ನಿನ್ನ ರೇಷ್ಮೆಯಂತಹ ಕೂದಲುಗಳಲ್ಲಿ..

   ಡಾ.ರಾಮಚಂದ್ರ ಜಿ. ಹೆಗಡೆ

ಯಾವಾಗಲೂ
ಯಾವಾಗಲೂ
ನನಗಿಂತ ಮೊದಲು
ಬಂದಿದ್ದವರ ಕುರಿತು ನಾನು
ಅಸೂಯೆ ಹೊಂದಿಲ್ಲ.

ನಿನ್ನವನ
ನಿನ್ನ ಭುಜದ ಮೇಲೆ
ಕುಳ್ಳ್ಳಿರಿಸಿ ಬಾ.
ನಿನ್ನ ರೇಷ್ಮೆಯಂತಹ
ಕೂದಲುಗಳಲ್ಲಿ
ನೂರು ಸುಂದರ ಪುರುಷರನ್ನು ತಾ.

ನಿನ್ನ ಮೊಲೆಗಳ ಮತ್ತು
ತೊಡೆಗಳೊಳಗೆ ಸಾವಿರ
ಪುರುಷರನ್ನು ಬಂಧಿಸು.
ನೂರಾರು ಜನರನ್ನು
ಮುಳುಗಿಸಿಕೊಂಡ
ನದಿ ಸಮುದ್ರದೆಡೆಗೆ
ತುಂಬಿ ಹರಿವಂತೆ ಬಾ.

ಅವರೆಲ್ಲರನ್ನೂ ನಾನಿದ್ದೆಡೆ ತಾ.

ಆದರೂ ಕೊನೆಗೆ ನಾವಿಬ್ಬರು
ಮತ್ತೆ ನದಿ ಮತ್ತು
ಸಮುದ್ರದ ಹಾಗೆ.

ನೀ ನನ್ನ ಮರೆತರೆ
ಒಂದು ಮಾತು ಮರೆಯದಿರು
ನೆನೆಪಿಟ್ಟು.
ಬೆಳ್ಳಿಯ ರೇಖೆಯಂತಹ
ಚಂದಿರನ ಬೆಳಕಿನಲ್ಲಿ
ನೆಲಕ್ಕೆ ದಟ್ಟವಾಗಿ ಹಾಸಿದ
ನಿನ್ನೆಯ
ಹೂವುಗಳು,
ಉರಿವ ಮಂದ ಬೆಂಕಿಯ ಬಿಸಿ
ಒಣಗಿ ನೆಲಕ್ಕೆ ಉದುರಿದ ಬೂದಿ
ಎಲ್ಲವೂ ನನ್ನನ್ನು
ನಿನ್ನ ಬಳಿಯೇ ಒಯ್ಯುತ್ತವೆ.
ಪರಿಮಳಗಳು, ಸ್ಪರ್ಶ, ಗಾಯನ
ಎಲ್ಲವೂ ಚಿಕ್ಕ ಚಿಕ್ಕ
ದೋಣಿಗಳಾಗಿ ನನ್ನ
ನೀನಿರುವ ನಡುಗಡ್ಡೆಗೇ
ತೇಲಿಸುತ್ತವೆ.

