ಯಶಸ್ವಿ ‘ಕೊಡಗಿಗಾಗಿ ರಂಗಸಪ್ತಾಹ’

ನೊಂದ ಕೊಡಗು ಸಂತ್ರಸ್ತರಿಗೆ ಸಾಂತ್ವನ ಹೇಳಲು ‘ಪೀಪಲ್ ಫಾರ್ ಪೀಪಲ್’ ಕೊಡಗಿಗಾಗಿ ರಂಗಸಪ್ತಾಹ ಹಮ್ಮಿಕೊಂಡಿತ್ತು. ಒಂದು ವಾರ ಕಾಲ ಬೆಂಗಳೂರಿನ ಕಲಾಗ್ರಾಮ ಅಕ್ಷರಶಃ ಸಾಂಸ್ಕೃತಿಕ ಹಬ್ಬವನ್ನು ಕಂಡಿತು 

ಈ ಸಮಾರಂಭದಲ್ಲಿ ಭಾಗವಹಿಸಿದವರು ತಾವೂ ಕೊಡಗಿಗಾಗಿ ಇದ್ದೇವೆ ಎನ್ನುವುದನ್ನು ಸಾರಿಹೇಳಿದರು

ಸಪ್ತಾಹದ ಕೊನೆಯ ದಿನ ಕಂಡ ಚಿತ್ರಣ ಇಲ್ಲಿದೆ

ಅಜೆಂಡಾ- 719 ಮಕ್ಕಳ ವಿದ್ಯಾಭ್ಯಾಸದ ಖರ್ಚು

116 ಪಿಯುಸಿ ವಿದ್ಯಾರ್ಥಿಗಳು
213 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು
319 ಪ್ರೌಢಶಾಲಾ ವಿದ್ಯಾರ್ಥಿಗಳು

ರಂಗಸಪ್ತಾಹದಲ್ಲಿ ದತ್ತುತೆಗೆದುಕೊಂಡ ಮಕ್ಕಳು:

