ಬಣ್ಣಗಳ ಗೈರು ಹಾಜರಿ….

ಮೆಹಬೂಬ ಮುಲ್ತಾನಿ

ಬಣ್ಣಗಳ ಬಣ್ಣ ಕಳೆದ
ಗೈರು ಹಾಜರಿಯಲ್ಲಿ
ನಾ ನಿನ್ನ ಪ್ರೀತಿಸಬೇಕಿದೆ….

ನಿನ್ನ ಮನಸ್ಸು
ನನ್ನ ಶರ್ಟಿಗೆಂದೆ ಹೊಲೆದ
ಖಾಲಿ ಜೇಬಿನಂತಿದೆ
ಅಲ್ಲಿ
ಬಣ್ಣ ತುಂಬುವುದು ಬೇಡ…

ಉಂಡ ಪಾತ್ರೆಗಳನ್ನೆಲ್ಲಾ ಒಂದೇ ಸಿಂಕಿಗೆ ಸುರಿದು
ಬಣ್ಣಗಳ ಲಸ್ಟಿನಲ್ಲಿ ಕಳೆದು ಹೋದವರು ನಾವು…


ನೀನೆ ಓಮ್ಮೆ ನೋಡಿಕೊ ನೀನೇ ಬರೆದ
ನಿನ್ನ ಕವಿತೆಗಳ…ಅಬ್ಬಾ
ಎಂಥಾ ರೂಪಕಗಳು
ನೀಲಿ ಆಗಸ
ಕೆಂಪು ಸೂರ್ಯ
ಹಸಿರು ಭೂಮಿ
ಹಳದಿ ಮೈ
ಕೇಸರಿ ಸೀರೆ
ಕಪ್ಪಗಿನ ರಾತ್ರಿ
ಗುಲಾಬಿ ತುಟಿ
ಬಿಳಿಯ ಚಾದ್ದರು

ಈ ಬಣ್ಣಗಳ ರೂಪಕ ನಿನ್ನ ಕವಿತೆಯಲ್ಲಿ
ಮಾತ್ರ ಬಣ್ಣಗೆಟ್ಟಿಲ್ಲ….
ಕೋಲಾಜಿನಂತೆ  ಕಂಗೋಳಿಸುತ್ತಿವೆ…

ಕಾಲ ಬದಲಾಗಿದೆ
ಬಣ್ಣಗಳು.,..!

ಮೇಕಪ್ಪ ಕಳಚಿಟ್ಟ ಮಾಡರ್ನ್ ಬೆಡಗಿಯರಂತೆ
ನಿವರ್ಣಗೊಂಡಾಗ ನಾ ನಿನ್ನ ಪ್ರೀತಿಸಬೇಕಿದೆ
ಅಜ್ಞಾತದಲ್ಲಿಯೇ ನಾವು ಕಟುವಾಗಿ
ಪ್ರೀತಿಸಬೇಕಿದೆ…

 

2 comments

  1. ಬಣ್ಣಗಳ ಗೈರಿನಲ್ಲೆ ಬಣ್ಣ ತುಂಬಿ ನಕ್ಕಂತಿತ್ತು ಕವನ…ನಿವರ್ಣಗೊಂಡಾಗ ನಾ ನಿನ್ನ ಪ್ರೀತಿಸಬೇಕಿದೆ ಎನ್ನುತ್ತಾ ಪ್ರೀತಿಗೆ ಕೊನೆಯಿಲ್ಲ ಎಂದು ಸಾರಿದಿರಿ…ಖುಷಿ ನೀಡಿತು ಕವನ

  2. ಚೆನ್ನಾಗಿದೆ ಸಾರ್ ಕವಿತೆ ಪ್ರೀತಿಗೆ ಸುಣ್ಣದ ಗುಣ ಇದೆ ಹಾಗಾಗಿ ಗೋಡೆಯಿಂದ ಬಣ್ಣ ಉದುರಿದರೂ ಸುಣ್ಣ ಹಾಗೇ ಇರುತ್ತೆ ಗೋಡೆಗೆ ಅಂಟಿಕೊಂಡು ಇದನ್ನು ಚೆನ್ನಾಗಿ ಕಟ್ಟಿ ಹೇಳುತ್ತಿದೆ ನಿಮ್ಮ ಕವಿತೆ

Leave a Reply