬಿಟ್ಟ, ಪೋಲಿಯಾಗಲು ನಾಚಿಕೆಯಿಲ್ಲದ ರಸಿಕತೆಯ ಬಿಳಿಗಿರಿಯವರು, ತಮ್ಮ ಪೋಲಿತನವನ್ನು ತಾವು ಬರೆದಿರುವ ಲಿಮಿರಿಕ್ಸ್ ಗಳಲ್ಲಿ ಹುದುಗಿಸಿ ಇಟ್ಟಿದ್ದಾರೆ.

ಬಿಳಿಗಿರಿಯವರ ರಸಿಕತೆ, ಪೋಲಿತನಕ್ಕೆ ಈ ಕೆಳಗಿನ ಕೆಲ ಲಿಮಿರಿಕ್ಸ್ ಗಳೆ ಸಾಕ್ಷಿ. ಇವರ ಒಂದು ಕವನ ಸಂಕಲನದ ಹೆಸರೆ
‘ನಿಗುರಿ ನಿಂತರೆ ನಾಲಗೆ ‘.

ಒಬ್ಬನಿದ್ದನು ಮುದುಕನವನು ಅಸಲು ಘಾಟಿ
ಒಬ್ಬಳಿದ್ದಳು ಹುಡುಗಿ ಬಲು ತುಂಟಿ ಚೂಟಿ
ಅವನ ಕುಂಡೆಗೆ ತುಂಟಿ
ಒಮ್ಮೆ ಕೊಟ್ಟಳು ಶುಂಟಿ
“ಇಲ್ಲಿಗೂ ಕೊಡು ಒಂದ” ಎಂದನಾ ಘಾಟಿ

ಒಂದಿರುಳು ಮುನಿಸಿನಲಿ ನನ್ನವಳ ಬಂದು
ಕೇಳಿದಳು” ಚೆಂದವೇ ನಿಮಗೆ ಇದು? ” ಎಂದು.
“ನನ್ನ ಬಲಗೈ ನೀನು”
ಎಂದು ಹೊಗಳುವುದೇನು!
ನಿಮ್ಮ ಬಲಗೈ ಏನ ಮಾಡುತಿದೆ ಇಂದು ?”
( ಆಧಾರ : ಒಂದು ಇಂಗ್ಲಿಶ್ ಜೋಕು)

ಒಬ್ಬನಿದ್ದನು ಮುದುಕ, ಪಕ್ಕಾ ಕಿಲಾಡಿ
“ತಾತ ನಿನಗೇನಿಷ್ಟ ? ಎಂದವರ ನೋಡಿ
“ತಾತ? ಆಮೇಲೇನು ?
ತೀತಿ! ಆಮೇಲೇನು ?
ಹೇಳಿ !” ಎನ್ನುತ ಕಣ್ಣ ಹೊಡೆಯುವುವನು ಕೇಡಿ.

ಗಾದೆ ಹೇಳುವುದಿದು:
ದೂರದ ಬೆಟ್ಟ ಕಣ್ಣಿಗ್ ನುಣ್ಣಗೆ
ಅನುಭವ ಕಲಿಸುವುದಿದು:
ಹತ್ರದ್ ಬೆಟ್ಟ ಕೈಗೂ ನುಣ್ಗೆ !

ಕನ್ನಡದ ‘ಉಣ್ಣೆ’
ಇಂಗ್ಲಿಶಿನ ‘ಉಲ್ಲು’
ಎರಡಕೂ ಒಂದೇ ಅರ್ಥ
ಮೊದಲಲಿ ಬರಲು
ಒಂದೇ ತಕಾರ
ಥೂ! ಎಷ್ಟು ಬೇರೆ ಅರ್ಥ.

ಮುದುಕನೊಬ್ಬನ ಮಾತು, ಕಿವಿಕೊಡಿರಿ ಎಲ್ಲ :
ಚಿಕ್ಕಂದಿನುಕ್ಕಂದ ಮಿಕ್ಕಂಗಕಿಲ್ಲ
ನಾಲಗೆಯೇ ನನಗೆಲ್ಲ
ಮುಂದಕ್ಕದೂ ಇಲ್ಲ
ಮನಸಿನಲಿ ಮನಸಿಂದ ಮನಸಿಗೇ ಎಲ್ಲ…

ಸುಲಿದ ಬ್ರಾವಿನ ಮೊಲೆಗಳಂದದ
ಕಳೆದ ಲಂಗದ ತೊಡೆಗಳಂದದ
ಸೆಳೆದ ಚೆಡ್ಡಿಯ ಪಿರೆಗಳಂದದ ಪೋಲಿ ಚುಟುಕಗಳ
ಬೆಳೆದು ಬಲಿಯದ ಪಕ್ವವಾಗದ
ಎಳೆಯ ಬುದ್ಧಿಯ ಜನರಿಗೋಸುಗ
ಬಿಳಿಗಿರಿಯು ಬರೆದಿಲ್ಲವೆಂದರಿತಿರಲಿ ಮಡಿಜನರು.

ಮೊಲೆತೊಟ್ಟಿನ ತುದಿಯನೆ ಚೀಪಿದರೂ
ಜಿನುಗುವುದೋ ರಸಭಗದಲ್ಲಿ
ಭಗದೇಶಸಮಸ್ತವ ನೆಕ್ಕಿದರೂ
ಜಿನುಗದು ರಸ ಮೊಲೆ ತೊಟ್ಟಿನಲಿ.
ಯಾವುದು ಸೂಕ್ಷ್ಮ? ಯಾವುದು ಸ್ಥೂಲ ?
ತಿಳಿಯದು ಈ ವೈಚಿತ್ರ್ಯದ ಮೂಲ !

ಸ್ನಾಯುಗಳು,ಹಗ್ಗಗಳು,
ರಾಟೆಗಳು ಎಳೆದರೂ
ಏಳದೀ ಇಪ್ಪತ್ತ ಒಂದನೆಯ ಬೆರಳು
ಆದರೆಲ್ಲೋ ಎಂದೊ ಕಂಡ ಹುಡುಗಿಯ ನೆನಪೆ
ಸುಳಿದರಾಗುವುದು ಅರರೆ ಕಬ್ಬಿಣದ ಸರಳು !

ತಲೆಕೆಳಗಾದರೆ
ಆರೊಂಬತ್ತಾಗುವುದು
ಒಂಬತ್ತಾರಾಗುವುದು
ಅರವತ್ತೊಂಬತ್ತರವತ್ತೊಂಬತ್ತಾಗಿಯೆ
ಉಳಿಯುವುದು !
ಆದುದರಿಂದಲೆ
ಮುಖ ಜನನೇಂದ್ರಿಯ ಮುಖ್ಯ ಮುಖಾಮುಖಿ
ಅರವತ್ತೊಂಬತ್ತೆನ್ನುವುದು !

1 comment

  1. ಮುಂಬೈನಲ್ಲಿದ್ದಾಗ ಅವರ ಸುಭಗಾನೀವಿ ಕೊಟ್ಟಿದ್ದ ರು.ಓದಿ ರೋಮಾಂಚನ ಅನುಭವಿಸಿದ ನೆನಪಾಯಿತು

Leave a Reply