-10 ಮಕ್ಕಳನ್ನು ದತ್ತು ತೆಗೆದುಕೊಂಡ ಲಯನ್ಸ್ ಕ್ಲಬ್ ಚಂದನ ಬೆಂಗಳೂರು
-10 ಮಕ್ಕಳನ್ನು ದತ್ತು ತೆಗೆದುಕೊಂಡ ಶ್ರೀ ಮುನಿರತ್ನ ಶಾಸಕರು, ರಾಜರಾಜೇಶ್ವರಿ ನಗರ
-10 ಮಕ್ಕಳನ್ನು ದತ್ತು ತೆಗೆದುಕೊಂಡ ಶ್ರೀಮತಿ ಸೌಮ್ಯಾರೆಡ್ಡಿ, ಶಾಸಕರು ಜಯನಗರ
-5 ಮಕ್ಕಳನ್ನು ದತ್ತು ತೆಗೆದುಕೊಂಡ ಮಿಲಿಂದ್ ಧರ್ಮಸೇನ್, ಕಾಂಗ್ರೆಸ್ ಮುಖಂಡರು, ಸಮಾಜಸೇವಕರು
-10 ಮಕ್ಕಳನ್ನು ದತ್ತು ತೆಗೆದುಕೊಂಡ ಶ್ರೀ ಶಿವರಾಮೇಗೌಡರು, ಸಂಸದರು ಮಂಡ್ಯ
-5 ಮಕ್ಕಳನ್ನು ದತ್ತು ತೆಗೆದುಕೊಂಡ ಶ್ರೀ ಶ್ರೀನಿವಾಸ,ವಿಷ್ಣುನಿಲಯ, ವಿಷ್ಣುಸೇನಾ ಸಮಿತಿ
-10 ಮಕ್ಕಳನ್ನು ದತ್ತು ತೆಗೆದುಕೊಂಡ ಜಯಮೃತ್ಯುಂಜಯ ಸ್ವಾಮೀಜಿ, ಬೇಲಿ ಮಠ ಸಂಸ್ಥಾನ, ಉತ್ತರಕರ್ನಾಟಕ ಪ್ರಗತಿಪರ ಲಿಂಗಾಯತ ಮಠ
-10 ಮಕ್ಕಳನ್ನು ದತ್ತು ತೆಗೆದುಕೊಂಡ ಶ್ರೀಮತಿ ರೂಪಾ ಅಯ್ಯರ್, ಚಲನಚಿತ್ರ ನಿರ್ದೇಶಕರು ಮತ್ತು ಸಾಮಾಜಿಕ ಹೋರಾಟಗಾರ್ತಿ
-5 ಮಕ್ಕಳನ್ನು ದತ್ತು ತೆಗೆದುಕೊಂಡ ಗೋಪಾಲ್ ಹೊಸೂರು, ನಿವೃತ್ತ ಪೊಲೀಸ್ ಅಧಿಕಾರಿ
-5 ಮಕ್ಕಳನ್ನು ದತ್ತು ತೆಗೆದುಕೊಂಡ ಫಟಾಫಟ್ ಶ್ರೀನಿವಾಸ್, ವಿಹೆಚ್ ಪಿ ಮುಖಂಡರು
-4 ಮಕ್ಕಳನ್ನು ದತ್ತು ತೆಗೆದುಕೊಂಡ ರಾಘವೇಂದ್ರ, ನಿರ್ದೇಶಕರು ಓಪೆಲ್ ಸಂಸ್ಥೆ ಹಾಗೂ ಜೆಎನ್ ಎನ್ ಸಿ ಗೆಳೆಯರು, ಶಿವಮೊಗ್ಗ
-3 ಮಕ್ಕಳನ್ನು ದತ್ತು ತೆಗೆದುಕೊಂಡ ಎಂ ನಾಗರಾಜ್ ಬಿಜೆಪಿ ಮುಖಂಡರು
-3 ಮಕ್ಕಳನ್ನು ದತ್ತು ತೆಗೆದುಕೊಂಡ ರಂಗ ಸಪ್ತಾಹಕ್ಕೆ ಬಂದ ಮೂವರು ಪ್ರೇಕ್ಷಕರು
-2 ಮಕ್ಕಳನ್ನು ದತ್ತು ತೆಗೆದುಕೊಂಡ ನಾರಾಯಣ ಪೈ, ಉದ್ಯಮಿಗಳು
-2 ಮಕ್ಕಳನ್ನು ದತ್ತು ತೆಗೆದುಕೊಂಡ ಚಲನಚಿತ್ರ ನಿರ್ದೇಶಕರ ಸಂಘ, ಬೆಂಗಳೂರು
-2 ಮಕ್ಕಳನ್ನು ದತ್ತು ತೆಗೆದುಕೊಂಡ ಮಂಜುನಾಥ್ ಅದ್ದೆ, ಪತ್ರಕರ್ತರು
-2 ಮಕ್ಕಳನ್ನು ದತ್ತು ತೆಗೆದುಕೊಂಡ ಶಾಂತಕುಮಾರ್, ಉದ್ಯಮಿ, ಚಿತ್ರನಿರ್ಮಾಪಕ
-2 ಮಕ್ಕಳನ್ನು ದತ್ತು ತೆಗೆದುಕೊಂಡ ಭಾನುಪ್ರಕಾಶ್, ಉದ್ಯಮಿ
-1 ಮಗುವನ್ನು ದತ್ತು ತೆಗೆದುಕೊಂಡ ನಾಗಾಭರಣ, ನಟ, ನಿರ್ದೇಶಕ, ರಂಗಕರ್ಮಿ
-1 ಮಗುವನ್ನು ದತ್ತು ತೆಗೆದುಕೊಂಡ ಮಾಲತೇಶ್
-1 ಮಗುವನ್ನು ದತ್ತು ತೆಗೆದುಕೊಂಡ ಶ್ರೀ ರಾಘವೇಂದ್ರ ರಾವ್, ಜೆಡಿಎಸ್ ಮುಖಂಡರು
-1 ಮಗುವನ್ನು ದತ್ತು ತೆಗೆದುಕೊಂಡ ಸುನಿ, ಚಲನಚಿತ್ರ ನಿರ್ದೇಶಕರು
-1 ಮಗುವನ್ನು ದತ್ತು ತೆಗೆದುಕೊಂಡ ಆರ್ ಚಂದ್ರು, ಚಲನಚಿತ್ರ ನಿರ್ದೇಶಕರು
-1 ಮಗುವನ್ನು ದತ್ತು ತೆಗೆದುಕೊಂಡ ಗೌತಮ್ ಚಾಂದ್, ವಕೀಲರ ಸಂಘ
-ಕೊಡಗಿನ ವಿಪತ್ತಿನಲ್ಲಿ ದುರಂತ ಸಾವಿಗೀಡಾದ ಮಹಿಳೆಯೊಬ್ಬರ ಚಿಕ್ಕಮಗುವನ್ನು ದತ್ತುಪಡೆದುಕೊಳ್ಳುವ ಭರವಸೆ ನೀಡಿರುವ ಡಾ.ನಾಗಲಕ್ಷ್ಮಿ ಚೌಧರಿ, ವೈದ್ಯೆ, ಸಾಮಾಜಿಕ ಹೋರಾಟಗಾರ್ತಿ, ಕಾಂಗ್ರೆಸ್ ಮುಖಂಡರು
ಹಲವು ಮಕ್ಕಳನ್ನು ದತ್ತು ಪಡೆದುಕೊಂಡ ಶ್ರೀ ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ


