ಹೊಸಪೇಟೆಯಲ್ಲಿ ‘ಹಾಯ್ ಅಂಗೋಲ’ ಬಿಡುಗಡೆ

ಹೊಸಪೇಟೆಯ ಅಖಿಲ ಕರ್ನಾಟಕ ಸಾಂಸ್ಕೃತಿಕ ಕೇಂದ್ರ ಹಾಗೂ ಪ್ರೌಢದೇವರಾಯ ಮಹಾತಾಂತ್ರಿಕ ವಿದ್ಯಾಲಯ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನದ ‘ಹಾಯ್ ಅಂಗೋಲಾ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಲೇಖಕ ಪ್ರಸಾದ್ ನಾಯ್ಕ್ ಅವರ ಅತ್ಯಂತ ಜನಪ್ರಿಯ ಪ್ರವಾಸ ಕಥನವನ್ನು ಖ್ಯಾತ ಕಥೆಗಾರ ಅಮರೇಶ್ ನುಗಡೋಣಿ ಅವರು ಬಿಡುಗಡೆ ಮಾಡಿದರು.

ಕೃತಿ ಕುರಿತು ಹಂಪಿ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ ಚಲುವರಾಜು ಅವರು ಮಾತನಾಡಿದರು. ಲೇಖಕಿ ಹಾಗೂ ಕಲಾಕೇಂದ್ರದ ಅಧ್ಯಕ್ಷೆ  ಅಂಜಲಿ ಬೆಳಗಲ್, ಕಾರ್ಯದರ್ಶಿ ಚಂದ್ರಶೇಖರಯ್ಯ ರೋಣದ ಮಠದ  ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಮಂಜುಳಾ ಸ್ವಾಗತಿಸಿದರು

1 comment

  1. ಅಭಿನಂದನೆಗಳು ಪ್ರಸಾದ್ ನಾಯ್ಕ ಸರ್

Leave a Reply