ತೊಯ್ದು ಹೋಗದಿರಲಿ ಕನಸು..

 ರಾಜು ಹೆಗಡೆ

ಅತಂತ್ರವಾದ ಮೋಡಗಳು
ಅಲೆದಾಡುತ್ತಿವೆ ಗಾಳಿಯಲ್ಲಿ
ನನ್ನಾತ್ಮದಂತೆ
ಹಕ್ಕಿಗಳ ಹಾಡು, ಚುಕ್ಕೆಗಳ ಚೆಲವು
ಕರಗಿ ಹರಿಯುತ್ತಿದೆ

ಕೊಡೆಯಲ್ಲಿ ತಡೆಯಲು
ನೋಡುತ್ತಿದ್ದಾನೆ
ಅವನ ಸುತ್ತ
ಮಳೆ ಹನಿಗಳ ಪಹರೆ

ಪರಿದಾಡುತ್ತಿರುವ ಹಲವು
ನಿಟ್ಟುಸಿರು ಕೇಳುತ್ತಿದೆ
ಬಸಬಸ ಬೀಳುವ ಮಳೆಯಲ್ಲಿ
ತೊಯ್ದು ಹೋಗದಿರಲಿ
ಕನಸು

ಕಾಡೆಮ್ಮೆಗಳು
ಕಾಡುತ್ತಲಿರಲಿ..

( ಮುಂದುವರಿಯಬಹುದು!)

 

Leave a Reply