-ಉಳಿದ 463 ಮಕ್ಕಳನ್ನು ದತ್ತು ಪಡೆದುಕೊಂಡು ಶಿಕ್ಷಣ ನೀಡಲಿರುವ ಆದಿಚುಂಚನಗಿರಿಯ ಪೂಜ್ಯ ಡಾ.ನಿರ್ಮಲಾನಂದನಾಥ ಸ್ವಾಮಿಗಳು

ಉಳಿದ ಪ್ರಾಯೋಜಕರು:
ಡಾ.ರವೀಂದ್ರಗೌಡ, ಹೆಚ್ ಎನ್ ಆರ್ ಟ್ರಸ್ಟ್ ಮೂಲಕ 5 ವಿಕಲ ಚೇತನ ಮಕ್ಕಳನ್ನು ದತ್ತು ಪಡೆಯಲಿದ್ದಾರೆ

ಡಾ.ರಾಘವೇಂದ್ರ, ಚೌಡೇಶ್ವರಿ ನೇತ್ರಾಲಯ ಇವರು ದೃಷ್ಟಿದೋಷ ಇರುವ 8 ಮಂದಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ ಹಾಗೂ ಪೀಪಲ್ ಫಾರ್ ಪೀಪಲ್ ತಂಡದ ಎಲ್ಲಾ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆಯ ಭರವಸೆ ನೀಡಿದ್ದಾರೆ.

ಡಾ.ಚಂದ್ರಶೇಖರ್ ಶ್ರವಣದೋಷ ಚಿಕಿತ್ಸಾ ಸಂಸ್ಥೆಯ ಎಂಎಸ್ ಜೆ ನಾಯಕ್ ಶ್ರವಣದೋಷ ಇರುವ 11 ಮಂದಿಗೆ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.

ನಟ, ನಿರ್ದೇಶಕ, ರಂಗಕರ್ಮಿ ಬಿ.ಸುರೇಶ್, ಪೀಪಲ್ ಫಾರ್ ಪೀಪಲ್ ತಂಡಕ್ಕೆ ಪ್ರತೀ ತಿಂಗಳು 25 ಸಾವಿರ ಹಣ ನೀಡುವ ಭರವಸೆ ನೀಡಿದ್ದಾರೆ.
ಡಾ.ರಾಜೀವ್ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ.

