ಇಲ್ಲಿ ನಡೆಯುತ್ತದೆ ಗಾಂಧಿ ಪೂಜೆ

   ರೇಣುಕಾ ರಮಾನಂದ

1934 ಫೆಬ್ರವರಿ 28 ರಂದು ಗಾಂಧೀಜಿ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾದ ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡಾದ ಅಂಕೋಲೆಗೆ ಭೇಟಿ ನೀಡಿದ್ದರಂತೆ.

ವೀರ ಸ್ವಾತಂತ್ರ್ಯ ಯೋಧ ಅಂಕೋಲೆಯ ಬಾಸ್ಗೋಡ ರಾಮ ನಾಯಕರು 1951 ರಲ್ಲಿ ಅಂಕೋಲೆಯ ಬಾಸಗೋಡಿನಲ್ಲಿ ಸ್ಥಾಪಿಸಿ ಅಂದಿನಿಂದ ಇಂದಿನವರೆಗೆ ಪೂಜೆಗೊಳ್ಳುತ್ತಿರುವ, ಬಹುಶಃ ಕರ್ನಾಟಕದಲ್ಲೇ ಏಕೈಕ ಮಹಾತ್ಮಾ ಗಾಂಧೀಜಿಯವರ ದೇವಾಲಯ.
ಊರ ಜನರ ವಿಶೇಷ ಸಮಾಜೋಪಯೋಗಿ ಕೂಟಗಳು, ಚರ್ಚೆಗಳು, ರಾಷ್ಟ್ರೀಯ ಹಬ್ಬಗಳಲ್ಲಿ ದೇಶಭಕ್ತಿ ಜಾಗೃತಿಯ ಗೀತೆಗಳು..ಭಜನೆಗಳು ಇಲ್ಲಿ ವರ್ಷಪೂರ್ತಿ ಮೊಳಗುತ್ತಿರುತ್ತವೆ.

Leave a Reply