ಚಿಕ್ಕ ಚಿಕ್ಕ ಹೆಜ್ಜೆಗಳಲ್ಲಿ
ನೀ ನನ್ನ ಮರೆತರೆ
ಅದೇ ಹೆಜ್ಜೆಗಳಲ್ಲಿ
ನಾನಿನ್ನ ಮರೆಯುತ್ತೇನೆ.
ರಾತ್ರಿ ಬೆಳಗಾದಂತೆ
ಒಮ್ಮೆಯೇ ಮರೆತರೆ
ನೋಡಬೇಡ ತಿರುಗಿ ನನ್ನ.
ಈಗಾಗಲೇ
ನಿನ್ನ ನೆನಪಿನ ಬೇರುಗಳನ್ನು
ಪೂರ್ತಿ ಕಿತ್ತುಹಾಕಿದ್ದೇನೆ.
ಆದರೆ ಕ್ಷಣ ಕ್ಷಣಕ್ಕೂ
ಪಾರಿಜಾತ ನಿನ್ನೊಳಗೆ ಅರಳಿಕೊಂಡು
ನನ್ನ ತುಟಿಗಳ ಬಯಸಿದರೆ
ಪುನಃ ಪ್ರೀತಿಯ ಬೆಂಕಿ ನನ್ನೊಳಗೆ
ನಿಗಿ ನಿಗಿ ಕೆಂಡವಾಗಿ ಅರಳಿಕೊಳ್ಳುತ್ತದೆ.
ಇಲ್ಲಿ ನನ್ನ ಅಖಂಡ ಪ್ರೀತಿ
ಇಲ್ಲಿ ನನ್ನ ಅಖಂಡ ಪ್ರೀತಿ ನಿನಗೆ.
ಹುಡುಗಿಯರಂತೆ
ಎತ್ತರ ಬೆಳೆದ ನಿಂತ
ಮರಗಳ ಜಡೆಗಳಂತ ಎಲೆಗಳಲ್ಲಿ
ಗಾಳಿ ತೂರಿಕೊಳ್ಳುತ್ತದೆ.

ಹರಿವ ನದಿಯಲ್ಲಿ
ಬಿದ್ದಚಂದಿರ ಬಿಂಬ ಹಗುರ
ತಟ್ಟೆಯಂತೆ ತೇಲಿ ಕೊಳ್ಳುತ್ತದೆ.

ಒಂದೇ ತರಹದ ದಿನಗಳು
ಒಂದನ್ನೊಂದು ಬೆನ್ನಟ್ಟಿ ಹೋಗುತ್ತವೆÉ.
ಸೂರ್ಯ ನಕ್ಷತ್ರದ ಹೆಜ್ಜೆಗಳಲ್ಲಿ ಬರುತ್ತಾನೆ.
ಕೆಲವೊಮ್ಮೆ ದೂರದಲ್ಲಿ ಒಂದೇ
ಒಂದು ದೋಣಿ.
ಕೆಲವೊಮ್ಮೆ ಬೆಳಿಗ್ಗೆ ಎದ್ದಾಗ
ನನ್ನ ಆತ್ಮ ಕೂಡ ಹಸಿ ಹಸಿ ಒದ್ದೆ.
ದೂರದಲ್ಲಿ ಕಡಲು.
ಪ್ರತಿಧ್ವನಿಯಂತೆ ಕಡಲ ಅಬ್ಬರ.
ಇದು ಒಂದು ಬಂದರು.

ಇಲ್ಲಿ ನಿನ್ನ ತೀವ್ರವಾಗಿ
ಪ್ರೀತಿಸುತ್ತೇನೆ.
ನನ್ನ ಮುತ್ತಿನ ಮಳೆಗೆ ದಿಗಂತ ನಾಚಿಕೊಳ್ಳತ್ತದೆ.
ಯಾವುದು ಇಲ್ಲವೋ ಅದಕ್ಕೆ ಹೆಚ್ಚಿನ ಪ್ರೀತಿ.
ಅದಕ್ಕೇ ಇಲ್ಲಿ ಕುಳಿತು ನನಗೆ
ನಾನೇ ಹಾಡಿ ಕೊಳ್ಳುತ್ತೇನೆ.