ರಾಜ್ಯ ರೈತ ಸಂಘ ಕೊಡಗಿನಲ್ಲಿ ಶ್ರಮಾದಾನ ಮಾಡಲು 1000 ಸ್ವಯಂಸೇವಕರನ್ನು ನೀಡುವ ಭರವಸೆ ನೀಡಿದೆ.

ಸಾಧನಾ ಇನ್ಸ್ ಟಿಟ್ಯೂಟ್ ನ ಡಾ.ಜ್ಯೋತಿ 11 ಐಎಎಸ್ ಹಾಗೂ ಕೆಎಎಸ್ ಆಕಾಂಕ್ಷಿಗಳಿಗೆ ತರಬೇತಿ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.

ಮಂಡ್ಯ ಸಂಸದರಾದ ಶಿವರಾಮೇಗೌಡರು ಕೊಡಗಿನ ನಿರಾಶ್ರಿತ ಪದವೀಧರರಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

ಕೊಡಗು ಮರು ನಿರ್ಮಾಣಕ್ಕಾಗಿ ಸುಚಿತ್ರ ಫಿಲಂ ಇನ್ಸ್ ಟಿಟ್ಯೂಟ್ ಫಿಲಂ ಫೆಸ್ಟ್ ನಡೆಸಲು ಸಂಪೂರ್ಣ ಸಹಾಯ ನೀಡುವ ವಾಗ್ದಾನ ನೀಡಿದೆ.

ಉಳಿದ ವಿವರಗಳು:
ಇಲ್ಲಿಯವರೆಗೆ ಜಮ್ಮಾ ಭೂಮಿರ ಕಥೆ ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ 3 ಲಕ್ಷ ರೂ. ಧನಸಂಗ್ರಹವಾಗಿದೆ. ಮುಂದಿನ ಜನವರಿಯಲ್ಲಿ ಡಾಕ್ಯುಮೆಂಟರಿ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ.

ಕೊಡಗಿಗಾಗಿ ರಂಗಸಪ್ತಾಹದ ನಂತರ ಕೊಡಗಿಗಾಗಿ ಚಲನಚಿತ್ರೋತ್ಸವ ಏರ್ಪಡಿಸುವ ಯೋಜನೆ ಪೀಪಲ್ ಫಾರ್ ಪೀಪಲ್ ತಂಡದ್ದು.

ಇದರ ಜೊತೆಯಲ್ಲಿ ಕೊಡಗಿನಲ್ಲಿ 2 ದಿನ, ಹಾಸನದಲ್ಲಿ 3 ದಿನ, ಕುಂದಾಪುರ/ ಉಡುಪಿಯಲ್ಲಿ 2 ದಿನ, ಮೈಸೂರಿನಲ್ಲಿ 1 ದಿನ ರಂಗಸಪ್ತಾಹ ನಡೆಸಲು ತೀರ್ಮಾನಿಸಲಾಗಿದೆ.
ಪೀಪಲ್ ಫಾರ್ ಪೀಪಲ್ ತಂಡದ ಜೊತೆಗೆ ನಮ್ಮ ಕೊಡಗು ತಂಡವನ್ನು ಉಪಸಮಿತಿಯಾಗಿ ರಚನೆ ಮಾಡಲಾಗುವುದು.

