ಇಲ್ಲಿ ದುಃಖಕ್ಕೂ ಸುಖದ ಪರಿವಾರ..

  ಚಲಪತಿ ವಿ

ಅಧಿಕಾರ

ವಿರಾಮದ ಲಹರಿಯೊಳಗೆ

ಮೆದುಳಿನಲ್ಲಿ ಸಣ್ಣದೊಂದು ಬಿರುಕು

ಮೃದುವಾದ ಹೊಲಿಗೆಯೊಂದು ಅವಶ್ಯಕ

ಮೌನವಾಗಿ ಮುಚ್ಚುವುದು ಸಲಿಸಲ್ಲ

 

ಕುರ್ಚಿಯ ನಾಲ್ಕು ಕಾಲುಗಳು

ಅಲುಗಾಡುತ್ತಿವೆ

ಸಣ್ಣದಾದ ಗಾಳಿಯ ಹೊಡೆತಕ್ಕೆ ಸಿಲುಕಿ

ಬಹುಶಃ ಚಿಕ್ಕ ನಗುವೊಂದು

ಮೂಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು

ಹೂ ಕಟ್ಟುವ ದಾರದ ಮೇಲೆ

ದಪ್ಪನಾದ ಹೆಜ್ಜೆಗಳ ಸದ್ದು

ತಿಂದ ಮೇಲೆ ಮೂತಿ ಒರೆಸಿಕೊಳ್ಳುವಷ್ಟು

ಪ್ರವಾಹ

 

ಉರುಳುವ ಗಾಲಿಗೆ ಚಪ್ಪಾಳೆ ತಟ್ಟುವ

ಖಯಾಲಿ, ಶಬ್ಧದಲ್ಲಿ ಏರಿಳಿತ

ಇಲ್ಲಿ ದುಃಖಕ್ಕೂ ಸುಖದ ಪರಿವಾರ

ಹಾಸಿಗೆಗಳು ಬದಲಾಗುತ್ತ ಹೋಗುತ್ತವೆ

ಕಾಲು ಎಷ್ಟು ದೂರ ಚಾಚಬೇಕು, ಮಿತಿಯಿಲ್ಲ

ಇವುಗಳ ಅಂತ್ಯಕ್ಕೂ ಬರಿಗಾಲಲ್ಲಿ ನಿಂತ

ಸಾಕಷ್ಟು ಮುಳ್ಳಿನ ಪರದೆಗಳಿವೆ

ಕೆಲವು ಪಾರದರ್ಶಕ ಹಲವು

ಮೂಳೆಗೂ ಚುಚ್ಚುವಷ್ಟು ನುಣುಪು

 

ಬಾಯಿ ಮೇಲೆ ಕೈ ಇಟ್ಟು

ಕಣ್ಣರೆಪ್ಪೆಗಳಿಗೂ ಬಣ್ಣಕಟ್ಟಿ

ಎಲ್ಲದಕ್ಕೂ ಕಿವಿಯಾಗಿ

ನಾನಾ ವೇಷ ಧರಿಸಿ ಕುಣಿಯದೇ

ಜಡದಿಂದಿರುವ ನಾವು ಜನಗಳಂತೆ!

1 comment

  1. ಹೂ ಕಟ್ಟುವ ದಾರದ ಮೇಲೆ
    ದಪ್ಪನಾದ ಹೆಜ್ಜೆಗಳ ಸದ್ದು
    ತಿಂದ ಮೇಲೆ ಮೂತಿ ಒರೆಸಿಕೊಳ್ಳುವಷ್ಟು
    ಪ್ರವಾಹ

    ಇದು ಯಾವುದಕ್ಕೆ ಹೋಲಿಕೆ ಮತ್ತು ಇದರ ಭಾವಾರ್ಥ ತಿಳಿಸಿ

Leave a Reply