ಅವಳು..

ಪ್ರವೀಣಕುಮಾರ್ ಗೋಣಿ


ಅವಳ ಕಣ್ಣಂಚಿನ ಬೆಳಕೊಳಗೆ
ಬದುಕು ಮತ್ತೆ ಚಿಗುರೊಡೆಯುವುದು
ಕತ್ತಲಿನ ಭಯವ ಅಳಿಸಿ
ಉಲ್ಲಾಸದ ಅಭಯ ಹೃದಯದೊಳಗೆ ಅರಳುವುದು .

ಅದೆಷ್ಟು ನೋವ ಉಂಡರು
ನರಳಿಕೆಯ ಮರೆತು ನಗು
ಚೆಲ್ಲುವ ಅವಳು
ನೋವು ಕೂಡ ಅವಳೆಡೆಗೆ
ಬರಲು ಹಿಂದು ಮುಂದು ನೋಡುವುದು .


ಎದೆಯೊಳಗೆ ವೇದನೆ ಹೆಪ್ಪಾಗಿದ್ದರು
ಹರುಷದಿಂದಲೇ ಹಕ್ಕಿಯಂತೆ
ಹಗುರಾಗಿ ಬದುಕೊಳಗೇ
ವಿಹರಿಸುವವಳು ಅವಳು
ಬದುಕಲಾರದಷ್ಟು ಕನಿಷ್ಠವಲ್ಲ
ಈ ಬದುಕು ಎನ್ನುವ ಪಾಠ
ಅನುಕ್ಷಣ ಬೋದಿಸುವಂತೆ ಬದುಕುವವಳು ಅವಳು

Leave a Reply