ರಂಗಸಪ್ತಾಹದ ಯಶಸ್ಸಿಗೆ ಕಾರಣೀಭೂತರಾದವರಿಗೆ ಧನ್ಯವಾದ:

ರಂಗ ಸಪ್ತಾಹದ ಅತಿಥಿಗಳಿಗೆ ಸ್ವರ್ಗದ ಗಿಡಗಳನ್ನು ನೀಡಿದ ಡಾ.ಕೃಷ್ಣ ಮತ್ತು ಪುಸ್ತಕಗಳನ್ನು ನೀಡಿದ ಗೊರವಿ ಆಲ್ದೂರ್ ಅವರಿಗೆ

ಸಪ್ತಾಹದಲ್ಲಿ ಪುಸ್ತಕ ಮಳಿಗೆ ಹಾಕಿದ ಆಕೃತಿ ಗುರುಪ್ರಸಾದ್ ಮತ್ತು ತಂಡದವರಿಗೆ

ಕೊಡಗಿನ ಉತ್ಪನ್ನಗಳ ಮಳಿಗೆ ಹಾಕಿದ ನೌಶದ್ ಮತ್ತು ನಮ್ಮ ಕೊಡಗು ತಂಡಕ್ಕೆ

ಕಲಾ ಮಾರ್ಗದರ್ಶನ ಮಾಡಿದ ಬಾದಲ್ ನಂಜುಂಡಸ್ವಾಮಿ ಮತ್ತು ಅದರ ಉಸ್ತುವಾರಿ ವಹಿಸಿದ ಮಲ್ಲಿಕಾರ್ಜುನ್ ಅವರಿಗೆ

ನಾಟಕೋತ್ಸವದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ರಾಜ್ ಗುರು ಮತ್ತು ನಯನಸೂಡಾ ದಂಪತಿಗೆ

ಊಟ, ಉಪಚಾರ, ಉಪಾಹಾರ ನಿರ್ವಹಣೆ ಮಾಡಿದ ಜ್ಞಾನೇಂದ್ರ ಕುಮಾರ್, ದಯಾನಂದ್, ಹರೀಶ್, ಭಾಸ್ಕರ್, ಗಣೇಶ್ ಮತ್ತು ತಂಡಕ್ಕೆ

ಆಡಿಯೋ, ವಿಶ್ಯುವಲ್ ಮೀಡಿಯಾ ಮತ್ತು ಎಡಿಟಿಂಗ್, ಪ್ರಮೋಶನ್ ವಿಭಾಗದಲ್ಲಿ ಸಹಕರಿಸಿದ ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್‌ ನ ಸಂತೋಷ್ ಕೊಡಂಕೇರಿ, ಸಂಕೇತ್ ಪೂಜಾರಿ ಮತ್ತು ತಂಡದವರಿಗೆ

ಛಾಯಾಗ್ರಹಣ ವಿಭಾಗದಲ್ಲಿ ಸಹಕರಿಸಿದ ಮದನ್ ಮತ್ತು ದೀಪಕ್ ಅವರಿಗೆ

ಮಾಧ್ಯಮ ನಿರ್ವಹಣೆಯಲ್ಲಿ ಸಹಕರಿಸಿದ ವಿಶ್ವಾಸ್ ಭಾರದ್ವಾಜ್, ಶ್ರೀನಿಧಿ ಮತ್ತು ಅಂಬಿಕಾ

ಕೌಂಟರ್ ನಿರ್ವಹಣೆ ಮಾಡಿದ ವಿನುತಾ ವಿಶ್ವನಾಥ್, ಹರ್ಷಕುಮಾರ್ ಟಿ.ಕೆ, ಗೊರವಿ ಆಲ್ದೂರ್

ಕಾರ್ಯಕ್ರಮಕ್ಕೆ ತನುಮನಧನ ಸಹಕಾರ ನೀಡಿದವರು:
-ರಘುನಾಥ್, ನಿರ್ಮಾಪಕರು, ಯಾರಿಗೆ ಯಾರುಂಟು ಚಲನಚಿತ್ರ
-ಸೌಂದರ್ಯ ಜಗದೀಶ್, ಖ್ಯಾತ ಚಲನಚಿತ್ರ ನಿರ್ಮಾಪಕರು
-ರಘುನಾಥ್ ಗುರೂಜಿ, ಟೆಂಪಲ್ ಆಫ್ ಸಕ್ಸಸ್

 

Leave a Reply