ಕಡ್ಲೇಕಾಯ್ ಬರ್ಥ್ ಡೇ ಕಡ್ಲೇಕಾಯ್..

ವಾಸುದೇವ ಶರ್ಮ 

ಇತ್ತೀಚೆಗೆ ನನ್ನ ಹುಟ್ಟಿದ ಹಬ್ಬ ಆಯ್ತು. ನಮ್ಮ ಕಛೇರಿಯ ತಂಡ ಹುಟ್ಟಿದ ಹಬ್ಬದ ಕೇಕ್ ಕತ್ತರಿಸಲಿಟ್ಟು ಕೈಗೆ ಯಾರಿಗೂ ಇಲ್ಲದ ದೊಡ್ಡ ಪೊಟ್ಟಣ ಉಡುಗೊರೆ ಕೊಟ್ಟಿತು.

ಎಲ್ಲರಿಗೂ ಕೊಡೋದು ಒಂದು ಚಂದದ ಪೆನ್ನು ಅಷ್ಟೆ.

ನನಗೆ ಯಾಕೆ ಇಷ್ಟು ದೊಡ್ಡದು?

ನಾನು ಆಕಾಶವಾಣಿ ಸಂದರ್ಶನ ಮುಗಿಸಿ ಉಸ್ಸಪ್ಪೋ ಅಂತ ಟ್ರಾಫಿಕ್ನಲ್ಲಿ ಆಫೀಸಿಗೆ ಬಂದಿದ್ದೆ.

ಅರ್ಜೆಂಟು ಮೀಟಿಂಗ್ಗಿದೆ ಅಂತ ಎಲ್ಲರನ್ನೂ ಸೇರಿಸಬೇಕೆಂದು ಇದ್ದವನಿಗೆ ಬರ್ತ್ ಡೇ ಮಾಡಿದರು.

ಹೂ, ದೊಡ್ಡ ಗಿಫ್ಟ್… ಈಗಲೇ ತೆಗೆಯಬಾರದೆಂದೂ ಕಂಡಿಷನ್ ಬೇರೆ, ನಿಮಗೆ ಬಹಳ ಇಷ್ಟವಾಗಿರುವುದು ಎಂದು ಒಗ್ಗರಣೆ ಬೇರೆ.

ಸರಿ ಎಂದು ಪಕ್ಕಕ್ಕೆ ಇಟ್ಟಿದ್ದೆ. ಸರಪರ ಸದ್ದಾಗಿತ್ತು.

 

ಮನೆಗೆ ಹೋಗಿ ತೆಗೆದರೆ ಇದು… ಕಡಲೆಕಾಯಿ ಜೊತೆಗೆರೆಡು ಅಚ್ಚು ಬೆಲ್ಲ!

ವಾಹ್! ಯಾರಿಗುಂಟು ಯಾರಿಗಿಲ್ಲ.

ಬಹಳ ಸೃಜನಾತ್ಮಕ ಉಡುಗೊರೆ.

ಬಹಳ ಸಂತೋಷ ಚೈಲ್ಡ್ ರೈಟ್ಸ್ ಟ್ರಸ್ಟಿನ ಗೆಳೆಯರ ತಂಡ.

ಮುಂದಿನ ವರ್ಷ ಏನು ಕೊಡ್ತೀರಿ ದೊಡ್ಡದು?

Leave a Reply