ದೀಪ್ತಿ ಭದ್ರಾವತಿ ಅವರಿಗೆ ಲೇಖಕಿಯರ ಸಂಘ, ಅಂತಃಕರಣನಿಗೆ ‘ಅರಳುಮೊಗ್ಗು’ ಪ್ರಶಸ್ತಿ

ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಯನ್ನು ಪರಿಚಯಿಸಿದ ದಿ ಹೆಚ್ ವಿ ಸಾವಿತ್ರಮ್ಮ ಅವರ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಸ್ಥಾಪಿಸಿರುವ ಪ್ರಶಸ್ತಿಗೆ ದೀಪ್ತಿ ಭದ್ರಾವತಿಯವರನ್ನು ಆಯ್ಕೆ ಮಾಡಲಾಗಿದೆ.

ಜನವರಿ ೧೯ ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ವನಮಾಲಾ ಸಂಪನ್ನಕುಮಾರ್ ಅವರು ತಿಳಿಸಿದ್ದಾರೆ

 

ಅಂತಃಕರಣನಿಗೆ ‘ಅರಳುಮೊಗ್ಗು’ ಪ್ರಶಸ್ತಿ

ಕಿಶೋರ ಸಾಹಿತಿ ಅಂತಃಕರಣ ಬರೆದ  “ಮಿಂಚಿನ ಚಿಲುಮೆ” ಪುಸ್ತಕಕ್ಕೆ ಹುಬ್ಬಳ್ಳಿಯ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್‌ನ “ಅರಳು ಮೊಗ್ಗು” ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯು ಪ್ರಶಸ್ತಿಫಲಕದೊಂದಿಗೆ 25 ಸಾವಿರ ರೂಪಾಯಿ ನಗದು ಒಳಗೊಂಡಿದೆ. ಹಾವೇರಿ ಜಿಲ್ಲೆ ಶಿಗ್ಗಾಂವ್ ನ ರಾಕ್ ಗಾರ್ಡನ್ ನಲ್ಲಿ ದಿ.27 ರಂದು ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ   ಪ್ರಶಸ್ತಿ ಪ್ರದಾನ ಮಾಡುವರು.

 

 

Leave a Reply