ನಿನ್ನ ತುಟಿ ಕೂದಲು ಧ್ವನಿಗಾಗಿ
ನಿನ್ನ ಸಿಂಧೂರದಂತಹ ತುಟಿಗಳು
ಬಂಗಾರದ ಬಳ್ಳಿಯಂತಹ
ಕೂದಲು, ಪಾರಿಜಾತದಂತಹ ಧ್ವನಿಗಾಗಿ
ನನ್ನ ಮನಸ್ಸು ಮಿಡುಕುತ್ತಿದೆ.
ಹಸಿದ ನಾನು ಮೌನವಾಗಿ
ಬೀದಿ ಬೀದಿಗಳಲ್ಲಿ ನಿನ್ನ ಹುಡುಕುತ್ತಅಲೆಯುತ್ತೇನೆ.
ಅನ್ನ ನನ್ನ ಹಸಿವು
ನೀರು ನನ್ನದಾಹತಣಿಸುವದಿಲ್ಲ.
ಮಳೆಹನಿಯಂತಹ ಹೆಜ್ಜೆಗಳ ಹುಡುಕುತ್ತಿದ್ದೇನೆ.
ಕಾಯುತ್ತಿದ್ದೇನೆ :
ನಿನ್ನ ಮೃದುಚರ್ಮವನ್ನು
ದಾಳಿಂಬೆ ಹಣ್ಣಿನಂತೆತಿನ್ನಲು,
ನಿನ್ನ ಬೆರಳುಗಳ ಮೇಲಿನ
ಸೂರ್ಯಕಿರಣಗಳನ್ನು
ಜೇನಿನಂತೆ ನೆಕ್ಕಲು,
ನಿನ್ನ ಕಣ್ಣಂಚಿನ ನೀರನ್ನು
ಅಮೃತದಂತೆ ಸವಿಯಲು,
ನಿನ್ನ ಗುಲಾಬಿ ಮೂಗನ್ನು
ಕಚ್ಚಿತುಂಡಾಗಿಸಲು,
ನಿನ್ನ ತುಟಿಗಳ ಗಂಧಹೀರಲು
ಹೊಂಚು ಹಾಕಿಹಸಿವಿನಲ್ಲಿಕಾದಿದ್ದೇನೆ.

ಪ್ರೀತಿಗೊಂದೇಕಾರಣ
ಪರಮಪ್ರೀತಿಯೊಂದನ್ನುಬಿಟ್ಟು
ಬೇರಾವುದಕ್ಕೂ
ನಿನ್ನ ಪ್ರೀತಿಸುವದಿಲ್ಲ.
ಪ್ರೀತಿಯಿಂದ ಪ್ರೀತಿಸದಿದ್ದರೆ
ಕಾಯುವಿಕೆಯಿಂದಕಾಯದಿದ್ದರೆ
ನನ್ನತಣ್ಣನೆ ಹೃದಯ
ಬೆಂಕಿಯಾಗುತ್ತದೆ.

ನಿನ್ನಪ್ರೀತಿಸಲುಕಾರಣ
ನಿನ್ನ ಪ್ರೀತಿಯೊಂದೇ.
ಹಾಗೆಯೇ ನಿನ್ನೊಳಗೆ ತೀವ್ರದ್ವೇಷ ಬೆಳೆದುಬಾಗುತ್ತದೆ.
ನೀನುಕಾಣುವುದಿಲ್ಲ.
ಕಾಣದ್ದಕ್ಕಾಗಿಕುರುಡಾಗಿ
ನಿನ್ನ ಪ್ರೀತಿಸುವುದ್ದನ್ನೇನೆನೆಯುತ್ತೇನೆ.

ಜನವರಿಯ ಸೂರ್ಯಕಿರಣ
ಅದರ ನಿಷ್ಕರುಣೆಯಲ್ಲಿನನ್ನ ಸುಡುತ್ತದೆ.
ಪ್ರೀತಿಗಾಗಿ ನಾನೊಬ್ಬನೇ.
ಸಾಯುವುದುಒಬ್ಬನೇ.
ಬಿಸಿಲು ಬೇಗೆಯಲಿ.್ಲ
ನಿನ್ನ ಪ್ರೀತಿಯಲ್ಲಿಯೇ ಸಾವು.

ನಿನ್ನೊಳಗೆ ಭೂಮಿ

ಚಿಕ್ಕ ಕೆಂಪುಮೊಗ್ಗಿನಂತಹ  ಗುಲಾಬಿ ಹೂವಿನಂತೆ
ನಿನ್ನನ್ನು ಹಗುರ ನನ್ನ ಕೈಗಳಲ್ಲಿ ಹಿಡಿದು
ತುಟಿಗಳಿಗೆ ಒಯ್ಯಬಹುದು ಎಂದೇ ಭಾವನೆ.

