ಅವನ ನೆನಪೇ ಮನದಿ ಮೂಡಿದೆ..

ಅವನೊಲವು…

 ಚೈತ್ರ ಶಿವಯೋಗಿಮಠ 

ನೀಲ ನಭವು ಇಂದೇಕೋ ಕಾಣೆ,
ಬೆಳ್ಮುಗಿಲ ತಾ ಹೊದ್ದಿದೆ.
ಮನದ ಪಟದಿ ಒಂದೇ ರಂಗು,
ಚಿಂತೆಯೇನೋ ಕಾಡಿದೆ..
ನಲ್ಲನಲ್ಲಿ, ಸಪ್ತಸಾಗರದಾಚೆ ನಾನಿಲ್ಲಿ,
ಅವನ ನೆನಪೇ ಮನದಿ ಮೂಡಿದೆ..
ಮತ್ತೆ-ಮತ್ತೆ ಕಾಡಿದೆ..
ಮರುಳು ಮನವು ಅವನ ಸನಿಹ ಬಯಸಿದೆ
ಅವನೊಲವ ಹಾಡ ಹೃದಯ ತಾ ಹಾಡಿದೆ

 

ಅಲ್ಲೊಂದು, ಇಲ್ಲೊಂದು ಹನಿಯು
ಬಾನಂಚದೇನೋ ಸಂಚ ಹೂಡಿದೆ..
ಹನಿಯೊಂದು ಸೋಕೆ ಅಧರಕೆ,
ಮನದಿ ನೂರು ಭಾವ ಗರಿಗೆದರಿದೆ..
ಕಾಂತನೊಲವ ನೆನೆಯೆ, ಒಡನೆ
ತುಟಿಯಂಚಲೊಂದು ಮಿಂಚಿದೆ..
ಅವನ ನೆನೆಯಲದೇಕೋ
ಎನ್ ಹೃದಯ  ತುಸು ನಾಚಿದೆ,
ಜೊತೆಗೆ ಕೆನ್ನೆ ಕೆಂಪು ರಂಗೇರಿದೆ..

Leave a Reply