ದಿವ್ಯ ಬೆಳಕು ನಕ್ಕಿತು..

ಎನ್ ರವಿಕುಮಾರ್ ಟೆಲೆಕ್ಸ್

ಕಿರಿದಾದ ಕುರಿದೊಡ್ಡಿಯೊಳಗೆ – ಕಡಿದಾದ ಬೆಟ್ಟದ ತುತ್ತ ತುದಿಯಲ್ಲಿ
ಮಹಾ ಸಂತನ ಮಮಕಾರ ಮಾನವತೆಯ ನದಿಯೊಂದು ಉಕ್ಕಿತು
ಹಣೆ – ಅಂಗೈ,ಮುಂಗಾಲುಗಳ ನರ ಹರಿದು ಚಿಮ್ಮಿದ ಹನಿ ಹನಿ ರಕ್ತವೂ
ಹಣತೆಗಳಂತೆ ಬೆಳಗಿತು ನೋಡಿ
ಕ್ಷಮೆಯನ್ನು ಕ್ಷಮೆಯೇ ತಬ್ಬಿ
ಬಿಕ್ಕಳಿಸಿ ಸಂತೈಹಿಸಿತು ಜಗವ
ಉಕ್ಕಿನ ಮೊಳೆಯು
ಪರಮ ಬೆಳಕಿನ ನೆತ್ತಿಯ ಸೀಳಿ ಪುಣ್ಯಗೊಂಡಿತು
ಯುಗದ ಕತ್ತಲು ಕಣ್ಣೀರಿಟ್ಟು
ಕೊರಗುವಾಗ
ಧರೆಯ ದಿವ್ಯ ಬೆಳಕೊಂದು
ತೇಜ ಕಿರಣಗಳ ಚೆಲ್ಲಾಡಿ ತಣ್ಣನೇ ನಕ್ಕಿತು…..
ಶಿಲುಬೆಯೊಂದು ಪ್ರೀತಿಸಿತು
ಕಾರುಣ್ಯವನ್ನು….

1 comment

  1. “ಕ್ಷಮೆಯನ್ನು ಕ್ಷಮೆಯೇ ತಬ್ಬಿ ಬಿಕ್ಕಳಿಸಿ ಸಂತಹಿಸಿತು ಜಗವ”
    ಏಸು ಕ್ರಿಸ್ತರ ಈ ಸಂದೇಶ ಮನುಕುಲದ ಶಾಂತಿ, ನೆಮ್ಮದಿಗೆ ರಹದಾರಿ.‌ ಶ್ರೀ ಎನ್ ರವಿಕುಮಾರ್ ಅವರಿಗೆ ಅಭಿನಂದನೆಗಳು.‌

Leave a Reply