ಆದರೆ ಒಮ್ಮೆಲೇ
ನನ್ನ ಪಾದುಕೆಗಳು ನಿನ್ನ ಪಾದಗಳಿಗೆ
ನನ್ನ ಬಾಯಿ ನಿನ್ನ ತುಟಿಗಳಿಗೆ
ತಗಲುತ್ತವೆ.
ನೀನು ಬೆಳೆದಿದ್ದೀ. ನಿನ್ನ ಮೊಲೆಗಳು ಗುಡ್ಡಗಳಂತೆ
ಬೆಳೆದು ನನ್ನ ಎದೆಯ ಮೇಲೆ ಆಡಿಕೊಂಡಿವೆ.
ಹುಣ್ಣಿಮೆಯ ಚಂದ್ರನಂತಹ ನಿನ್ನ ಸೊಂಟವನ್ನು
ನನ್ನ ಕೈಗಳು ಹುಡುಕಾಡುತ್ತವೆ.
ಪ್ರೀತಿಯಲ್ಲಿ ಸಮುದ್ರದ ನೀರಿನಂತೆ
ಸ್ವಚಂದ ಹರಡಿಕೊಂಡಿರುವೆ.
ನಿನ್ನ ಕಣ್ಣುಗಳ ಆಳ ಅಗಲ ಅಳೆಯಲಾರೆ.
ಭೂಮಿಗೆ ಮುತ್ತಿಡಲು ಬರಿ ನಿನ್ನ ತುಟಿಗಳನ್ನು
ಮುತ್ತಿಡುತ್ತೇನೆ.

ನಿನಗೆ ಕೇಳಲೆಂದು
ನಿನಗೆ ಕೇಳಲೆಂದು ಕೆಲವೊಮ್ಮೆ
ನನ್ನ ಶಬ್ದಗಳು
ಮಧ್ಯಾಹ್ನದ ಸಮುದ್ರತೀರದ
ತೀರದ ಹಕ್ಕಿಗಳ ಸ್ವರಗಳಂತೆ
ಕ್ಷೀಣಗೊಳ್ಳುತ್ತವೆ.

ನಿನ್ನ ಕೈಗಳಲ್ಲಿ ದ್ರಾಕ್ಷಿಗಳಂತಹ ಮಣಿಗಳಿವೆ.
ದೂರದಿಂದ ನನ್ನ ಶಬ್ದಗಳನ್ನು ನೋಡಿಕೊಳ್ಳುತ್ತೇನೆ.
ಅವು ನಿಜವಾಗಿ ನಿನ್ನವು.
ನನ್ನ ಹಳೆಯ ನೋವುಗಳ ಮೇಲೆ
ಅವು ಮಂಜಿನಂತೆಕೂತಿವೆ.
ಒದ್ದೆ ಗೋಡೆಗಳ ಮೇಲೆ
ಉಂಬುಳದಂತೆ ಅವು
ನಿಧಾನ ಮೇಲೆ ಹತ್ತುತ್ತವೆ.
ನೀನೇ ಸ್ವರಗಳನ್ನುತುಂಬುವುದು.
ತುಂಬುವುದು ನೀನೇ !
ನನ್ನ ಶಬ್ಧಗಳಲ್ಲಿ
ನಿನ್ನ ರಕ್ತದ ಕಲೆಗಳಿವೆ.
ನನ್ನ ಶಬ್ದಗಳನ್ನು
ನಿನ್ನ ಕೈಗಳಲ್ಲಿ ದ್ರಾಕ್ಷಿಯಂತಹ
ಮಣಿಗಳನ್ನಾಗಿ ಪೋಣಿಸುತ್ತೇನೆ.
ಗೈರು
ನೀ ನನ್ನೊಳಗೆ  ಪ್ರವೇಶಿಸುವಾಗ
ಗಾಯದಲ್ಲಿ ನರಳುವಾಗ
ಅಥವಾ ಪ್ರೀತಿಯ
ಮತ್ತಲ್ಲಿ ಮುಳುಗಿದಾಗ
ಒಳಮನದಲ್ಲಿ
ನಿನ್ನ ಮರೆತೆನೆಂದು ಭಾವಿಸಬೇಡ.
ನನ್ನೊಲವೇ,
ನಮ್ಮಿಬ್ಬರ ತೀರದ  ದಾಹದಲ್ಲಿ
ಒಬ್ಬರು ಇನ್ನೊಬ್ಬರೊಳಗಿನ
ನೀರು ಮತ್ತು ರಕ್ತವನ್ನೆಲ್ಲ
ಕುಡಿದು
ಎಲ್ಲ್ಲಾ ಖಾಲಿ ಆಗಿದೆ.
ಖಾಲಿಯಾದ ಶರೀರಗಳು ಜೇನು ಹುಳುಗಳಂತೆ
ಒಬ್ಬರನೊಬ್ಬರು ಕಚ್ಚಿ ಇಬ್ಬರ ಮೈಯಲ್ಲೂ
ಮಾಯದ ಗಾಯ.
ಆದರೂ
ನನಗಾಗಿ ಕಾದಿರು
ಕೊಡುವೆ ಗುಲಾಬಿ
ನಿನಗೆ.

