ವಾಟ್ ನೆಕ್ಸ್ಟ್…?

ಭುವನಾ ಹಿರೇಮಠ

ಪಿಂಕ್ ಲಸ್ಟರ್ಡ್ ಗೋಡೆಗಳ ಮಧ್ಯೆ
ನುಸುಳಿಕೊಂಡು
ಭುಜಕ್ಕೆ ಭುಜ ತಾಕಿಸಿ
ಇಕ್ಕಟ್ಟಾದ ಕಾರಿಡಾರಿನಲ್ಲಿ
ತುಳುಕುತ್ತಲೇ
ವೆಲ್ಕಮ್ ಹೇಳಿದ ಕರ್ಟೀನು,

ಕೈಮಿಲಾಯಿಸಿ
ಕಣ್ಸನ್ನೆಗಳಲ್ಲಿಯೇ
ಮೈಯ್ಯ ತಿರುವುಗಳೆಲ್ಲ ನೆಟ್ಟಗಾಗಿ
ಐ ಗ್ಲಾಸಸ್ ಪಕ್ಕಕ್ಕಿರಿಸಿ
ಗಲ್ಲಕ್ಕೆ ಗಲ್ಲ ಒತ್ತಿದ….!
ರಾತ್ರಿಪೂರ್ತಿ ಮುಗಿಲ ಮುತ್ತುಂಡ ಚಂದಿರನಂತೆ
ಇಷ್ಟಗಲ
ವಿಶ್ರಾಂತ ನಕ್ಷತ್ರಗಳ ಬೆಳಕು
ನಮ್ಮಿಬ್ಬರ ತುಟಿಗಳಿಗೆ
ಗುಣುಗುಟ್ಟುವ ಮುತ್ತುಗಳು


ವಾಟ್ ನೆಕ್ಸ್ಟ್……..?

ಸಾವಿರ ಸಾವಿರ
ಕೂಸುಗಳ ಹೊತ್ತ
ಪೇಲ್ ಯಲ್ಲೋ
ಸ್ಪರ್ಮುಗಳ ಕಣಜ

ಅವನಿಗೆ ತಂದೆಯಾಗುವುದು
ಇಷ್ಟವಿಲ್ಲ
ಕಾಂಡೋಮು ಮರೆತ ದಿನದಿಂದ
ನಾನು ತಾಯಿಯಾಗಿದ್ದೆ
ಒಂದು ದಿನ
ಎರಡು ದಿನ
ಮೂರು ದಿನ
………………….
ಮಕ್ಕಳೇ ಇಲ್ಲದೆಯೂ
ತಾಯಿಯಾಗುವ ಧರೆ

ಬಿಸಿಲ ಬಣ್ಣದ ವೀರ್ಯ
ಭಣಗುಡುವ ಮಧ್ಯಾಹ್ನ

3 comments

  1. ಶ್ರೀಮತಿ ಭುವನಾ ಹಿರೇಮಠ ಅವರ What Next? ತುಂಬಾ bold ಕವಿತೆ. ಆದರೆ ಕವಿತೆಯ boldness ಅಂತಿಮ ಚರಣಕ್ಕೆ ಬಂದಾಗ ಅಕ್ಷರಶಃ ನಿರ್ವೀರ್ಯ ಗೊಂಡು ನಿಸ್ತೇಜ ಸ್ಥಿತಿ ತಲುಪುತ್ತೆ.‌
    ಧನ್ಯಕುಮಾರ ಮಿಣಜಗಿ

  2. ಪದ್ಯದ ನಿರೂಪಣೆಗೆ ಇಂಗ್ಲೀಷ್ ಪದಗಳು ಕೈ ಹಿಡಿದಿದ್ದರು. ಅವುಗಳ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಅಥವಾ ಸಂವಾದಿ ಪದಗಳ ಕಡೆಗು ಕವಿ ಗಮನಹರಿಸಬೇಕಾಗಿ ಮನವಿ

Leave a Reply