ಮುದ್ದು ಮಕ್ಕಳ ನೃತ್ಯ ಪಯಣದ ಮೊದಲ ಹೆಜ್ಜೆಗಳ ಗೆಜ್ಜೆಯ ಝೇಂಕಾರ

ಭರತ ಭೂಮಿಯ ಪಾರಂಪರಿಕ ಭರತನಾಟ್ಯ ಕಲೆಯನ್ನು ಇಂದಿನ ಮುದ್ದು ಮಕ್ಕಳು ತಮ್ಮದಾಗಿಸಿಕೊಳ್ಳುವ ಅತೀವ ಹಂಬಲದಲ್ಲಿ ತಮ್ಮ ನೃತ್ಯ ಪಯಣದ ಮೊದಲ ಹೆಜ್ಜೆಗಳ ಗೆಜ್ಜೆಯ ಝೇಂಕರಿಸಲು ಅಣಿಯಾಗಿದ್ದಾರೆ. ೧೩.೦೧.೨೦೧೯, ಭಾನುವಾರದಂದು ಸಂಜೆ ೫.೩೦ರ ವೇಳೆಗೆ ನಗರದ ಮಲ್ಲೇಶ್ವರಂನ ಸೇವಾಸದನದ ವೇದಿಕೆಯ ಮೇಲೆ ತಮ್ಮ ಭರತನಾಟ್ಯ ಗೆಜ್ಜೆ ಪೂಜೆಯ ಕಾರ್ಯಕ್ರಮವನ್ನು ಗುರು ಶ್ರೀಮತಿ ಪದ್ಮ ಹೇಮಂತ್ ರವರ ನೇತೃತ್ವದಲ್ಲಿ ಪ್ರಸ್ತುತಪಡಿಸಲಿದ್ದಾರೆ.

ಈ ಲೇಖನ ಎಸ್.ಪಿ, ಸಾಹಿತಿ ಟಿ.ಎಸ್, ಧನ್ಯಶ್ರೀ ಯು, ರಕ್ಷಿತ ವಿ ಈ ಪುಟಾಣಿ ಮಕ್ಕಳ ಪ್ರತಿಭೆಯನ್ನು ಕಣ್ಣಾರೆ ಕಂಡು ಹರಸಲು ಅತಿಥಿಗಳಾಗಿ ಆಗಮಿಸಲಿದ್ದಾರೆ ಪ್ರತಿಭ ನಾಟ್ಯಾಲಯದ ನಿರ್ದೇಶಕಿ ವಿದುಷಿ ಶ್ರೀಮತಿ ಪ್ರಭಾ ಕಿಣಿ, ಖ್ಯಾತ ಮೃದಂಗ ವಿದ್ವಾನ್ ಶ್ರೀ ವಿ. ಆರ್. ಚಂದ್ರಶೇಖರ್ ಮತ್ತು ಕೊಳಲು ವಿದ್ವಾನ್ ಶ್ರೀ ಗಣೇಶ್ ಕೆ. ಎಸ್. ಇನ್ನು ಈ ಗೆಜ್ಜೆಗಳಿಗೆ ತಮ್ಮ ನಾದದ ಉಲಿವನ್ನು ಸೇರಿಸಿ ಸೊಬಗೇರಿಸಲಿದ್ದಾರೆ ನಟುವಾಂಗದಲ್ಲಿ ಗುರು ಶ್ರೀಮತಿ ಪದ್ಮ ಹೇಮಂತ್, ಗಾಯನದಲ್ಲಿ ಕುಮಾರಿ ಶೀತಲ್ ಹೇಮಂತ್ , ಮೃದಂಗದಲ್ಲಿ ವಿ.ಆರ್. ಚಂದ್ರಶೇಖರ್, ಕೊಳಲು ವಿದ್ವಾನ್ ಶ್ರೀ ಗಣೇಶ್ ಕೆ. ಎಸ್.ಮತ್ತು ವೈಲಿನ್ ವಾದನದಲ್ಲಿ ವಿದ್ವಾನ್ ಶ್ರೀ ಹೇಮಂತ್ ಕುಮಾರ್. ಈ ಪುಟಾಣಿ ಪ್ರತಿಭೆಗಳಿಗೆ ಎಲ್ಲರೂ ಸೇರಿ ಉತ್ಸಾಹ ಮತ್ತು ಪ್ರೋತ್ಸಾಹಗಳ ನೀರೆರೆದು ಹರಸುವ ಬನ್ನಿ.

Leave a Reply