ದೂರ ಹೋಗಬೇಡ
‘‘ದೂರ ಹೋಗಬೇಡ. ಹೋಗಲೇಬೇಡ’’
ಹೇಗೆ ಹೇಳುವುದು ?
ದಿನಗಳು ದೊಡ್ಡವು.ಕಾಯಲಾರೆ.
ಉದ್ದಕ್ಕೂ
ಎಲ್ಲೋದೂರವಿರುವ
ಟ್ರೇನ್‍ಗಳಿಗೆ ಕಾಯುವ
ನಿಲ್ದಾಣದಂತೆ ನಾನು.

ದೂರ ಹೋಗಲೇಬೇಡ.
ಏಕೆಂದರೆ
ಆತಂಕದ ಹನಿಗಳು
ಕುದಿ ಕುದಿದು ಆ ಹಬೆಯಲ್ಲಿ
ನನ್ನ ಹೃದಯ ಸ್ಥಬ್ಧವಾಗುತ್ತದೆ.

ಮರಳಿನಲ್ಲಿ ಕರಗುವ
ನೀರಿನಂತೆಕರಗಬೇಡ.
ಏಕೆಂದರೆ ನೀನು
ಹೇಗೆ ಮರೆಯಾದೆ ?
ಎನ್ನುವ ಸಾಕ್ಷಿಗಳನ್ನು
ನಾನು ಉತ್ತರಿಸಲಾರೆ.
ನಿನ್ನ ಮೌನವೇ ಹಿತ ನನಗೆ

ನಿನ್ನ ಮೌನವೇ ಹಿತ ನನಗೆ.
ಮುತ್ತಿನಲ್ಲಿ ಮಾತುಮುಚ್ಚಿ ಹೋಗಿದೆ.
ಕಣ್ಣು ರೆಪ್ಪೆಗಳು ಪ್ರಾರ್ಥನೆಯಂತೆ ಮುಚ್ಚಿವೆ.
ಸ್ವರ ಮೌನದೊಳಗೆ.
ನನ್ನಆತ್ಮದಂತೆಎಲ್ಲವೂ
ಮೌನ.

ನೀನು
ಕುದಿವ ಬೇಸಿಗೆ ರಾತ್ರಿಯಂತೆ.
ಮೌನವಾಗಿ ಮೋಡಗಳಿಗೆ
ತುಂಬಿಕೊಳ್ಳಲು ನೀ ಕಾಯುವೆ.
ಎಲ್ಲ ಕಪ್ಪಾಗಿ ಚಟಪಟನೆ
ಸಿಡಿಯುವ ಮೋಡದಂತೆ ನಿನ್ನ
ಮೌನ.

ಸಾವಿನಂತ ಕುದಿವ ಮೌನ.
ನಿನ್ನ ಮೌನ ನನಗೆ ಹಿತ
ಏಕೆಂದರೆ ಸಾವಿನ ನಂತರ ನಕ್ಷತ್ರರಾಶಿಗಳಲ್ಲಿ ನಾನು
ನೀನು ಜೊತೆ.

1 comment

Leave a Reply